More

    ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವಲ್ಲಿ ಇಸ್ರೋ ಯಶಸ್ವಿ

    ತಿರುವನಂತಪುರ: ಭೂಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಜ್ಞಾನಿಗಳು ಮೊದಲ ಹಂತದ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

    ಪ್ರಪಲ್ಶನ್ ಮಾಡ್ಯೂಲ್​ನಲ್ಲಿ ಇಂಧನವನ್ನು ಸುಡುವ ಮೂಲಕ ಅದಕ್ಕೆ ಅಗತ್ಯವಾದ ನೂಕು ಬಲವನ್ನು ನೀಡಿ ಈ ಹಂತವನ್ನು ಶನಿವಾರ ಪೂರ್ಣಗೊಳಿಸಲಾಗಿದೆ. ಸದ್ಯ ಬಾಹ್ಯಾಕಾಶ ನೌಕೆಯ ಸ್ಥಿತಿ ಉತ್ತಮವಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್​ ಮತ್ತು ಕಮಾಂಡ್​ ನೆಟ್​ವರ್ಕ್ ಸೆಂಟರ್​ನಿಂದ ನೌಕೆಯನ್ನು ಕಕ್ಷೆಗೆ ಏರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ.​ ಇದೇ ಸಂದರ್ಭದಲ್ಲಿ ಇಸ್ರೋ LVM3 ರಾಕೆಟ್ ಬಳಸಿ ಚಂದ್ರಯಾನ 3 ಉಡಾವಣೆ ಮಾಡಿದ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ರಾಕೆಟ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಇದರಲ್ಲಿ ರಾಕೆಟ್​ನ ಭಾಗಗಳನ್ನು ಬೇರ್ಪಡಿಸಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುತ್ತಿರುವ ದೃಶ್ಯಗಳಿವೆ.

    ಇದನ್ನೂ ಓದಿ: 23 ಲಕ್ಷ ಕಾರ್ಡ್​ದಾರರಿಗೆ ಸಿಗುವುದಿಲ್ಲ ಧನಭಾಗ್ಯ: 3 ತಿಂಗಳಿಂದ ರೇಷನ್ ಪಡೆಯದಿದ್ದರೆ ಯೋಜನೆಯಿಂದ ಹೊರಗೆ

    ಅಂದಹಾಗೆ ಚಂದ್ರಯಾನ 3 ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 15 ವರ್ಷದಲ್ಲಿ ಚಂದ್ರನ ಅಧ್ಯಯನಕ್ಕೆ ಕಳುಹಿಸುತ್ತಿರುವ ಮೂರನೇ ನೌಕೆ ಇದಾಗಿದ್ದು, ‘ಬಾಹುಬಲಿ’ ಎಂದು ಕರೆಯಲಾಗುವ ಎಲ್​ವಿಎಂ3-ಎಂ4 (ಜಿಎಸ್​ಎಲ್​ವಿಎಂಕೆ-3) ರಾಕೆಟ್ ಇದನ್ನು ಹೊತ್ತೊಯ್ದಿದೆ. ಇದರಲ್ಲಿ ಮೂರು ಭಾಗಗಳಿದ್ದು, ರಾಕೆಟ್​ಗೆ ಅಗತ್ಯ ಇಂಧನ ಒದಗಿಸುವ ಪ್ರಪಲ್ಶನ್, ಗಗನನೌಕೆಯಲ್ಲಿ ಮಹತ್ವದ್ದಾದ ಲ್ಯಾಂಡರ್ ಮತ್ತು ರೋವರ್​ಗಳು ಸೇರಿ 3,900 ಕೆ.ಜೆ. ತೂಕ ಹೊಂದಿತ್ತು. ಉಡಾವಣೆಯಾದ 16 ನಿಮಿಷದಲ್ಲಿ ರಾಕೆಟ್​ನಿಂದ ನೌಕೆ ಬೇರ್ಪಟ್ಟಿದೆ. ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಮೃದುವಾಗಿ ಇಳಿಯಲಿದೆ (ಸಾಫ್ಟ್ ಲ್ಯಾಂಡಿಂಗ್). 2019ರಲ್ಲಿ ಚಂದ್ರಯಾನ-2 ಈ ರೀತಿಯ ಲ್ಯಾಂಡಿಂಗ್​ನಲ್ಲಿ ವಿಫಲವಾಗಿತ್ತು. (ಏಜೆನ್ಸೀಸ್​)

    ಚಂದ್ರಯಾನ-3: ಯಶಸ್ವಿ ಉಡಾವಣೆ; 16 ನಿಮಿಷಕ್ಕೆ ರಾಕೆಟ್​ನಿಂದ ಬೇರ್ಪಟ್ಟ ನೌಕೆ, ಚಂದ್ರನಲ್ಲಿಗೆ 40 ದಿನದ ಪಯಣ

    ಕಾನೂನು ಹೋರಾಟಕ್ಕೆ ಸುದೀಪ್ ಸಜ್ಜು: ಸಂಧಾನಕ್ಕೆ ಒಪ್ಪದ ಕಿಚ್ಚ ಕೋರ್ಟ್​ ಮೆಟ್ಟಿಲೇರಲು ಇದೇ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts