More

    ಕಾನೂನು ಹೋರಾಟಕ್ಕೆ ಸುದೀಪ್ ಸಜ್ಜು: ಸಂಧಾನಕ್ಕೆ ಒಪ್ಪದ ಕಿಚ್ಚ ಕೋರ್ಟ್​ ಮೆಟ್ಟಿಲೇರಲು ಇದೇ ಕಾರಣ!

    ಬೆಂಗಳೂರು: ನಿರ್ಮಾಪಕರಿಂದ ಸಾಲು ಸಾಲು ಆರೋಪಗಳ ನಡುವೆಯೂ ಒಂದೇ ಒಂದು ಮಾತನಾಡದೇ ಕೇವಲ ಟ್ವೀಟ್​ ಹಾಗೂ ಪತ್ರದ ಮೂಲಕ ಉತ್ತರಿಸಿ ಸುಮ್ಮನಾಗಿದ್ದ ನಟ ಕಿಚ್ಚ ಸುದೀಪ್,​ ನಿನ್ನೆ (ಜು.16) ಕೋರ್ಟ್​ ಮುಂದೆ ಪ್ರತ್ಯಕ್ಷರಾಗುವ ಮೂಲಕ ಸುದ್ದಿಯಾಗಿದ್ದಲ್ಲದೆ, ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ವಿರುದ್ಧ ಗುಡುಗಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನಕ್ಕೆ ಒಪ್ಪದ ಕಿಚ್ಚ, ಕೋರ್ಟ್​ ಮೆಟ್ಟಿಲೇರಿದ್ದೇಕೆ? ಕಿಚ್ಚನ ಈ ನಿಲುವಿನ ಹಿಂದಿರುವ ಕಾರಣವೇನು? ಕೊರ್ಟ್​ ಮೆಟ್ಟಿಲೇರಲು ಪ್ರೇರೆಪಿಸಿದ ಅಂಶ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಎಂ.ಎನ್​. ಕುಮಾರ್ ಆರೋಪವೇನು?​

    ಮೊದಲಿಗೆ ಆರೋಪಗಳ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ. ಕಿಚ್ಚನ ಜತೆ ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾ ಸೇರಿದಂತೆ ಹಲವು ಹಿಟ್​ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಎಂ.ಎನ್​. ಕುಮಾರ್​ ಕಳೆದ ವಾರ ಇದ್ದಕ್ಕಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸುದೀಪ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗೆ ಅಡ್ವಾನ್​ ಪಡೆದು ಸಿನಿಮಾ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಎಷ್ಟೇ ಬಾರಿ ಮನೆಗೆ ಹೋದರು ನಮಗೆ ಸ್ಪಂದಿಸುತ್ತಿಲ್ಲ. ಅವರಿಂದ ಸಾಕಷ್ಟು ಹಣ ನಷ್ಟವಾಗಿದೆ. ಮನೆಯ ಅಡುಗೆ ಕೋಣೆ ರಿಪೇರಿಗೆಂದು 10 ಕೋಟಿ ರೂ. ಹಣ ನೀಡಿದ್ದೇನೆ. ಅದ್ಯಾವುದನ್ನು ನೀಡದೆ, ಸಿನಿಮಾ ಮಾಡಿಕೊಡದೆ ಸುದೀಪ್​ ಸತಾಯಿಸುತ್ತಿದ್ದಾರೆ ಎಂದು ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರ್​ ಆರೋಪಗಳ ಸುರಿಮಳೆಗೈದರು.

    ಇದನ್ನೂ ಓದಿ: ಪತ್ನಿ ಜತೆ ಮಲಗುವಾಗಲೆಲ್ಲ ಜತೆಯಲ್ಲಿ ಮಚ್ಚು ಇಟ್ಟುಕೊಳ್ತಿದ್ದ ಗಂಡನಿಂದ ನಡದೇ ಹೋಯಿತು ಘೋರ ಕೃತ್ಯ!

    ರೆಹಮಾನ್​ ಆರೋಪ

    ಎಂ.ಎನ್​. ಕುಮಾರ್​ ಬಳಿಕ ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್​ ಕೂಡ ಸುದೀಪ್​ ವಿರುದ್ಧ ಸುದ್ದಿಗೋಷ್ಠಿ ನಡೆಸಿ 35 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಸುದೀಪ್​ ಜತೆ ಸಿನಿಮಾ ಮಾಡಲು ಹಿಂದಿ ಸಿನಿಮಾವೊಂದರ ರೈಟ್ಸ್​ ತಂದಿದ್ದೆ ಆದರೆ, ಸುದೀಪ್​ ಸಿನಿಮಾಗೆ ಒಪ್ಪಲಿಲ್ಲ. ಅವರು ಹೇಳಿದರೂ ಅಂತ ರೈಟ್ಸ್​ ತಂದಿದ್ದೆ. ಇದರಿಂದ ನನಗೆ 35 ಲಕ್ಷ ರೂ. ಹಣ ನಷ್ಟವಾಗಿದೆ. ನಾನು ಮತ್ತು ನನ್ನ ಮಗಳು ಸುದೀಪ್​ ಅವರನ್ನು ಭೇಟಿಯಾಗಲು ಹೋದಾಗ ಸರಿಯಾಗಿ ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ.

    ಮಾನನಷ್ಟ ಮೊಕದ್ದಮ್ಮೆ

    ಈ ಆರೋಪಗಳ ಬೆನ್ನಲ್ಲೇ ಸುದೀಪ್​​ ಟ್ವೀಟ್​ ಮೂಲಕ ನಯವಾಗಿಯೇ ಎಚ್ಚರಿಕೆ ನೀಡಿದ್ದರು. ಅಲ್ಲದೆ, ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ, ಈ ಪ್ರಕರಣ ಕೋರ್ಟ್​ನಲ್ಲೇ ಇತ್ಯರ್ಥವಾಗಲಿ ಎಂದು ಹೇಳಿ ನಿರ್ಮಾಪಕ ಎಂ.ಎನ್​. ಕುಮಾರ್​ ವಿರುದ್ಧ ನ್ಯಾಯಾಲಯದಲ್ಲಿ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮ್ಮೆಯನ್ನು ಸುದೀಪ್​ ಹೂಡಿದ್ದಾರೆ.

    ಕಾನೂನು ಸಮರಕ್ಕೆ ಕಿಚ್ಚ ಸಜ್ಜಾಗಿದ್ದೇಕೆ?

    ಕೊನೆಗೂ ಕೋರ್ಟ್ ಕಟಕಟೆಯಲ್ಲಿ ಹೋರಾಟಕ್ಕೆ ಸಜ್ಜಾಗಿರುವ ಕಿಚ್ಚ ನಿನ್ನೆ ನ್ಯಾಯಾಲಯದ ಮುಂದೆ ಹಾಜರಾಗಿ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ. ಜುಲೈ 17ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಾಲಯದಿಂದ ಹೊರಡುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಕಿಚ್ಚ, 27 ವರ್ಷಗಳ ಸಿನಿ ಜರ್ನಿಯಲ್ಲಿ ಗಳಿಸಿದ ಗೌರವವನ್ನು ಮಣ್ಣುಪಾಲು ಆಗಲು ಬಿಡುವುದಿಲ್ಲ ಎಂದು ಗುಡುಗಿದರು. ಕಿಚ್ಚನ ಈ ಆಕ್ರೋಶಕ್ಕೆ ಕಾರಣ ಏನು ಎಂಬುದು ಮುಂದಿದೆ ಓದಿ.

    ಇದನ್ನೂ ಓದಿ: ನಾಯಕತ್ವವಿಲ್ಲದೆ ಕಳಾಹೀನ: 18ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಸಾಧ್ಯತೆ

    ಸೋಲನ್ನು ಒಪ್ಪಿಕೊಂಡತಾಗುತ್ತದೆ 

    ಚಲನಚಿತ್ರ ವಾಣಿಜ್ಯ ಮಂಡಳಿ ನೋಟಿಸ್​ ನೀಡಿದರೂ ಕಿಚ್ಚ ಸ್ಪಂದಿಸದಿರಲು ಕಾರಣ ಏನೆಂದರೆ, ಒಂದು ವೇಳೆ ಫಿಲ್ಮ್‌ ಚೇಂಬರ್​ನಲ್ಲಿ‌ ಸಂಧಾನವಾದರೆ ಸೋಲನ್ನು ಒಪ್ಪಿಕೊಂಡತಾಗುತ್ತದೆ ಎಂದು ಸಂಧಾನ ಸಭೆಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ಮುಂದೆ ಬೀದಿಯಲ್ಲಿ ನಿಂತು ವಿವಾದ ಎಬ್ಬಿಸುವವರಿಗೆ ಎಚ್ಚರಿಕೆ ಕೊಡಲು ಕಿಚ್ಚ ಮುಂದಾಗಿದ್ದಾರೆ.

    ಸಂಧಾನದ ಮಾತೇ ಇಲ್ಲ 

    ಸುದೀಪ್ ತೇಜೋವಧೆಗೆ ಅವರ ಸೂಪರ್​ ಹಿಟ್ ಸಿನಿಮಾಗಳ ಹೆಸರುಗಳನ್ನೇ ಕುಮಾರ್ ಬಳಸಿಕೊಂಡಿದ್ದು, ಹೊಸ ನಿರ್ಮಾಪಕರ ದೃಷ್ಟಿಯಲ್ಲಿ ಸುದೀಪ್‌ ಬಗ್ಗೆ ಕಪ್ಪು ಚುಕ್ಕೆ ತರಲು ಯತ್ನಿಸಿದ್ದಾರೆ. ಹಳೆಯ ದ್ವೇಷ ಈಗ ಮುನ್ನೆಲೆಗೆ ಬಂದಿದ್ದು, ಇಷ್ಟು ದಿನ ಸುಮ್ಮನಿದ್ದ ನಿರ್ಮಾಪಕ ರೆಹಮಾನ್ ಕೂಡ ಸುದೀಪ್​ ವಿರುದ್ಧ ಆರೋಪ ಮಾಡಿದರು. ಇದೀಗ ಸಂಧಾನದ ಮಾತೇ ಇಲ್ಲ ಎಂದು ಕಿಚ್ಚ ಖಡಕ್​ ಸಂದೇಶ ರವಾನಿಸಿದ್ದಾರೆ. ಇತ್ತ ಕುಮಾರ್​ಗೂ ಬೇರೆ ದಾರಿ ಇಲ್ಲದೆ ಕೋರ್ಟ್​ ಮೆಟ್ಟಿಲೇರಬೇಕಿದೆ. ಅತ್ತ ಸಾಕ್ಷಿ ಸಮೇತ ಅಖಾಡದಲ್ಲಿ ಫೈಟ್ ಮಾಡಲು ಕಿಚ್ಚ ರೆಡಿಯಾಗಿದ್ದಾರೆ.

    ಭವಿಷ್ಯದಲ್ಲಿ ಮರುಕುಳಿಸಬಾರದು 

    ಕಿಚ್ಚ ಈ ಪರಿ ಕೆಂಡಾಮಂಡಲವಾಗಿದ್ಯಾಕೆ? ಯಾವುದೇ ಕಾರಣ ಇಲ್ಲದೆ ಅಭಿಮಾನಿಗಳ ಮುಂದೆ ಸೋಲಪ್ಪಿಕೊಳ್ಳಲು ಸುದೀಪ್ ಸುತಾರಾಂ ತಯಾರಿಲ್ಲ. ಭವಿಷ್ಯದಲ್ಲಿ ಈ ಘಟನೆಗಳು ಮರುಕುಳಿಸಬಾರದು ಅಂತ ಸುದೀಪ್​ ಈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಮಾಜದ ಮುಂದೆ ಸ್ಟಾರ್ ವಾಲ್ಯೂಗೆ ಧಕ್ಕೆ ತಂದಿದ್ದೇ ಕಿಚ್ಚನ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ದಾಖಲೆಗಳಿಲ್ಲದಿದ್ದರೂ ನಿರ್ಮಾಪಕರು ಸಾಲು ಸಾಲು ಸುದ್ದಿಗೋಷ್ಠಿ ನಡೆಸಿದ್ದು ಕಿಚ್ಚನ ಆಕ್ರೋಶಕ್ಕೆ ಕಾರಣವಾಗಿದೆ.

    ಮಡದಿಯನ್ನು ಎಳೆದುತಂದಿದ್ದೇ ಕಿಚ್ಚಿಗೆ ಕಾರಣ

    ಇದಿಷ್ಟೇ ಅಲ್ಲದೆ, ಈ ವಿವಾದಕ್ಕೆ ಕುಟುಂಬದವರನ್ನು ಎಳೆದುತಂದಿದ್ದರಿಂದ ಕಿಚ್ಚನ ಆಕ್ರೋಶ ಕಟ್ಟೆ ಒಡೆದು, ಕೋರ್ಟ್​ ಮೆಟ್ಟಿರುವಂತೆ ಮಾಡಿತು ಎನ್ನಲಾಗಿದೆ. ಕಿಚ್ಚನ ಮಡದಿ ಪ್ರಿಯಾರನ್ನು ಎಳೆದು ತಂದಿದ್ದು ಕಿಚ್ಚನ‌ ಕಿಚ್ಚಿಗೆ ಕಾರಣವಾಗಿದೆ. ಈಗಾಗಲೇ ಈ ಪ್ರಕರಣದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡ ಇದೆ. ಇಡೀ ಪ್ರಕರಣದ ಮಾಸ್ಟರ್​ ಮೈಂಡ್​ ಅವರೇ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಗಂಭೀರ ಆರೋಪ ಮಾಡಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಸಮಯದಲ್ಲಿ ನಡೆದು ಘಟನೆಗಳು ಕೂಡ ಇದಕ್ಕೆ ಪುಷ್ಠಿ ನೀಡುವಂತಿದೆ. ಇದೀಗ ಸೂರಪ್ಪ‌ ಬಾಬು ಮತ್ತೊಂದು ಕತೆ ಹೆಣೆಯೋ ಮುಂಚೆಯೇ ಕಿಚ್ಚ ಮಾನನಷ್ಟ ಮೂಲಕ ಕೌಂಟರ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ವಿಚಿತ್ರ ಬೆಳಕು: ಪುದುಚೇರಿಯ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ ಯುವಜೋಡಿಗೆ 2ನೇ ದಿನ ಕಾದಿತ್ತು ಬಿಗ್​ ಶಾಕ್​!

    ಕಿಚ್ಚ 46 ಬಳಿಕ ಶುರು

    ಅಂದಹಾಗೆ ಇಷ್ಟು ದಿನ ಸುಮ್ಮನಿದ್ದ ಕುಮಾರ್​ ಅವರು ದಿಢೀರನೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ನಿಮಗೆ ಗೊತ್ತಿರಹುದು. ಜುಲೈ 2ರಂದು ಕಿಚ್ಚನ 46ನೇ ಸಿನಿಮಾದ ಟೀಸರ್​ ಬಿಡುಗಡೆಯಾಯಿತು. ಈ ಟೀಸರ್​ ಎಲ್ಲೆಡೆ ಭಾರೀ ಸದ್ದು ಮಾಡಿತು. ಆದರೆ, ಈ ಸಿನಿಮಾ ನಿರ್ಮಿಸುತ್ತಿರುವುದು ಕನ್ನಡದ ನಿರ್ಮಾಪಕರಲ್ಲ. ಬದಲಿಗೆ ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ತನು. ತಮಿಳು ನಿರ್ಮಾಪಕರಿಗೆ ಸುದೀಪ್​ ಡೇಟ್​ ಕೊಟ್ಟಿರುವುದರಿಂದ ಕನ್ನಡದ ಕೆಲ ನಿರ್ಮಾಪಕರಲ್ಲಿ ಅಸಮಾಧಾನ ಭುಗಿಲೆದ್ದಿರಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ವಾದವಿದೆ. ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

    Kiccha Sudeep Vs Producer: ಪರೋಕ್ಷವಾಗಿ ನಿರ್ಮಾಪಕನಿಗೆ ತಿರುಗೇಟು ಕೊಟ್ಟ ಸುದೀಪ್

    Ba Ma Harish Reacts On Kiccha Sudeep Case | ಸುದೀಪ್ ಕೇಸ್ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಬಾಮ ಹರೀಶ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts