

ಕೋಲ್ಕತ: ಕಲ್ಲು ತುಂಬಿದ ಟ್ರಕ್ ಒಂದು ಕಾರು ಮತ್ತು ವ್ಯಾನ್ ಮೇಲೆ ಉರುಳಿಬಿದ್ದ ಪರಿಣಾಮ 13 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟ ನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.
ಸ್ಥಳೀಯ ಶಾಸಕ ಮಿಥಾಲಿ ರಾಯ್ ಪ್ರಕಾರ 13 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಅವಘಡದಲ್ಲಿ ಗಾಯಗೊಂಡವರ ಸ್ಥಿತಿ ತುಂಬಾ ಗಂಭೀರವಾಗಿದೆ. ಜಲ್ಪೈಗುರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓವರ್ಲೋಡ್ ಪರಿಣಾಮ ಸಮತೋಲನ ಕಳೆದುಕೊಂಡ ಟ್ರಕ್, ಪಕ್ಕದಲ್ಲೇ ಹಾದುಹೋಗುತ್ತಿದ್ದ ಕಾರು ಮತ್ತು ವ್ಯಾನ್ ಮೇಲೆ ಉರುಳಿಬಿದ್ದು ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)