More

    ಹುಟ್ಟಿದ ಮಗುವಿನಲ್ಲಿ ಕರೊನಾ ಆ್ಯಂಟಿಬಾಡೀಸ್ ಪತ್ತೆ !

    ನ್ಯೂಯಾರ್ಕ್ : ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದಾಗ ಕರೊನಾ ಲಸಿಕೆ ತೆಗೆದುಕೊಂಡಿದ್ದರ ಪರಿಣಾಮವಾಗಿ ಹುಟ್ಟಿದ ಮಗುವಿನ ರಕ್ತದಲ್ಲಿ ಕರೊನಾ ಆ್ಯಂಟಿಬಾಡಿಗಳು ಕಂಡುಬಂದಿರುವ ಬಗ್ಗೆ ವರದಿಯೊಂದು ತಿಳಿಸಿದೆ. ಕರೊನಾ ಆ್ಯಂಟಿಬಾಡಿಗಳನ್ನು ರಕ್ತದಲ್ಲಿ ಹೊಂದಿರುವ ಮಗು ಹುಟ್ಟಿರುವ ಮೊದಲ ಬೆಳಕಿಗೆ ಬಂದಿರುವ ಪ್ರಕರಣ ಇದಾಗಿದೆ ಎಂದು ಅಮೆರಿಕದ ವೈದ್ಯರು ಹೇಳಿದ್ದಾರೆ.

    ಮೆಡ್​​ಆರ್​ಕ್ಸೀವ್ ಎಂಬ ಸರ್ವರ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ ಗರ್ಭಿಣಿ ಮಹಿಳೆಯೊಬ್ಬರು 36 ವಾರಗಳು ಮತ್ತು 3 ದಿನಗಳ ಜೆಸ್ಟೇಶನ್ ಪಿರಿಯಡ್​ನಲ್ಲಿ ಮಾಡರ್ನ ಎಂಆರ್​ಎನ್ಎ ಲಸಿಕೆಯ ಮೊದಲ ಡೋಸ್ ಪಡೆದಿದ್ದರಂತೆ. ಮೂರು ವಾರಗಳ ನಂತರ ಅವರು ಆರೋಗ್ಯಕರವಾಗಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ನವಜಾತ ಶಿಶುವಿನ ರಕ್ತದ ಪರೀಕ್ಷೆ ನಡೆಸಿದ ವೈದ್ಯರಿಗೆ ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡುವ ಆ್ಯಂಟಿಬಾಡಿಗಳು ಅದಾಗಲೇ ರಕ್ತದಲ್ಲಿರುವುದು ಕಂಡುಬಂತು ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ದತ್ತು ತಂದೆಯಿಂದ ಬಂದ ಆಸ್ತಿಯಲ್ಲಿಯೂ ಹೆಣ್ಣುಮಕ್ಕಳಿಗೆ ಪಾಲು ಕೊಡಬೇಕಾ?

    ಅಮೆರಿಕದ ಫ್ಲೋರಿಡಾ ಅಟ್ಲಾಂಟಿಕ್ ಯೂನಿವರ್ಸಿಟಿಯ ಪಾಲ್ ಗಿಲ್ಬರ್ಟ್​ ಮತ್ತು ಚಾಡ್ ರುಡ್ನಿಕ್ ಎಂಬುವರು ಈ ವರದಿಯನ್ನು ಪ್ರಕಟಿಸಿದ್ದು, “ತಾಯಿಗೆ ಕರೊನಾ ಲಸಿಕೆ ನೀಡಿದ ನಂತರ ಕಾರ್ಡ್​ ಬ್ಲಡ್​ನಲ್ಲಿ ಹರಿದುಬಂದ ಆ್ಯಂಟಿಬಾಡಿಗಳು ಮಗುವಿನಲ್ಲಿರುವ ಮೊದಲ ಪ್ರಕರಣ ಇದು” ಎಂದಿದ್ದಾರೆ. ಹೊಸ ತಾಯಿಯು ಮಗುವಿಗೆ ಪೂರ್ಣರೀತಿಯಲ್ಲಿ ಮೊಲೆಹಾಲು ಕುಡಿಸುತ್ತಿದ್ದು, 28 ದಿನಗಳ ಲಸಿಕೆ ಪ್ರೊಟೊಕಾಲ್​ನ ಅನುಸಾರವಾಗಿ ಇದೀಗ ತಮ್ಮ ಲಸಿಕೆಯ ಎರಡನೇ ಡೋಸ್ಅನ್ನು ಕೂಡ ಪಡೆದಿದ್ದಾರೆ ಎನ್ನಲಾಗಿದೆ.

    “ಈ ಹಿಂದಿನ ಅಧ್ಯಯನಗಳಲ್ಲಿ ಕೋವಿಡ್​ ಸೋಂಕಿನಿಂದ ಚೇತರಿಸಿಕೊಂಡ ತಾಯಂದಿರಿಂದ ಪ್ಲಾಸೆಂಟಾ ಮೂಲಕ ಭ್ರೂಣಕ್ಕೆ ಆ್ಯಂಟಿಬಾಡಿಗಳ ಸಾಗಣೆ ನಿರೀಕ್ಷೆಗಿಂತ ಕಡಿಮೆಯಾಗಿದ್ದು ಕಂಡುಬಂದಿತ್ತು. ಪ್ರಸ್ತುತ ಸಂಶೋಧನೆಯು ತಾಯಿಯ ವ್ಯಾಕ್ಸಿನೇಷನ್‌ನಿಂದ ಮಗುವಿಗೆ ಕೋವಿಡ್​ನಿಂದ ರಕ್ಷಣೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಇದೆ ಎಂದು ಸೂಚಿಸುತ್ತದೆ” ಎಂದು ಗಿಲ್ಬರ್ಟ್​ ಮತ್ತು ರುಡ್ನಿಕ್ ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾ ಕಂಟ್ರೋಲ್​ ಮಾಡಿ: ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ

    ಆದಾಗ್ಯೂ, ಲಸಿಕೆ ಹಾಕಿದ ತಾಯಂದಿರಿಗೆ ಜನಿಸಿದ ಶಿಶುಗಳಲ್ಲಿನ ಆ್ಯಂಟಿಬಾಡಿ ಪ್ರತಿಕ್ರಿಯೆಯನ್ನು ಅಳೆಯಲು ಹೆಚ್ಚಿನ ದೀರ್ಘಕಾಲೀನ ಅಧ್ಯಯನಗಳ ಅಗತ್ಯವಿದೆ. ನವಜಾತ ಶಿಶುಗಳಲ್ಲಿ ಈ ಆ್ಯಂಟಿಬಾಡಿಗಳ ರಕ್ಷಣಾ ಸಾಮರ್ಥ್ಯ ಮತ್ತು ತಾಯಿಗೆ ಲಸಿಕೆ ನೀಡಲು ಅತ್ಯಂತ ಸೂಕ್ತವಾದ ಸಮಯ ಯಾವುದು ಎಂಬ ಬಗ್ಗೆ ಇನ್ನೂ ತಿಳಿದಿಲ್ಲ. ಆದ್ದರಿಂದ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡುವುದರ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು ಎಂದಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts