ಗೇ ಲವ್ವರ್​ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..

Jessica
Published on

ಲಂಡನ್​: ಭಾವನ ಕರಾಳ ಮುಖಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದಂತೆಯೇ ಆತನೇ ನನ್ನ ಸಹೋದರಿಯನ್ನು ಕೊಲೆ ಮಾಡಿದ್ದಾನೆಂದು ಭಯಾನಕ ಘಟನೆ ಹಿಂದಿನ ಕಹಿ ಸತ್ಯವನ್ನು ಮಹಿಳೆಯೊಬ್ಬಳು ಹೊರಗೆ ಹಾಕಿದ್ದಾಳೆ.

ಜಸ್ಸಿಕಾ ಪಟೇಲ್​ ಎಂಬಾಕೆಯ ಕೊಲೆ ಹಿಂದಿನ ಕತೆಯನ್ನು ಮಂಗಳವಾರ ರಾತ್ರಿ 9 ಗಂಟೆಗೆ 5ಸ್ಟಾರ್‌ನಲ್ಲಿ ಕೌಂಟ್​ಡೌನ್​​ ಟು ಮರ್ಡರ್ ಎಂಬ ಹೊಸ ಸಾಕ್ಷ್ಯಚಿತ್ರದಲ್ಲಿ ಹೇಳಲಾಗುತ್ತಿದೆ. ಅಂದಹಾಗೆ ಕೊಲೆ 2018ರ ಮೇ ತಿಂಗಳಲ್ಲಿ ನಡೆದಿದ್ದು, ಇದೀಗ ಸಾಕ್ಷ್ಯಾಚಿತ್ರವಾಗಿ ಬರುತ್ತಿದೆ.

ಕೊಲೆಯ ವಿವರಣೆಗೆ ಬರುವುದಾದರೆ, ಜಸ್ಸಿಕಾ ಪಟೇಲ್​ ಶವ ಆಕೆಯ ನಿವಾಸದಲ್ಲಿ ಡಕ್ಟ್​ ಟೇಪ್​ನಿಂದ ಸುತ್ತಿಡಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮನೆಯ ದರೋಡೆಗೆ ಬಂದವರಿಂದ ನಡೆದ ಕೃತ್ಯ ಎಂದು ಹೇಳಲಾಗಿತ್ತು. ಏಕೆಂದರೆ, ಮನೆಯಲ್ಲಿ ಜಸ್ಸಿಕಾಳಿಗೆ ಸಂಬಂಧಿಸಿದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಮತ್ತು ಆಕೆಯನ್ನು ಉಸಿಗಟ್ಟಿಸಿ ಕೊಲೆ ಮಾಡಲಾಗಿತ್ತು.

ಜಸ್ಸಿಕಾ ಕೊಲೆಯಿಂದ ಆಘಾತಗೊಂಡಿದ್ದ ಆಕೆಯ ಸಹೋದರಿ ಮಿನಾಲ್​ ಪಟೇಲ್​, ಭಾವ ಮಿತೇಶ್​ ಪಟೇಲ್​ರನ್ನು ಸಮಾಧಾನಪಡಿಸಲು ಮುಂದಾದರಂತೆ. ಸೋಫಾ ಮೇಲೆ ಕುಳಿತಿದ್ದ ಆತನ ಬಳಿ ಹೋಗಿ ಕುಳಿತುಕೊಂಡೆ. ಬಳಿಕ ತಬ್ಬಿಕೊಂಡು ಸಮಾಧಾನ ಮಾಡುವಾಗ ತಕ್ಷಣ ಭಾವ ತನ್ನ ತಲೆಯನ್ನು ಭುಜದ ಮೇಲೆ ಹಾಕಿದ. ಅಕ್ಕನ ಸಾವಿನ ನೋವಿನಿಂದ ಅಳುತ್ತಿದ್ದಾರೆ ಎಂದು ಭಾವಿಸಿದೆ. ಆದರೆ, ಕೊಲೆಯಾದ ಮೂರು ದಿನಗಳ ನಂತರ ಗೊತ್ತಾಯ್ತು ಭಾವನದ್ದು ಮೊಸಳೆ ಕಣ್ಣೀರು ಎಂದು.

ಭಾವ ಮಿತೇಶ್​ ಪಟೇಲ್​ ತನ್ನ ಕೈಯ್ಯಾರ ನನ್ನ ಸಹೋದರಿ ಹಾಗೂ ಆತನ ಪತ್ನಿ ಜೆಸ್ಸಿಕಾ ಪಟೇಲಳನ್ನೇ ಬರ್ಬರವಾಗಿ ಕೊಲೆ ಮಾಡಿದ್ದು ಬಹಿರಂಗವಾಯಿತು. ಅದಕ್ಕೆ ಕಾರಣ ಆತನ ಕರಾಳ ಮುಖ ಅಕ್ಕನಿಗೆ ಒಂದೊಂದಾಗಿ ತಿಳಿಯುತ್ತಾ ಹೋದಂತೆ ಈ ಕೃತ್ಯ ಎಸಗಿದ್ದಾನೆಂದು ಜಸ್ಸಿಕಾ ಸಹೋದರಿ ವಿವರಿಸಿದ್ದಾರೆ.

2009ರಲ್ಲಿ ಜಸ್ಸಿಕಾ ಮತ್ತು ಮಿತೇಶ್​ ಮದುವೆ ನಡೆಯಿತು. ಆರಂಭದಲ್ಲಿ ಅನೋನ್ಯವಾಗಿದ್ದರು. ಆದರೆ, ಕೆಲವು ವರ್ಷಗಳು ಕಳೆದ ಬಳಿಕ ಮಿತೇಶ್​ ಬದಲಾದರು. ವೃತ್ತಿಯಲ್ಲಿ ಫಾರ್ಮಾಸಿಸ್ಟ್​ ಆಗಿದ್ದ ಮಿತೇಶ್​ ವರ್ಷಗಳು ಕಳೆದಂತೆ ಪತ್ನಿಯನ್ನು ನಿರ್ಲಕ್ಷಿಸಲು ಆರಂಭಿಸಿದ. ಅಲ್ಲದೆ, ಜಸ್ಸಿಕಾಳ ಅಜ್ಜ ಸಾಯುವಾಗಲು ಹೋಗದಂತೆ ತಡೆದಿದ್ದ. ಹೀಗಿರುವಾಗ ಮಿತೇಶ್​ ಸಲಿಂಗಾಕಾಮಿ ಡೇಟಿಂಗ್​ ಆ್ಯಪ್​ ಉಪಯೋಗಿಸುತ್ತಿದ್ದ ವಿಚಾರ ಜೆಸ್ಸಿಕಾಗೆ ತಿಳಿಯಿತು. ಆಸ್ಟ್ರೇಲಿಯಾ ಮೂಲದ ಡಾ. ಅಮಿತ್​ ಪಟೇಲ್​ ಎಂಬುವರ ಜತೆ ಸಂಬಂಧ ಹೊಂದಿದ್ದ ಎಂದು ಮಿನಾಲ್​ ಪಟೇಲ್​, ಭಾವನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

ಸಲಿಂಗಕಾಮ ಕುರಿತು ಇಬ್ಬರು ಪರಸ್ಪರ ಚಾಟಿಂಗ್​ ಮಾಡಿರುವುದನ್ನು 2012ರ ಡಿಸೆಂಬರ್​ನಲ್ಲಿ ಜೆಸ್ಸಿಕಾ ಕಿರಿಯ ಸಹೋದರಿ ಮಿತೇಶ್​ ಫೋನ್​ನಲ್ಲಿ ಪತ್ತೆಹಚ್ಚಿದ್ದಳು. ಅಲ್ಲದೆ, ಆತ ಹೆಚ್ಚು ಹೊತ್ತು ಫೋನ್​ನಲ್ಲೆ ಕಳೆಯುತ್ತಿದ್ದ. ಎಲ್ಲಿ ಹೋದರು ಮೊಬೈಲ್​ ಅನ್ನು ತನ್ನ ಜತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದ. ಬಾಥ್​ರೂಮ್​ಗೆ ಹೋದಾಗಲೂ ಕೊಂಡೊಯ್ಯುತ್ತಿದ್ದ. ಅಲ್ಲದೆ, ಪಾಸ್​ವರ್ಡ್​ ಇಟ್ಟಿದ್ದು ಜೆಸ್ಸಿಕಾಗೂ ತಿಳಿದಿರಲಿಲ್ಲ. ಇಬ್ಬರ ನಡುವೆ ನಡೆದ ಸಂಭಾಷಣೆ ಬಗ್ಗೆ ಜೆಸ್ಸಿಕಾ ಹೇಳಿದಾಗಲೂ ಮಧ್ಯ ಪ್ರವೇಶಿಸಿದ ಮಿತೇಶ್​ ಮೇಲೆ ನಂಬಿಕೆ ಇಲ್ಲದಿರುವ ಬಗ್ಗೆ ಜೆಸ್ಸಿಕಾ ಹೇಳಿಕೊಂಡಿದ್ದಳು. ಅಲ್ಲದೆ, ಈ ವಿಚಾರದಿಂದ ಹಿಂದೆ ಸರಿಯುವಂತೆ ಕುಟುಂಬವನ್ನು ಕೇಳಿಕೊಂಡಿದ್ದಳು. ಅದೇ ವರ್ಷ ಜೆಸ್ಸಿಕಾ ಮತ್ತು ಮಿತೇಶ್​ ತಮ್ಮದೇ ಸ್ವಂತ ಫಾರ್ಮಸಿ ನಡೆಸಲು ಲೀಡ್ಸ್​ನಿಂದ ಮಿಡ್ಡಲ್ಸ್​ಬರೋಗೆ ಆಗಮಿಸಿದ್ದರು.

ಮದುವೆಯಾದರೂ ಮಕ್ಕಳಾಗದಿದ್ದಾಗ ಮಗುವನ್ನು ಪಡೆಯಲು ಐವಿಎಫ್​ (ಪ್ರನಾಳೀಯ ಫಲೀಕರಣ) ಮೊರೆ ಹೋಗಿದ್ದರು. ಮೂರು ಬಾರಿಯು ಜೆಸ್ಸಿಕಾಗೆ ವಿಫಲವಾಗಿತ್ತು. ಇದಕ್ಕೂ ಮೊದಲೇ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದ ಮಿತೇಶ್​, ಮಗು ಹುಟ್ಟಿದ ಮೇಲೆ ಜೆಸ್ಸಿಕಾಳನ್ನು ಕೊಂದು ಮಗುವನ್ನು ಸಿಡ್ನಿಗೆ ಕರೆದೊಯ್ಯಲು ಪ್ಲಾನ್​ ಮಾಡಿದ್ದ. ಈ ಬಗ್ಗೆ ಅಮಿತ್​ ಪಟೇಲ್​ ಬಳಿಯೂ ಕೇಳಿದ್ದ.

ಜೆಸ್ಸಿಕಾ ಅವರ ನಾಲ್ಕನೇ ಮತ್ತು ಅಂತಿಮ ಐವಿಎಫ್ ಸುತ್ತಿನಲ್ಲಿ ಅವಳ ಭ್ರೂಣಗಳನ್ನು ಹೆಪ್ಪುಗಟ್ಟಿದ ಶೇಖರಣಾ ಚಿಕಿತ್ಸಾಲಯದಲ್ಲಿ ಇರಿಸಲಾಗಿತ್ತು. ಇದರ ಬೆನ್ನಲ್ಲೇ ಆಕೆಯನ್ನು ಕೊಲೆ ಮಾಡಲು ಪ್ಲಾನ್​ ಮಾಡಿದ ಮಿತೇಸ್​ 2018ರ ಮೇ 14ರಂದು ಕಾರ್ಯಗತಗೊಳಿಸಿದ್ದ. ದರೋಡೆಗೆ ಬಂದವರು ಕೊಲೆ ಮಾಡಿದ್ದಾರೆಂದು ನಂಬಿಸಲು ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿಸಿ ಉಸಿರುಗಟ್ಟಿಸಿ ಕೊಂದಿದ್ದ. ತುರ್ತು ಸೇವೆಗೆ ಕರೆ ಮಾಡುವ ಮುನ್ನ ಪಿಜ್ಜಾ ಆರ್ಡರ್​ ಮಾಡಿ ತರಲು ಹೋಗಿದ್ದ. ಮಗಳಿಗೆ ಏನಾಗಿದೆ ಎಂದು ತಿಳಿಯಲು ಸಾಧ್ಯವಾಗದೇ ಆಕೆಯ ಕುಟುಂಬ ಸಹ ಮಿತೇಶ್​ ಬೆನ್ನಿಗೆ ನಿಂತಿತ್ತು. ಆದರೆ, ಮನೆಯಲ್ಲಿ ಸಿಸಿಟಿವಿ ಸುಳಿವು ಇಡೀ ಕತೆಯನ್ನು ಬದಲಾಯಿಸಿ ಮಿತೇಶ್​ ಕರಾಳ ಮುಖವನ್ನು ಹೊರಗೆಳೆದಿತ್ತು. ಇದೀಗ ಬಂಧಿಯಾಗಿರುವ ಮಿತೇಶ್​ ಶಿಕ್ಷೆಯನ್ನು ಎದುರಿಸುತ್ತಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net