ನಿತ್ಯಾ ಮೆನನ್ ಮನೆಯಲ್ಲಿ ಸೂತಕದ ಛಾಯೆ; ಅಜ್ಜಿಯನ್ನು ನೆನೆದು ಭಾವುಕರಾದ ನಟಿ

nithyamenen
Published on

ಹೈದರಾಬಾದ್​​​: ನಟಿ ನಿತ್ಯಾ ಮೆನನ್ ಅಜ್ಜಿ ತೀರಿಕೊಂಡಿದ್ದಾರೆ. ಈ ವಿಷಯವನ್ನು ನಿತ್ಯಾ ಮೆನನ್ ಸಾಮಾಜಿಕ ಜಾಲತಾಣದಲ್ಲಿ ಅಜ್ಜಿಯ ಫೋಟೋವನ್ನು ಶೇರ್​​ ಮಾಡಿಕೊಂಡು ಭಾವುಕರಾಗಿದ್ದಾರೆ.

ತುಂಬಾ ಪ್ರೀತಿಸುತ್ತಿದ್ದ ನಿತ್ಯಾ ಅಜ್ಜಿ ತೀರಿಕೊಂಡರು. ನಿತ್ಯಾ ಈ ಮೊದಲೇ ಅಜ್ಜನನ್ನು ಕಳೆದುಕೊಂಡಳು. ಈಗ ಇವರಿಬ್ಬರು ಜತೆಗಿಲ್ಲ ಎನ್ನುವುದನ್ನು ನಿತ್ಯಾ ಮೆನನ್​​ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

"ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ. ತಮ್ಮ ಅಜ್ಜ, ಅಜ್ಜಿಯ ಜತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ದುಖಃದಲ್ಲಿರುವ ನಟಿಗೆ ಧೈರ್ಯ ಹೇಳಿದ್ದಾರೆ.

ನಿತ್ಯಾ ಮೆನನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಮಲಯಾಳಂ ಹಾಗೂ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳ ಜತೆಗೆ ಹಲವು ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. ಅಲ್ಲದೆ, ಅವರು ತೆಲುಗು OTT ಪ್ಲಾಟ್‌ಫಾರ್ಮ್​​​ನಲ್ಲೂ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net