ರಫೇಲ್​ ಯುದ್ಧವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಅಂಬಾಲದಲ್ಲಿ ಹೈಅಲರ್ಟ್​

Rafale
Published on

ಚಂಡಿಗಢ: ಫ್ರಾನ್ಸ್​​ನಿಂದ ಇತ್ತೀಚೆಗಷ್ಟೇ ಬಂದು ಭಾರತೀಯ ವಾಯು ಪಡೆ ಸೇರ್ಪಡೆಗೊಂಡಿರುವ ರಫೇಲ್​ ಜೆಟ್​​ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ.

ಭಾರತ ಮತ್ತು ಫ್ರಾನ್ಸ್​ ನಡುವಿನ ಒಪ್ಪಂದದಂತೆ ಮೊದಲ ಹಂತದಲ್ಲಿ ಒಟ್ಟು 5 ರಫೇಲ್​ ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್​ ಆಗಿರುವ ಜೆಟ್​ಗಳು ತಾಲೀಮಿನಲ್ಲಿ ನಿರತವಾಗಿವೆ.

ಇದೀಗ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿರುವ ರಫೇಲ್ ಜೆಟ್​​ಗಳನ್ನು ಸ್ಫೋಟಿಸುವುದಾಗಿ ಶುಕ್ರವಾರ ಪತ್ರ ಬಂದಿದೆ. ಈ ಪತ್ರ ನೋಡಿದರೆ ಯಾರೋ ಕಿಡಿಗೇಡಿಗಳು ಕಳಿಸಿದ್ದೆಂದು ಭಾಸವಾಗುತ್ತಿದೆ. ಸ್ಥಳೀಯ ಆಡಳಿತ ದೂರು ನೀಡಿದ್ದು, ಸದ್ಯ ಅಂಬಾಲ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು

ಅಂಬಾಲ ವಾಯುನೆಲೆ ಸುತ್ತಲೂ ಹಳ್ಳಿಗಳು ಇದ್ದು, ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯೂ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net