

ಬಿಜಿಂಗ್: ಪ್ರಪಂಚದಲ್ಲಿ ಗತಕಾಲದ ವಸ್ತುಗಳಿಗೆ ಭಾರೀ ಬೆಲೆ ಇರುತ್ತದೆ. ಭೂಮಿ ಅಗೆಯುವಾಗ ಇಂತಹ ಅಮೂಲ್ಯ ವಸ್ತುಗಳು ಸಿಗುವುದುಂಟು. ಚೀನಾದಲ್ಲಿ ಹೀಗೆ ಭೂಮಿ ಅಗೆದಾಗ ವ್ಯಕ್ತಿಯೊಬ್ಬನಿಗೆ ಆಕರ್ಷಕ ಪಿಂಗಾಣಿ ಬಟ್ಟಲು ಸಿಕ್ಕಿತ್ತು.
ಆದರೆ, ಅದರ ಬೆಲೆ ಅರಿಯದ ಆತ ಸ್ಥಳೀಯ ಮಾರುಕಟ್ಟೆಯಲ್ಲಿ ಕೇವಲ 2300 ರುಪಾಯಿಗೆ ಮಾರಿ, ಅದರಲ್ಲಿ ಬಂದ ಹಣದಿಂದ ಮಜಾ ಮಾಡಿ ಮನೆಗೆ ಹೋಗಿದ್ದ. ಆದರೆ ಈ ಪಿಂಗಾಣಿ ಬಟ್ಟಲು ಅಲ್ಲಿನ ಪುರಾತತ್ವ ಸಂಸ್ಥೆಯೊಂದರ ಕಣ್ಣಿಗೆ ಬಿದ್ದಾಗ ಕಂಡು ಬಂದಿದ್ದೇ ಅಚ್ಚರಿ. ಅದನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದ ಮೇಲೆ ಅದರ ಬೆಲೆ ತಿಳಿದಿದೆ.
ಹೌದು, ಈ ಪಿಂಗಾಣಿ ಬಟ್ಟಲು ಸಾಮಾನ್ಯ ಪಿಂಗಾಣಿ ಬಟ್ಟಲು ಅಲ್ಲ. 15 ಶತಮಾನದಲ್ಲಿ ರಾಜನೊಬ್ಬ ಊಟ ಮಾಡುತ್ತಿದ್ದ ಅತ್ಯಾಕರ್ಷಕ ಪಿಂಗಾಣಿ ಬಟ್ಟಲು. ಅದರ ಮೇಲೆ ಕೆತ್ತಲಾಗಿರುವ ಸೂಕ್ಷ್ಮ ಕಲಾ ರಚನೆ ಎಂತವರಿಗೂ ಬೆರಗು ಹುಟ್ಟಿಸುತ್ತದೆ. ಆಕರ್ಷಕ ಬಣ್ಣದಲ್ಲಿ ಹೂವಿನ ಚಿತ್ತಾರದಿಂದ ಕೂಡಿರುವ ಆ ಪಿಂಗಾಣಿ ಬಟ್ಟಲು ಇದೀಗ 5.5 ಕೋಟಿ ರೂಪಾಯಿಗೆ ಹರಾಜಾಗಿದೆ.
ಈ ರೀತಿಯ ಪಿಂಗಾಣಿ ಬಟ್ಟಲು ಚೀನಾ ಹಾಗೂ ಮಂಗೋಲಿಯಾದಲ್ಲಿ ಕೇವಲ ಎಂಟರದಿಂ ಹತ್ತು ಇವೆಯಂತೆ. 15 ನೇ ಶತಮಾನದಲ್ಲಿ ಯಾಂಗ್ಲಿ ಸಾಮ್ರಾಜ್ಯದ ಮೂರನೇ ಮಿಂಗ್ ಎನ್ನುವ ರಾಜನಿಗೆ ಈ ಪಿಂಗಾಣಿ ಬಟ್ಟಲು ಸಂಬಂಧಿಸಿದ್ದಂತೆ. (ಏಜೇನ್ಸಿಸ್).