More

  ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ

  ಬೆಂಗಳೂರು: ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯವು ಅಂತಿಮ ವರ್ಷದ ವಿದ್ಯಾರ್ಥಿಗಳ ಎರಡು ದಿನಗಳ ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕಾಗಿ ಏರ್ಪಡಿಸಿರುವ ‘ಪ್ರದರ್ಶನ 2024’ಕ್ಕೆ ಗುರುವಾರ ಚಾಲನೆ ದೊರೆಯಿತು. ಸ್ಯಾಮ್‌ಸಾಂಗ್ ಆರ್ ಆ್ಯಂಡ್ ಡಿ ಇನ್‌ಸ್ಟಿಟ್ಯೂಟ್ ನಿರ್ದೇಶಕ ಲೋಕೇಶ್ವರ ಬೋರೇಗೌಡ ಪ್ರದರ್ಶನಕ್ಕೆ ಚಾಲನೆ ನೀಡಿದರು.

  ಈ ವೇಳೆ ಮಾತನಾಡಿದ ಗೋಕುಲ ಎಜುಕೇಷನ್ಡೇ ಫೌಂಡೇಶನ್ ಅಧ್ಯಕ್ಷ ಎಂ.ಆರ್.ಜಯರಾಮ, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಹೊಸ ಐಡಿಯಾಗಳು ಇರುತ್ತವೆ. ಅವು ಹೊರ ಬರಬೇಕೆಂದರೆ ಅವರಿಗೆ ಉತ್ತಮ ವೇದಿಕೆ ಕಲ್ಪಿಸಬೇಕು. ಇದನ್ನು ಗಮನದಲ್ಲಿರಿಸಿಕೊಂಡು ನಾವು ಈ ಪ್ರಾಜೆಕ್ಟ್ ಪ್ರದರ್ಶನ ಆಯೋಜಿಸಿದ್ದೇವೆ. ಹಲವಾರು ಕಂಪನಿಯ ಮುಖ್ಯಸ್ಥರು ವೀಕ್ಷಕರಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿರಲಿದೆ. ವಿದ್ಯಾರ್ಥಿಗಳು ಸಹ ಮುಂದೆ ಕೈಗಾರಿಕೆಗಳಿಗೆ ಹೋಗಿ ಕೆಲಸ ಮಾಡಲು ಇದು ಸಹಾಯಕಾರಿಯಾಗಲಿದೆ ಎಂದರು.

  ಮೇ.16 ಮತ್ತು 17 ರಂದು ಬೆಳಗ್ಗೆ 9 ರಿಂದ ಸಂಜೆ4.30 ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ 13 ಎಂಜಿನೀಯರಿಂಗ್ ವಿಭಾಗಗಳ ಸುಮಾರು 1400 ವಿದ್ಯಾರ್ಥಿಗಳ ವಿವಿಧ ಪರಿಕಲ್ಪನೆಗಳ ಆವಿಷ್ಕಾರಗಳನ್ನು ಪ್ರದರ್ಶಿಸಲಾಗುತ್ತಿದೆ. ವಿವಿಧ ತಂತ್ರಜ್ಞಾನಗಳ ಪ್ರಾಜೆಕ್ಟ್‌ಗಳನ್ನು ಒಂದೇ ಸೂರಿನಡಿ ಸಂಯೋಜಿಸಿ, ಪ್ರದರ್ಶಿಸುವ ವಿಶಿಷ್ಠ ಪ್ರದರ್ಶನ ಇದಾಗಿದ್ದು, ಈ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ನಾಯಕತ್ವ, ಭವಿಷ್ಯ ಮತ್ತು ಉತ್ತಮ ಅವಕಾಶವನ್ನು ನಿರ್ಣಯಿಸಲು ಸಹಕಾರಿಯಾಗಿದೆ.

  ಕಾರ್ಯಕ್ರಮದಲ್ಲಿ ಗೋಕುಲ ಎಜುಕೇಷನ್ ಫೌಂಡೇಶನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಮ, ಕಾರ್ಯದರ್ಶಿ ಎಂ.ಆರ್.ರಾಮಯ್ಯ, ನಿರ್ದೇಶಕ ಬಿ.ಎಸ್.ರಾಮಪ್ರಸಾದ್.ಪ್ರಾಂಶುಪಾಲರಾದ ಡಾ.ಎನ್.ವಿ.ಆರ್.ನಾಯ್ಡು, ಮತ್ತಿತರರು ಪಾಲ್ಗೊಂಡಿದ್ದರು.

  ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ

  ತಾಂತ್ರಿಕ ಜಗತ್ತಿನ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ

  ನಮ್ಮ ವಿದ್ಯಾರ್ಥಿಗಳು ಮುಂದೆ ದೇಶ ಮಾತ್ರವಲ್ಲ ಜಗತ್ತಿನ ತಾಂತ್ರಿಕ ಕ್ಷೇತ್ರವನ್ನು ಆಳಲಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಅಳುಕು ಇಲ್ಲದ ಹಾಗೆ ಮುಂದುವರೆಯಲು ಎಂಎಸ್‌ಆರ್‌ಐಟಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಗೋಕುಲ ಎಜುಕೇಷನ್ ಫೌಂಡೇಶನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಮ ಹೇಳಿದ್ದಾರೆ.

  See also  ಜ.2ರಂದು ಮದುವೆಯಾಗಿ ಒಂದು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ್ದ ಯೋಧ ಕಾಶ್ಮೀರದಲ್ಲಿ ನಿಧನ

  ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಅನಾವರಣ ಮಾಡುವುದಕ್ಕಾಗಿ ಎಂಎಸ್‌ಆರ್‌ಐಟಿ ಪ್ರತಿವರ್ಷ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ಅದರಂತೆ ಈ ಬಾರಿಯೂ 380ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳ ಮೂಲಕ 1400 ವಿದ್ಯಾರ್ಥಿಗಳು ತಮ್ಮ ಕ್ರಿಯಾತ್ಮಕ ಪ್ರತಿಭೆಯನ್ನು ಹೊರಸೂಸಿದ್ದಾರೆ. ಸಂಸ್ಥೆ ಆ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.

  ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ

  ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ’33 ವರ್ಷದ ಹಿಂದೆ ನಾನು ಇದೇ ಕಾಲೇಜಿನಲ್ಲಿ ಓದಿದವನು. ಕಾಲೇಜಿನಲ್ಲಿ ಏರ್ಪಡಿಸುವ ಪ್ರಾಜೆಕ್ಟ್ ಎಕ್ಸಿಬಿಶನ್ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಕೆಲವೊಂದು ವಿದ್ಯಾರ್ಥಿಗಳು ಆವಿಷ್ಕರಿಸಿರುವ ಪ್ರಾಜೆಕ್ಟ್‌ಗಳು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಹಾಯಕವಾಗುವಂತಿವೆ. ಎಂಎಸ್‌ಆರ್‌ಐಟಿ ಎಂದರೆ ಕ್ರಿಯೇಟಿವಿಟಿಗೆ ಹೆಸರುವಾಸಿ ಎಂಬುದು ಇ ಮೂಲಕ ಸಾಭೀತಾಗಿದೆ.’

  ಲೋಕೇಶ್ವರ ಬೋರೇಗೌಡ, ನಿರ್ದೇಶಕರು, ಸ್ಯಾಮ್‌ಸಾಂಗ್ ಆರ್ ಆ್ಯಂಡ್ ಡಿ ಇನ್‌ಸ್ಟಿಟ್ಯೂಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts