More

    ವಿದ್ಯಾರ್ಥಿಯನ್ನು ಕಾಮದ ಬಲೆಗೆ ಬೀಳಿಸಿ ಜೈಲು ಪಾಲಾಗಿದ್ದ ಶಿಕ್ಷಕಿ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿ!

    ಲಂಡನ್​: ಪಾಲಕರು ಮಕ್ಕಳಿಗೆ ಜನ್ಮ ನೀಡಿದರೆ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇಡಲು ಗುರುಗಳು ನೆರವಾಗುತ್ತಾರೆ. ಆದ್ದರಿಂದಲೇ ಶಿಕ್ಷಕರನ್ನು ದೇವರ ರೂಪಕ್ಕೆ ಹೋಲಿಸುತ್ತಾರೆ. ಗುರು ಬ್ರಹ್ಮಃ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮಃ ತಸ್ಮೈಶ್ರೀ ಗುರವೇ ನಮಃ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಗುರು-ಶಿಷ್ಯರ ನಡುವೆ ಉತ್ತಮ ಸಂಬಂಧವಿತ್ತು. ಆದರೆ ಈಗ ಕೆಲವರು ಮಾಡುವ ದುಷ್ಕೃತ್ಯಗಳಿಂದ ಗುರುವಿನ ಸ್ಥಾನಕ್ಕೆ ಕಳಂಕ ಮೆತ್ತಿಕೊಳ್ಳುತ್ತಿದೆ. ಶಾಲೆಗೆ ಬರುವಾಗ ಮದ್ಯಪಾನ ಮಾಡುವುದು, ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದುವುದು, ಸಹ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಕರಣಗಳನ್ನು ಈಗಾಗಲೇ ಸಾಕಷ್ಟು ನೋಡಿದ್ದೇವೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಗರ್ಭ ಧರಿಸುವ ಮೂಲಕ ಸುದ್ದಿಯಾಗಿದ್ದಾಳೆ. ಈ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

    ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕಾದ ಕೆಲ ಶಿಕ್ಷಕರು ದೌರ್ಜನ್ಯ ಎಸಗುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಪುಸಲಾಯಿಸಿ, ತಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು, ತಮ್ಮ ಪ್ರಣಯ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ವಿದ್ಯಾರ್ಥಿಯ ಪಾಲಕರು ಶಿಕ್ಷಕಿಯ ಮೇಲೆ ದೂರು ನೀಡಿದಾಗ ಆಕೆಯನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಶಿಕ್ಷಕಿ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಾಳೆ. ಆಕೆಯೊಂದಿಗೆ ಅಕ್ರಮ ಸಂಬಂಧದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಬ್ಬರೂ 18 ವರ್ಷದೊಳಗಿನವರು ಎಂದು ತಿಳಿದುಬಂದಿದೆ.

    ಆರೋಪಿ ರೆಬೆಕಾ ಜೋಯ್ನಸ್​ (30) ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. 2021ರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾಗ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಆ ಸಮಯದಲ್ಲಿ ರೆಬೆಕ್ಕಾ, ವಿದ್ಯಾರ್ಥಿಗೆ 345 ಡಾಲರ್​ ಮೌಲ್ಯದ ಗುಸ್ಸಿ ಡಿಸೈನರ್ ಬೆಲ್ಟ್ ಅನ್ನು ಖರೀದಿಸಿದ್ದಳು. ಈ ಮೂಲಕ ವಿದ್ಯಾರ್ಥಿಯನ್ನು ತನ್ನ ಕಾಮದ ಬಲೆಗೆ ಬೀಳಿಸಿಕೊಂಡಿದ್ದಳು. ಮ್ಯಾಂಚೆಸ್ಟರ್‌ನಲ್ಲಿರುವ ತನ್ನ ಫ್ಲಾಟ್‌ಗೆ ಕರೆದೊಯ್ದು ತನ್ನ ಲೈಂಗಿಕ ಆಸೆಗಳನ್ನು ಪೂರೈಸಿಕೊಂಡಿದ್ದಳು. ಇದನ್ನು ವಿದ್ಯಾರ್ಥಿ ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದ. ಈ ವಿಚಾರ ಪಾಲಕರಿಗೆ ತಿಳಿದು ದೂರು ನೀಡಿದಾಗ ಇವರಿಬ್ಬರ ಅಫೇರ್ ಬೆಳಕಿಗೆ ಬಂದಿತ್ತು. ಪೊಲೀಸರು ರೆಬೆಕಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಶಾಲಾ ಆಡಳಿತ ಮಂಡಳಿಯು ಸಹ ಆಕೆಯನ್ನು ಅಮಾನತು ಮಾಡಿದೆ.

    ಇತ್ತೀಚೆಗಷ್ಟೇ ರೆಬೆಕಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ವಿಚಾರಣೆಯ ಸಮಯದಲ್ಲಿ ಆಕೆ ಜಾಯ್ ನೆಸ್ ಎಂಬ ಇನ್ನೊಬ್ಬ ಹುಡುಗನ ಸಂಪರ್ಕಕ್ಕೆ ಬಂದಿದ್ದಳು. ತನ್ನ ಟಾಪ್‌ಲೆಸ್ ಫೋಟೋಗಳನ್ನು ಸ್ನ್ಯಾಪ್ ಚಾಟ್‌ನಲ್ಲಿ ಕಳುಹಿಸಿ, ಹುಡುಗನನ್ನು ತನ್ನ ಬಲೆಗೆ ಬೀಳಿಸಿಕೊಂಡು ಮತ್ತೆ ತನ್ನ ಕಾಮದ ಬಯಕೆಗಳನ್ನು ತೀರಿಸಿಕೊಂಡಿದ್ದಳು. ಅಲ್ಲದೆ, ಆ ಹುಡುಗನಿಂದ ರೆಬೆಕಾ ಗರ್ಭಿಣಿಯಾಗಿದ್ದಾಳೆ ಎಂದು ಪ್ರಾಸಿಕ್ಯೂಟರ್​ಗಳು ಬಹಿರಂಗಪಡಿಸಿದ್ದಾರೆ. ಎರಡನೇ ಹುಡುಗನಿಗೆ 16 ವರ್ಷ ತುಂಬಿದ ನಂತರ ತಾನು ಲೈಂಗಿಕ ಕ್ರಿಯೆ ನಡೆಸಿದ್ದೇನೆ ಎಂದು ರೆಬೆಕಾ ಹೇಳಿದ್ದಾಳೆ. ಬ್ರಿಟನ್‌ನಲ್ಲಿ ಸಂಚಲನ ಮೂಡಿಸಿರುವ ಈ ಪ್ರಕರಣ ಸದ್ಯ ತನಿಖೆಯ ಹಂತದಲ್ಲಿದೆ. (ಏಜೆನ್ಸೀಸ್​)

    ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್! ಕಿರುತೆರೆ ನಟಿ ಕೊಟ್ಟ ಸ್ಪಷ್ಟನೆ ಹೀಗಿದೆ…​

    ಯೂಟ್ಯೂಬ್​​​ ಚಾನೆಲ್​​ ಸಬ್​ಸ್ಕ್ರೈಬ್​ ಮಾಡಿ ಜ್ಯೋತಿ ರೈ ವಿಡಿಯೋ ಅಪ್​ಲೋಡ್​ ಮಾಡ್ತೀನಿ ಎಂದ ಕಿಡಿಗೇಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts