More

    ವಾಹನ ಸವಾರರೇ ದಾಖಲೆ ಇಟ್ಟುಕೊಂಡೇ ರಸ್ತೆಗೆ ಇಳಿಯಿರಿ: 1 ತಿಂಗಳು ನಡೆಯಲಿದೆ ವಿಶೇಷ ಕಾರ್ಯಾಚರಣೆ

    ಬೆಂಗಳೂರು: ವಾಹನ ಸವಾರರೇ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ ವಿರಲಿ. ಆರ್​ಸಿ ಬುಕ್, ಡಿಎಲ್ ಇನ್ನಿತರ ದಾಖಲೆಗಳನ್ನು ಇಟ್ಟುಕೊಂಡೇ ರಸ್ತೆಗಿಳಿಯಿರಿ. ಇಲ್ಲವಾದರೆ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದು, ದಂಡ ಕಟ್ಟಬೇಕಾದೀತು.

    ಬೆಂಗಳೂರು ನಗರ ಸಂಚಾರ ಪೊಲೀಸರು ಜ.18 ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಮಾಹೆ ಆಚರಣೆ ಮಾಡುತ್ತಿದ್ದಾರೆ. ‘ರಸ್ತೆ ಸುರಕ್ಷತೆ- ಜೀವನ ರಕ್ಷೆ’ ಧ್ಯೇಯದೊಡನೆ ವಿವಿಧ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಸಂಚಾರ ನಿಯಮ ಪಾಲಿಸದ ವಾಹನ ಚಾಲಕ/ಸವಾರರ ವಿರುದ್ಧ ಒಂದೊಂದು ದಿನ ಒಂದೊಂದು ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಮಂಗಳವಾರ ನಗರದ ಎಲ್ಲೆಡೆ ಹೆಲ್ಮೆಟ್​ರಹಿತ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಬುಧವಾರ ವಾಹನಚಾಲನೆ ವೇಳೆ ಮೊಬೈಲ್ ಬಳಸುವರ ವಿರುದ್ಧ ಕಾರ್ಯಾಚರಣೆ ನಡೆಯಲಿದೆ. ಅದೇರೀತಿ ಸೀಟ್ ಬೆಲ್ಟ್​ರಹಿತ (ಜ.21), ಟ್ರಾಫಿಕ್ ಸಿಗ್ನಲ್ ಜಂಪಿಂಗ್ (ಜ.22), ಅತಿವೇಗದ ಚಾಲನೆ (ಜ.23), ಕರೆದ ಕಡೆ ಬಾಡಿಗೆಗೆ ಬರಲು ನಕಾರ (ಜ.24), ದುಬಾರಿ ಬಾಡಿಗೆಗೆ ಒತ್ತಾಯ (ಜ.25), ಪಥ ಶಿಸ್ತು ಉಲ್ಲಂಘನೆ (ಜ.26), ಅಪಾಯಕಾರಿ ಚಾಲನೆ (ಜ.27), ಏಕಮುಖ ಸಂಚಾರ ಉಲ್ಲಂಘನೆ (ಜ.28), ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ (ಜ.29), ಕರ್ಕಶ ಶಬ್ದ (ಜ.30), ದೋಷಪೂರಿತ ಸೈಲೆನ್ಸರ್ (ಜ.31), ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರ ಕರೆ ದೊಯ್ಯುವುದು

    (ಫೆ.1), ಆಟೋದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರ ಪ್ರಯಾಣ (ಫೆ.2) ಹಾಗೂ ಇದೇ ಸರದಿಯಲ್ಲಿ ಮತ್ತೆ ಫೆ.3ರಿಂದ 17ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರತಿದಿನದ ವರದಿಯನ್ನು ಮರುದಿನ ಬೆಳಗ್ಗೆ 10 ಗಂಟೆ ಒಳಗಾಗಿ ಆಯಾ ಎಸಿಪಿ ಮತ್ತು ಡಿಸಿಪಿಗೆ ವರದಿ ಒಪ್ಪಿಸುವಂತೆ ಇನ್​ಸ್ಪೆಕ್ಟರ್​ಗಳಿಗೆ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಸೂಚನೆ ಕೊಟ್ಟಿದ್ದಾರೆ. ಕಾರ್ಯಾಚರಣೆ ಜತೆಗೆ ಇತರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧವೂ ಕೇಸ್ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

    ವಕೀಲರ ಡ್ರೆಸ್​ಕೋಡ್​ಗಿದ್ದ ವಿನಾಯಿತಿ ರದ್ದು, ಕೋಟ್​ ಧರಿಸುವಿಕೆ ಕಡ್ಡಾಯ

    ‘ಚಿಕನ್​, ಮೊಟ್ಟೆಯನ್ನ 3 ಸೆಕೆಂಡ್​ ಬೇಯಿಸಿದ್ರೂ ಸಾಕು, ಹಕ್ಕಿ ಜ್ವರ ಹತ್ತಿರಾನು ಸುಳಿಯಲ್ಲ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts