ಅಂಡಾಶಯದಲ್ಲಿನ ನೀರುಗುಳ್ಳೆಗೂ, ಮಕ್ಕಳಾಗದೇ ಇರುವುದಕ್ಕೂ ಸಂಬಂಧವಿದೆಯೆ?

aptha
Published on
ನನಗೆ 25 ವರ್ಷ. ಮದುವೆಯಾಗಿ 3 ವರ್ಷವಾಯಿತು. ಇದುವರೆಗೂ ನಿಯಮಿತವಾಗಿ ಪ್ರತಿ ತಿಂಗಳು ಮುಟ್ಟಾಗುತ್ತಿದ್ದೇನೆ. ಸ್ಕ್ಯಾನಿಂಗ್ ಮಾಡಿಸಿದಾಗ ಅಂಡಾಶಯದಲ್ಲಿ ನೀರುಗುಳ್ಳೆಗಳು ಇದ್ದು ಅದಕ್ಕೆ ಮಾತ್ರೆಗಳನ್ನು ನೀಡಿದ್ದಾರೆ. ನನಗೆ ಈಗಿರುವ ಆತಂಕವೆಂದರೆ ನಮಗೆ ಮಕ್ಕಳಾಗುತ್ತದೆಯೇ? ಈ ನೀರುಗುಳ್ಳೆಗಳು ಏಕೆ ಉಂಟಾಗುತ್ತವೆ? ಇದರ ಪರಿಣಾಮ ಮತ್ತು ಪರಿಹಾರ ತಿಳಿಸಿ. 

ಉತ್ತರ: ನಿಮಗೆ ಪಿಸಿಓಡಿ ಸಮಸ್ಯೆಯಿದೆ. ಇದು ಅನೇಕ ಯುವತಿಯರಲ್ಲಿ ಕಂಡುಬರುತ್ತಿದೆ. ಬದಲಾದ ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ ರಸದೂತಗಳಲ್ಲಿ ಏರುಪೇರು ಉಂಟಾಗಿ ಪಿಸಿಓಡಿ ಸಮಸ್ಯೆ ಕಂಡುಬರುತ್ತಿದೆ. ನಿಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಿ.

ಅಂದರೆ ಜಂಕ್‍ಫುಡ್ ಸೇವನೆಯನ್ನು ಮೊದಲು ನಿಲ್ಲಿಸಿ. ಸೊಪ್ಪು, ತರಕಾರಿ, ಮೊಳಕೆಕಾಳು, ಹಣ್ಣುಗಳನ್ನು ಹೆಚ್ಚು ಸೇವಿಸಿ. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಇಲ್ಲವೇ ನಡಿಗೆ ರೂಢಿಸಿಕೊಳ್ಳಿ. ದಿನಕ್ಕೆ 3 ಲೀ. ನೀರು ಕುಡಿಯಿರಿ. ಒಮ್ಮೆ ರಕ್ತ ಪರೀಕ್ಷೆ ಮಾಡಿಸಿ ಥೈರಾಯ್ಡ್ ಸಮಸ್ಯೆ ಇದೆಯೇ ಎಂದು ತಿಳಿದುಕೊಳ್ಳಿ. ಆಯುರ್ವೇದಲ್ಲಿ ಉತ್ತಮ ಚಿಕಿತ್ಸೆ ಇದೆ.

ಪಂಚಕರ್ಮ ಮತ್ತು ಔಷಧ ಚಿ ಕಿತ್ಸೆ ಎರಡೂ ಬೇಕಾಗುತ್ತದೆ. 3ರಿಂದ 6 ತಿಂಗಳ ಕಾಲ ಚಿಕಿತ್ಸೆ ಪಡೆದಲ್ಲಿ ನೀರುಗುಳ್ಳೆಗಳು ಕರಗುತ್ತವೆ. ಅಲ್ಲದೇ ಮಕ್ಕಳಾಗುವುದಕ್ಕೂ ಯಾವುದೇ ತೊಂದರೆಯಿರುವುದಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net