"ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ" : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

russel
Published on

ನವದೆಹಲಿ: ವೆಸ್ಟ್ ಇಂಡೀಸ್ ಆಲ್ರೌಂಡರ್ ಕ್ರಿಕೆಟಿಗ ಆಂಡ್ರೆ ರಸೆಲ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇದು ಮುಂಬರುವ ಐಪಿಎಲ್​ 2021 ಕ್ರಿಕೆಟ್ ಬಗ್ಗೆ ಅಲ್ಲ, ಬದಲಿಗೆ 'ವಾಕ್ಸಿನ್​ಮೈತ್ರಿ'ಯ ಅಡಿಯಲ್ಲಿ ಭಾರತವು ಜಮಾಯ್ಕ ದೇಶಕ್ಕೆ ಕಳುಹಿಸಿರುವ ಕರೊನಾ ಲಸಿಕೆಗಳ ಬಗ್ಗೆ.

2021 ರ ಐಪಿಎಲ್​ಗೆ ಕೊಲ್ಕಟಾ ನೈಟ್​ ರೈಡರ್ಸ್​(ಕೆಕೆಆರ್) ತಂಡದ ಸ್ಟಾರ್ ಪ್ಲೇಯರ್​ ಆದ ಆಂಡ್ರೆ ರಸೆಲ್ ಅವರು ಭಾರತವು ಕರೊನಾ ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ "ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ" ಹೇಳಿದ್ದಾರೆ. ಈ ಬಗೆಗಿನ ರಸೆಲ್​ರ ವಿಡಿಯೋ ಸಂದೇಶವನ್ನು ಜಮಾಯ್ಕದ ಕಿಂಗ್​ಸ್ಟನ್​ನಲ್ಲಿರುವ ಭಾರತೀಯ ಹೈ ಕಮಿಷನ್ ಟ್ವಿಟರ್​ನಲ್ಲಿ ಶೇರ್ ಮಾಡಿದೆ.

"ಕರೊನಾ ಆಕ್ರಮಣಕ್ಕೆ ತುತ್ತಾಗಿರುವ ಜಗತ್ತು ಸಾಮಾನ್ಯ ಪರಿಸ್ಥಿತಿಗೆ ಮರಳಬೇಕೆಂದರೆ ಲಸಿಕೆಗಳ ಪಾತ್ರ ಮಹತ್ವದ್ದು. ಈ ದೃಷ್ಟಿಯಿಂದ ಕರೊನಾ ಲಸಿಕೆ ಭಾರತದಿಂದ ಜಮಾಯ್ಕ ತಲುಪಿರುವ ಬಗ್ಗೆ ನಾವು ಪುಳಕಿತಗೊಂಡಿದ್ದೇವೆ. ಇದನ್ನು ಜಮಾಯ್ಕಾದ ಜನರು ತುಂಬ ಪ್ರಶಂಸಿಸುತ್ತಾರೆ. ಜಮಾಯ್ಕ ಮತ್ತು ಭಾರತ... ಈಗ ಸೋದರರಾಗಿದ್ದೇವೆ" ಎಂದು ಭಾವುಕರಾಗಿ ರಸೆಲ್​ ಮಾತನಾಡಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net