More

    ವಕೀಲರ ಡ್ರೆಸ್​ಕೋಡ್​ಗಿದ್ದ ವಿನಾಯಿತಿ ರದ್ದು, ಕೋಟ್​ ಧರಿಸುವಿಕೆ ಕಡ್ಡಾಯ

    ಬೆಂಗಳೂರು: ಕರ್ತವ್ಯನಿರತ ವಕೀಲರು ಇನ್ಮುಂದೆ ಮೊದಲಿನಂತೆ ಕೋಟ್​ ಧರಿಸಿಯೇ ಕೋರ್ಟ್​ಗೆ ಹಾಜರಾಗಬೇಕು ಎಂದು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಪ್ರಕಟಣೆ ಹೊರಡಿಸಿದೆ.

    ಕೋವಿಡ್-19 ಹಿನ್ನೆಲೆಯಲ್ಲಿ ಡ್ರೆಸ್ ಕೋಡ್​ಗೆ ವಿನಾಯಿತಿ ನೀಡಲಾಗಿತ್ತು. ಇದೀಗ ವಕೀಲರು ಫೆ.1 ರಿಂದ ಕಪ್ಪು ಕೋಟ್, ಗೌನ್, ಬ್ಯಾಂಡ್ ಧರಿಸಿಯೇ ಕೋರ್ಟ್​ಗೆ ಹಾಜರಾಗಬೇಕು. ಇನ್ನು ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನ ನಿಲ್ಲಿಸಲು ಮತ್ತು ಶೇ.50 ಕುರ್ಚಿಗಳೊಂದಿಗೆ ಕ್ಯಾಂಟೀನ್ ಬಳಕೆಗೂ ಅನುಮತಿ ನೀಡಲಾಗಿದೆ. ಕೋರ್ಟ್ ಆವರಣದಲ್ಲಿ ಮಾಸ್ಕ್ ಬಳಕೆ ಕಡ್ಡಾಯ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಕರೊನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು ಬಿಳಿ ಶರ್ಟ್, ಸಲ್ವಾರ್ ಕಮೀಜ್, ಮಹಿಳಾ ವಕೀಲರು ಬಿಳಿಸೀರೆ, ಕುತ್ತಿಗೆಗೆ ನೆಕ್ ಬ್ಯಾಂಡ್ ಧರಿಸಬಹುದು, ಕಪ್ಪು ಕೋಟ್​ನ್ನು ಮುಂದಿನ ಆದೇಶದವರೆಗೆ ಬಳಸುವುದು ಬೇಡ ಎಂದು ಕಳೆದ ಮೇ ತಿಂಗಳಿನಲ್ಲೇ ವಸ್ತ್ರ ಸಂಹಿತೆ ಜಾರಿ ಮಾಡಿ ಸುತ್ತೋಲೆ ಹೊರಡಿಸಿತ್ತು.

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಕುಮಾರಸ್ವಾಮಿ ನನ್ನ ಸ್ನೇಹಿತ..! ಸಚಿವರಾದ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಯೋಗೇಶ್ವರ್​

    ನೀವು ತಿನ್ತಿರೋದು ರೈತರ ಅನ್ನ, ನಾವು ನಿಮಗೆ ಕೈ ಮುಗಿದು ನಿಲ್ಲಬೇಕಾ? ಥೂ.. ಎನ್ನುತ್ತಾ ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts