ಹಳಿಯ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್​ ರೈಲು

Rail
Published on

ಬರೇಲಿ: ರೈಲ್ವೆ ಹಳಿಯ ಮೇಲೆ ಮೇಯುತ್ತಿದ್ದ ಸುಮಾರು 14 ಹಸುಗಳ ಮೇಲೆ ಗೂಡ್ಸ್​ ರೈಲೊಂದು ಹರಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​ ಕೆ.ಕೆ. ಸಿಂಗ್, ಬರೇಲಿ-ಚಂದೌಸಿ ಮಾರ್ಗದಲ್ಲಿ ಬಿಶಾರತ್​ಗಂಜ್​ ರೈಲು ನಿಲ್ದಾಣ ಸಮೀಪ ಗೂಡ್ಸ್​ ರೈಲು 14 ಹಸುಗಳ ಮೇಲೆ ಹರಿದಿದೆ ಎಂದಿದ್ದಾರೆ. ​

ಶನಿವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಹಸುಗಳನ್ನು ಚಿಕಿತ್ಸೆ ಕಳುಹಿಸಲಾಗಿದ್ದು, ಸಾವಿಗೀಡಾದ ಹಸುಗಳನ್ನು ಹೂಳಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net