ಕರೊನಾ ಲಸಿಕೆ ಪಡೆದ 12,400 ಮಂದಿಯಲ್ಲಿ ಸೋಂಕು ದೃಢ!

corona
Published on

ಜೆರುಸಮಲೆಮ್​: ಇಸ್ರೇಲ್​ನಲ್ಲಿ ಕರೊನಾ ಸೋಂಕಿಗೆ ಫೈಜರ್​ ಲಸಿಕೆ ಪಡೆದ 12,400ಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಕೆಲವರು ಲಸಿಕೆಯ ಎರಡನೇ ಡೋಸೇಜ್​ನ್ನೂ ಪಡೆದಿದ್ದರು ಎನ್ನಲಾಗಿದೆ.

ಕರೊನಾ ಲಸಿಕೆ ಪಡೆದ 1.89 ಲಕ್ಷ ಜನರಿಗೆ ಮತ್ತೊಮ್ಮೆ ಕರೊನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಶೇ. 6.6 ಜನರಿಗೆ ಸೋಂಕು ದೃಢವಾಗಿದೆ. ಫೈಜರ್​ ಲಸಿಕೆಯ ಎರಡನೇ ಡೋಸೇಜ್​ನ್ನು ಪಡೆದಿದ್ದ 69 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಲಸಿಕೆ ನಾವೆಂದುಕೊಂಡಿದ್ದಕ್ಕಿಂತ ಕಡಿಮೆ ಸಾಮರ್ಥ್ಯ ತೋರಿಸಿದೆ ಎಂದು ಸಾಂಕ್ರಾಮಿಕ ರೋಗದ ರಾಷ್ಟ್ರೀಯ ಸಂಯೋಜಕರಾದ ನಾಚ್ಮನ್ ಆಶ್ ತಿಳಿಸಿದ್ದಾರೆ.

ಇಸ್ರೇಲ್​ನಲ್ಲಿ ಡಿಸೆಂಬರ್​ 19ರಿಂದ ಫೈಜರ್​ ಲಸಿಕೆ ವಿತರಣೆ ಮಾಡಲಾಗುತ್ತಿದೆ. 90 ಲಕ್ಷ ಜನಸಂಖ್ಯೆಯಲ್ಲಿ ಈಗಾಗಲೇ ಶೇ. 25 ಜನರಿಗೆ ಅಂದರೆ 22 ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಶೇ. 3.5 ಜನರಿಗೆ ಲಸಿಕೆಯ ಎರಡನೇ ಡೋಸೇಜ್​ನ್ನೂ ನೀಡಲಾಗಿದೆ. ಇನ್ನೂ ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಮತ್ತು 4,005 ಜನರು ಸೋಂಕಿಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net