VIDEO| ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿದ ಮಹಿಳೆ ಸಾವು!

Woman swept away with sea wave while taking selfie with husband dies
Published on

ಮುಂಬೈ: ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಮುದ್ರದ ನೀರಿನ ಅಲೆಗೆ ಸಿಲುಕಿ ಮುಳುಗುತ್ತಿರುವ ಆಘಾತಕಾರಿ ವಿಡಿಯೋ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಮಹಿಳೆಯನ್ನು ಜ್ಯೋತಿ ಸೋನಾರ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಮುಖೇಶ್ ಸೋನಾರ್ ಮತ್ತು ಅವರ ಮಕ್ಕಳು ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಬಾಂದ್ರಾ ಕೋಟೆಗೆ ತೆರಳಿದ್ದಾರೆ. ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಜುಲೈ 9 ರಂದು ಈ ದುರಂತ ಘಟನೆ ಸಂಭವಿಸಿದೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಮಹಿಳೆ ತನ್ನ ಪತಿಯೊಂದಿಗೆ ಸಮುದ್ರದ ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು, ಆಗ ಸಮುದ್ರದ ದೊಡ್ಡ ಅಲೆಯೊಂದು ಅವಳಿಗೆ ಅಪ್ಪಳಿಸಿತು. ಮಳಿ ಪತಿ ಜತೆಗೆ ಕುಳಿತು ಸಮುದ್ರದ ಅಲೆ ಅಪ್ಪಳಿಸುವುದನ್ನು ಎಂಜಾಯ್​​ ಮಾಡುತ್ತಿದ್ದಳು. ಆದರೆ ಜೋರಾಗಿ ಅಲೆ ಅಪ್ಪಳಿಸಿದ ಹೋಡೆತಕ್ಕೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾಳೆ. ಅಲ್ಲೇ ಇದ್ದ ಅವರ ಮಗು ಮಮ್ಮಿ.. ಮಮ್ಮಿ ಎಂದು ಕೂಗುತ್ತಿರುವುದು ಕೇಳುತ್ತದೆ. ಅಲ್ಲಿ ನಿಂತಿದ್ದ ಜನರು ಪತಿಯನ್ನು ರಕ್ಷಿಸಿದ್ದಾರೆ. ಆದರೆ ಮಹಿಳೆ ಕೊಚ್ಚಿಹೋಗಿದ್ದಾಳೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಗಾಗಿ ಹುಡುಕಾಟ ಆರಂಭಿಸಿದರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net