More

    ಡಿ. 30ರಂದು 743 ಹೊಸ ಕೋವಿಡ್ ಪ್ರಕರಣ; 7 ಸಾವು ದಾಖಲು

    ನವದೆಹಲಿ: ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶನಿವಾರ 743 ಹೊಸ ಪ್ರಕರಣಗಳು ದಾಖಲಾಗಿದ್ದು, ಕನಿಷ್ಠ ಏಳು ಸಾವುಗಳು ವರದಿಯಾಗಿವೆ, ಈ ಮೂಲಕ ಕಳೆದೊಂದು ವಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ.

    ಸೋಂಕಿನ ಪ್ರಕರಣಗಳ ಸಂಖ್ಯೆ ಏರುತ್ತಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಶನಿವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 3,997 ಕ್ಕೆ ಇಳಿದಿದೆ. ಹಿಂದಿನ ದಿನವಾದ ಶುಕ್ರವಾರ ಈ ಸಂಖ್ಯೆ 4,091 ಇತ್ತು.

    ಕೋವಿಡ್​ ಹೊಸ ರೂಪಾಂತರ JN.1 ಸಬಂಧಿತ 162 ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ, ಈ ಪೈಕಿ ಕೇರಳದಿಂದ ಅತಿ ಹೆಚ್ಚು 83 ಪ್ರಕರಣಗಳು ವರದಿಯಾಗಿವೆ.

    ಶುಕ್ರವಾರ ದೇಶದಲ್ಲಿ ವರದಿಯಾದ 792 ಹೊಸ ಪ್ರಕರಣಗಳಲ್ಲಿ 377 ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಗುಜರಾತ್ (34), ಗೋವಾ (18), ಕರ್ನಾಟಕ (8), ಮಹಾರಾಷ್ಟ್ರ (7), ರಾಜಸ್ಥಾನ (5), ತಮಿಳುನಾಡು (4), ತೆಲಂಗಾಣ (2), ದೆಹಲಿ (1) ಪ್ರಕರಣಗಳು ವರದಿಯಾಗಿವೆ.

    ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಕಾಯಿಲೆಯ ಅಪಾಯದ ಮಟ್ಟ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರೆ.

    ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಕಮಾಂಡೋಗೆ ಗಾಯ

    ಅಂಬಾನಿ, ಅದಾನಿ, ಟಾಟಾ ಮೀರಿಸಿದ ಜಗತ್ತಿನ ಶ್ರೀಮಂತ ಮಹಿಳೆ: ಬೈಬಲ್​ ಓದು, ಪಿಯಾನೊ ನುಡಿಸುವಿಕೆ ಈಕೆಯ ಹವ್ಯಾಸ!

    ಅಯೋಧ್ಯೆಯ ಲತಾ ಮಂಗೇಶ್ವರ್​ ಚೌಕ್​ನಲ್ಲಿ ಭಾವುಕರಾದ ಮೋದಿ: ಇಲ್ಲಿದ ಬೃಹದಾಕಾರದ ವೀಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts