More

  ಕ್ರಿಕೆಟ್ ಆಟಗಾರರಿಗೆ 3 ದಶಕದಿಂದ ಚಿಕಿತ್ಸೆ ನೀಡುತ್ತಾ ಬಂದಿರುವ ಹಾಸ್ಮಟ್ ಆಸ್ಪತ್ರೆ

  ಬೆಂಗಳೂರು: ಸದ್ಯ ಎಲ್ಲೆಲ್ಲೂ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಇಡೀ ದೇಶದ ಗಮನ ಸೆಳೆದಿರುವ ಐಪಿಎಲ್ ಮ್ಯಾಚ್ ಕೊನೆಯ ಹಂತವನ್ನು ತಲುಪಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಶನಿವಾರ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈಫೀವರ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಂದ್ಯದಲ್ಲಿ ಆಟವಾಡುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಅನಾರೋಗ್ಯ ಕಾಣಿಸಿಕೊಂಡರೆ ಅಥವಾ ಪಂದ್ಯದ ವೇಳೆ ಗಾಯಗಳಾದರೆ ತುರ್ತು ಚಿಕಿತ್ಸೆ ನೀಡಿ ಅವರನ್ನು ಆರೈಕೆ ಮಾಡುವಲ್ಲಿ ಹಾಸ್ಮಟ್ ಆಸ್ಪತ್ರೆಯ ಪಾತ್ರ ಪ್ರಮುಖವಾಗಿದೆ.

  1993 ರಿಂದ ಹಾಸ್ಮಟ್ ಆಸ್ಪತ್ರೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ. ಹಾಸ್ಮಾಟ್ ಆಸ್ಪತ್ರೆ ಈವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದ 15 ಟೆಸ್ಟ್ ಪಂದ್ಯಗಳು, 42 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 9 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡ ಆಟಗಾರರ ಗಾಯಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದೆ.

  ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೇವಲ 2ಕಿ.ಮೀ. ದೂರದಲ್ಲಿರುವ ಹಾಸ್ಮಾಟ್ ಆಸ್ಪತ್ರೆ, ಪಂದ್ಯ ನಡೆಯುವ ದಿನ ಎಲ್ಲ ರೀತಿಯ ತುರ್ತು ಚಿಕಿತ್ಸೆಗೆ ಬೇಕಾದ ಸಲಕರಣೆಗಳೊಂದಿಗೆ ಸಜ್ಜಾಗಿರುತ್ತದೆ. ಹಾಗೂ ಕೆಎಸ್‌ಸಿಎ ಆವರಣದಲ್ಲಿ ಕೂಡಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ವೈದ್ಯಕೀಯ ಕೊಠಡಿಯಲ್ಲಿ ಆರ್ಥೋಪೆಡಿಕ್ಸ್ ಮತ್ತು ಎಮರ್ಜೆನ್ಸಿ ಮೆಡಿಸಿನ್‌ಗೆ ಸಂಬಂಧಪಟ್ಟಂತೆ ಬೇಕಾದ ವ್ಯಸ್ಥೆಯೊಂದಿಗೆ ಸಿದ್ಧರಾಗಿರುತ್ತಾರೆ. ಹಾಗೂ 2 ಆಂಬ್ಯುಲೆನ್ಸ್‌ಗಳು ಸೇವೆಗೆ ಸಿದ್ಧವಾಗಿರುತ್ತವೆ.

  ವಿಶ್ವಕಪ್ ಪಂದ್ಯಗಳು ಸೇರಿದಂತೆ ಅಂತರಾಷ್ಟ್ರೀಯ, ರಣಜಿ ಮತ್ತು ಐಪಿಎಲ್ ಸೇರಿದಂತೆ ಎಲ್ಲ ಪಂದ್ಯಗಳ ಆಟಗಾರರಿಗೆ 1993 ರಿಂದ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಹಾಸ್ಮಟ್ ಆಸ್ಪತ್ರೆಗಿದೆ.

  ಕ್ರಿಕೆಟ್ ಆಟಗಾರರಿಗೆ 3 ದಶಕದಿಂದ ಚಿಕಿತ್ಸೆ ನೀಡುತ್ತಾ ಬಂದಿರುವ ಹಾಸ್ಮಟ್ ಆಸ್ಪತ್ರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts