VIDEO| 150 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ ನೆಲಸಮ!

Hindu Temple
Published on

ಕರಾಚಿ: ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿ 150 ವರ್ಷಗಳಷ್ಟು ಹಳೆಯದಾದ ಪವಿತ್ರ ದೇವಾಲಯವಾದ ಮಾರಿ ಮಾತಾ ದೇವಾಲಯವನ್ನು ನೆಲಸಮ ಮಾಡಲಾಗಿದೆ.

ಮಾರಿ ಮಾತಾ ದೇವಸ್ಥಾನವು ಮುಖಿ ಚೋಹಿತ್ರಮ್ ರಸ್ತೆಯಲ್ಲಿದೆ. ಸೋಲ್ಜರ್ ಬಜಾರ್ ಪೊಲೀಸ್ ಠಾಣೆಗೆ ಬಹಳ ಹತ್ತಿರದಲ್ಲಿದೆ. ಬುಲ್ಡೋಜರ್‌ನಿಂದ ದೇವಸ್ಥಾನ ಕೆಡವುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರು ವ್ಯಾನ್‌ಗಳಲ್ಲಿ ಬಂದು ರಕ್ಷಣೆ ನೀಡಿದ್ದರು ಎನ್ನಲಾಗಿದೆ.

ಶುಕ್ರವಾರ ತಡರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದೆ. ಬುಲ್ಡೋಜರ್‌ ಬಳಸಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ಹೊರಗಿನ ಗೋಡೆಗಳು ಮತ್ತು ಮುಖ್ಯ ಗೇಟ್ ಅನ್ನು ಹಾಗೆಯೇ ಬಿಟ್ಟು, ಒಳಗಿನ ದೇವಾಲಯದ ಸಂಪೂರ್ಣ ರಚನೆಯನ್ನು ಕೆಡವಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯರಾದ ಶ್ರೀರಾಮ್ ನಾಥ್ ಮಿಶ್ರ ಮಹಾರಾಜ್ ಪ್ರತಿಕ್ರಿಯಿಸಿ, ಈ ದೇವಾಲಯವನ್ನು ಇದನ್ನು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರ ಅಂಗಳದಲ್ಲಿ ಹೂತಿಟ್ಟಿರುವ ಹಳೆಯ ನಿಧಿಗಳ ಬಗ್ಗೆ ನಾವು ಕಥೆಗಳನ್ನು ಕೇಳಿದ್ದೇವೆ. ಕೆಲವು ಸಮಯದಿಂದ ಅದರ ಮೇಲೆ ಕಣ್ಣಿಟ್ಟಿದ್ದವು ಈ ಕೆಲಸ ಮಾಡಿರಬಹುದು ಎಂದು ದೂರಿದ್ದಾರೆ.

ಮಂದಿರವು ಕರಾಚಿಯ ಮದ್ರಾಸಿ ಹಿಂದೂ ಸಮುದಾಯದ ನಿರ್ವಹಣೆಯಲ್ಲಿತ್ತು. ಇದು ಅತ್ಯಂತ ಹಳೆಯ ದೇವಾಲಯವಾಗಿದ್ದರಿಂದ ಸ್ವಲ್ಪ ಶಿಥಿಲಾವಸ್ತೆಗೊಂಡಿತ್ತು. ದೇವಾಲಯ ನವೀಕರಣಕ್ಕಾಗಿ ಅಲ್ಲಿದ್ದ ಹಿಂದೂ ದೇವರ ವಿಗ್ರಹಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮಾರಿ ಮಾತಾ ದೇವಾಲಯವನ್ನು ಕೆಡವಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net