ಈತ ನನ್ನ ತುಟಿಗಳ ಕುರಿತು ಅಸಹ್ಯವಾಗಿ ಮಾತನಾಡಿದ್ದಾನೆ; ಈ ಕೆಟ್ಟ ಅನುಭವ ಮಾತ್ರ ಮರೆತಿಲ್ಲವೆಂದು ಭಾವುಕರಾದ ಖ್ಯಾತ ನಟಿ!

sumona chakravarti
Published on

ಮುಂಬೈ: ನಟಿ ಸುಮೋನಾ ಚಕ್ರವರ್ತಿ ಕಪಿಲ್ ಶರ್ಮಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಷೋನಲ್ಲಿ ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ನಡಿಸುತ್ತಿದ್ದರು. ಆದರೆ ಅದೊಮ್ಮೆ ತಾವು ಕಪಿಲ್​ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಸಂದರ್ಶನವೊಂದರಲ್ಲಿ ಈ ಬಹಿರಂಗಪಡಿಸಿದ್ದಾರೆ.

ದಿ ಹ್ಯಾಬಿಟ್ ಕೋಚ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, 'ಮೊದಲು ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ಡೈಲಾಗ್​ ಮರೆತಿದ್ದೆ. ಆಗ ಕಪಿಲ್​ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು.ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೆ ಮರೆತಿಲ್ಲ ಎಂದಿದ್ದಾರೆ.

'ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಅದು ಅವಮಾನ ಆಗುತ್ತದೆ. ಕಪಿಲ್ ಶರ್ಮಾ ಅವರೊಂದಿಗೆ ತೆರೆಮರೆಯಲ್ಲಿ ಎಲ್ಲವೂ ಮೋಜು ಮತ್ತು ಆಟವಾಗಿರುತ್ತದೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ದುರದೃಷ್ಟಕರ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು. ಈ ರೀತಿ ಕಮೆಂಟ್ ಮಾಡಿರುವ ಬಗ್ಗೆ ಎಲ್ಲರೂ ಆಡಿಕೊಳ್ಳುವಂತಾಗಿದೆ' ಎಂದಿದ್ದಾರೆ.

'ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ನಂತರ ಅರ್ಚನಾ ಪುರಣ್ ಸಿಂಗ್ ಅವರು ತಮ್ಮ ಕೂರಿಸಿ ಸಮಾಧಾನಪಡಿಸಿದರು. ಆದರೂ ನನ್ನ ನೋವು ಕಡಿಮೆ ಆಗಿರಲಿಲ್ಲ' ಎಂದು ಸುಮೋನಾ ಹೇಳಿದ್ದಾರೆ.

ಈ ಶೋನಲ್ಲಿ ಕಪಿಲ್ ಮತ್ತು ಸುಮೋನಾ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಸುಮೋನಾ ಮತ್ತು ಕಪಿಲ್ ಉತ್ತಮ ಸ್ನೇಹಿತರೇ. ತಮಾಷೆ ಮಾಡುವ ಮೂಲಕ ತಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಎಂದು ಸುಮೋನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net