More

    ಚಂದ್ರಯಾನ-3: ಯಶಸ್ವಿ ಉಡಾವಣೆ; 16 ನಿಮಿಷಕ್ಕೆ ರಾಕೆಟ್​ನಿಂದ ಬೇರ್ಪಟ್ಟ ನೌಕೆ, ಚಂದ್ರನಲ್ಲಿಗೆ 40 ದಿನದ ಪಯಣ

    ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಾನ್ವೇಷಣೆ ಯೋಜನೆ ’ಚಂದ್ರಯಾನ-3’ ಶ್ರೀಹರಿಕೋಟಾದಿಂದ ಶುಕ್ರವಾರ ಮಧ್ಯಾಹ್ನ ನಿಗದಿತ 2.35ಕ್ಕೆ ಕರಾರುವಾಕ್ಕಾಗಿ ಉಡಾವಣೆಯಾಗಿ ಭೂ ಕಕ್ಷೆಯನ್ನು ದಾಟಿ ಬಾಹ್ಯಾಕಾಶದಲ್ಲಿ ಮುನ್ನಡೆದಿದೆ. 40 ದಿನದ ನಂತರ ಅದು ಚಂದ್ರನ ದಕ್ಷಿಣ ಧ್ರುವ ತಲುಪಲಿದೆ. ಈ ಉಡಾವಣೆಯ 25.30 ತಾಸಿನ ಕ್ಷಣಗಣನೆ ಗುರುವಾರ ಮಧ್ಯಾಹ್ನದಿಂದಲೇ ಆರಂಭವಾಗಿತ್ತು.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 15 ವರ್ಷದಲ್ಲಿ ಚಂದ್ರನ ಅಧ್ಯಯನಕ್ಕೆ ಕಳುಹಿಸುತ್ತಿರುವ ಮೂರನೇ ನೌಕೆ ಇದಾಗಿದ್ದು, ‘ಬಾಹುಬಲಿ’ ಎಂದು ಕರೆಯಲಾಗುವ ಎಲ್​ವಿಎಂ3-ಎಂ4 (ಜಿಎಸ್​ಎಲ್​ವಿಎಂಕೆ-3) ರಾಕೆಟ್ ಇದನ್ನು ಹೊತ್ತೊಯ್ದಿದೆ. ಇದರಲ್ಲಿ ಮೂರು ಭಾಗಗಳಿದ್ದು, ರಾಕೆಟ್​ಗೆ ಅಗತ್ಯ ಇಂಧನ ಒದಗಿಸುವ ಪ್ರಪಲ್ಶನ್, ಗಗನನೌಕೆಯಲ್ಲಿ ಮಹತ್ವದ್ದಾದ ಲ್ಯಾಂಡರ್ ಮತ್ತು ರೋವರ್​ಗಳು ಸೇರಿ 3,900 ಕೆ.ಜೆ. ತೂಕ ಹೊಂದಿತ್ತು. ಉಡಾವಣೆಯಾದ 16 ನಿಮಿಷದಲ್ಲಿ ರಾಕೆಟ್​ನಿಂದ ನೌಕೆ ಬೇರ್ಪಟ್ಟಿದೆ. ನೌಕೆಯು ಭೂ ಕಕ್ಷೆಯಿಂದ 170 ಕಿ.ಮೀ. ಹತ್ತಿರದಲ್ಲಿ ಮತ್ತು 36,500 ಕಿ.ಮೀ. ದೂರದ ದೀರ್ಘಮಾರ್ಗದಲ್ಲಿ ಐದಾರು ಬಾರಿ ಭೂ ಪ್ರದಕ್ಷಿಣೆ ಮಾಡಲಿದೆ. ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಮೃದುವಾಗಿ ಇಳಿಯಲಿದೆ (ಸಾಫ್ಟ್ ಲ್ಯಾಂಡಿಂಗ್). 2019ರಲ್ಲಿ ಚಂದ್ರಯಾನ-2 ಈ ರೀತಿಯ ಲ್ಯಾಂಡಿಂಗ್​ನಲ್ಲಿ ವಿಫಲವಾಗಿತ್ತು.

    ವಿಜ್ಞಾನಿಗಳಿಗೆ ಮೋದಿ ಶ್ಲಾಘನೆ

    ಜುಲೈ 14 ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲ್ಪಟ್ಟ ದಿನ. ಲ್ಯಾಂಡರ್ ಮತ್ತು ರೋವರ್​ಗಳಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರನಲ್ಲಿನ ವಿಶೇಷಗಳನ್ನು ಅಧ್ಯಯನ ಮಾಡಿ ಭೂಮಿಯಲ್ಲಿರುವ ನಮ್ಮ ಜ್ಞಾನವನ್ನು ಹಿಗ್ಗಿಸುತ್ತವೆ. ಇದನ್ನು ಸಾಧ್ಯ ಮಾಡುತ್ತಿರುವ ಭಾರತದ ವಿಜ್ಞಾನಗಳಿಗೆ ಧನ್ಯವಾದ ಎಂದು ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದ ನಾವೀನ್ಯತೆಯಲ್ಲಿ ದಾಪುಗಾಲು ಇರಿಸುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆ ತರುವ ವಿಷಯ ಎಂದಿದ್ದಾರೆ.

    ಭಾರತದ ಬಾಹ್ಯಾಕಾಶ ಪಿತಾಮಹರಾದ ವಿಕ್ರಮ್ ಸಾರಾಭಾಯ್ ಅವರ ಕನಸಿಗೆ ಈ ದಿನ ಮುಡಿಪು. ಆರು ದಶಕಗಳ ಹಿಂದೆ ಅವರು ಈ ರೀತಿಯ ಕನಸನ್ನು ಕಂಡಿದ್ದರು. ಆದರೆ, ಆಗ ಅಗತ್ಯ ಸಂಪನ್ಮೂಲಗಳ ಕೊರತೆ ಇತ್ತಾದರೂ, ವಿಶ್ವಾಸಕ್ಕೆ ಯಾವುದೇ ಕೊರತೆ ಇರಲಿಲ್ಲ. ಸಾರಾಭಾಯ್ ಮತ್ತವರ ತಂಡಕ್ಕೆ ತಮ್ಮ ಕನಸು ಮುಂದೊಂದು ದಿನ ನನಸಾಗಲಿದೆ. ಭಾರತಕ್ಕೆ ಇಂಥ ಸಾಮರ್ಥ್ಯ ಖಂಡಿತ ಇದೆ ಎಂಬುದು ಖಚಿತವಾಗಿ ಗೊತ್ತಿತ್ತು ಎಂದು ಮೋದಿ ತಿಳಿಸಿದ್ದಾರೆ.

    ಚಂದ್ರಯಾನ-3: ಯಶಸ್ವಿ ಉಡಾವಣೆ; 16 ನಿಮಿಷಕ್ಕೆ ರಾಕೆಟ್​ನಿಂದ ಬೇರ್ಪಟ್ಟ ನೌಕೆ, ಚಂದ್ರನಲ್ಲಿಗೆ 40 ದಿನದ ಪಯಣ

    ಚಂದ್ರಯಾನ-3: ಯಶಸ್ವಿ ಉಡಾವಣೆ; 16 ನಿಮಿಷಕ್ಕೆ ರಾಕೆಟ್​ನಿಂದ ಬೇರ್ಪಟ್ಟ ನೌಕೆ, ಚಂದ್ರನಲ್ಲಿಗೆ 40 ದಿನದ ಪಯಣಯಾವಾಗ ಲ್ಯಾಂಡಿಂಗ್?

    ಚಂದ್ರಯಾನ-3 ನೌಕೆಯು ಉಡಾವಣೆಯಾದ ಅಂದಾಜು 40 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಿದ ನಂತರ ಇದರ ವಿಕ್ರಮ್ ಹೆಸರಿನ ಲ್ಯಾಂಡರ್ (ನೆಲದ ಮೇಲೆ ಇಳಿಸುವ ಸಾಧನ) ಮತ್ತು ಪ್ರಜ್ಞಾನ ಹೆಸರಿನ ರೋವರ್ (ಚಂದ್ರನ ಮೇಲ್ಮೈಯಲ್ಲಿ ಇಳಿದು ಪರೀಕ್ಷೆ ಕೈಗೊಳ್ಳುವ ಯಂತ್ರೋಪಕರಣ) ಆ.23ರಂದು ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಭೂಮಿಯಿಂದ ಚಂದ್ರನವರೆ ಪಯಣಿಸಲು ಬಾಹ್ಯಾಕಾಶ ನೌಕೆಯು 40 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಆ.23ರಂದು ನೌಕೆಯ ಲ್ಯಾಂಡಿಂಗ್ ನಿರೀಕ್ಷಿಸಲಾಗಿದೆ. ಚಂದ್ರನ ಲಭ್ಯವಿರುವ ಬೆಳಕನ್ನು ಆಧರಿಸಿ ಲ್ಯಾಂಡಿಂಗ್ ಸಮಯವನ್ನು ನಿರ್ಧರಿಸಲಾಗುತ್ತದೆ. ನೌಕೆಯು ಅವರೋಹಣ ಆಗಲಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕು ಕಾಣದಿರುವ ಅನೇಕ ದಿನಗಳಿವೆ. ಸೂರ್ಯನ ಬೆಳಕು ಇಲ್ಲದಿದ್ದರೆ ಲ್ಯಾಂಡರ್​ಗೆ ಜೋಡಿಸಲಾದ ಸೌರ ಫಲಕಗಳನ್ನು ಚಾರ್ಜ್ ಮಾಡಲು ಅಸಾಧ್ಯವಾಗುತ್ತದೆ. ಯಾವುದೇ ಕಾರಣದಿಂದಾಗಿ ಈ ಅವಧಿಯಲ್ಲಿ ಲ್ಯಾಂಡಿಂಗ್ ಸಾಧ್ಯವಾಗದಿದ್ದರೆ, ಸುರಕ್ಷಿತ ಅವರೋಹಣ ಯತ್ನ ಕೈಗೊಳ್ಳಲು ಸೆಪ್ಟೆಂಬರ್ ತಿಂಗಳವರೆಗೆ ಕಾಯಬೇಕಾಗುತ್ತದೆ.

    ಒಡಿಶಾದ ತಂತ್ರಜ್ಞರ ಕೊಡುಗೆ: ಚಂದ್ರಯಾನ-3 ಯೋಜನೆಯ ಅಭಿವೃದ್ಧಿಗಾಗಿ ಒಡಿಶಾದ ಭುವನೇಶ್ವರದ ಸೆಂಟ್ರಲ್ ಟೂಲ್ ರೂಂ ಮತ್ತು ಟ್ರೖೆನಿಂಗ್ ಸೆಂಟರ್ (ಸಿಟಿಟಿಸಿ) ತಂತ್ರಜ್ಞರು ಹಾಗೂ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಯೋಜನೆಯಲ್ಲಿ 50 ಸಾವಿರ ಸೂಕ್ಷ್ಮ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದ್ದು, ಇದನ್ನು ಸಿಟಿಟಿಸಿ ಪೂರೈಸಿದೆ. ಲ್ಯಾಂಡರ್​ನ ಸಾಫ್ಟ್ ಲ್ಯಾಂಡಿಗ್​ಗಾಗಿ ವಿನ್ಯಾಸಗಳನ್ನು ಮಾಡಿಕೊಟ್ಟಿದೆ. 150ಕ್ಕೂ ತಂತ್ರಜ್ಞರು ಎರಡು ವರ್ಷದಿಂದ ಈ ಕಾರ್ಯ ಮಾಡಿದ್ದಾರೆ.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts