More

    ದೀನ ಸೇವಾ ಸಂಘದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

    ಬೆಂಗಳೂರು: ಶೇಷಾದ್ರಿಪುರದಲ್ಲಿರುವ ದೀನ ಸೇವಾ ಸಂಘ ವಿದ್ಯಾರ್ಥಿ ನಿಲಯಕ್ಕೆ 2024-25 ನೇ ಸಾಲಿಗೆ ತೇರ್ಗಡೆಯಾದ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಪುಸ್ತಕ, ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳನ್ನು ನೀಡಲಾಗುತ್ತದೆ. ಗ್ರಾಮಿಣ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

    ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ನಿಲಯದ ಕಛೇರಿಯಲ್ಲಿ ಅರ್ಜಿ ಪಡೆದು ಮೇ 30 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೀನ ಸೇವಾ ಸಂಘ ವಿದ್ಯಾರ್ಥಿ ನಿಲಯ, ನಂ.22, ರಿಸಲ್ದಾರ್ ರಸ್ತೆ, (ಕೊಳಚೇ ನಿರ್ಮೂಲನಾ ಮಂಡಳಿ ಮುಂಭಾಗ), ಶೇಷಾದ್ರಿಪುರ, ಬೆಂಗಳೂರು 560 020. ದೂ : 9845435503, 9483991630 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts