More

    ಸೆರಂ ಇನ್​ಸ್ಟಿಟ್ಯೂಟ್​ ಬೆಂಕಿ ಅವಘಡಕ್ಕೆ ಐದು ಬಲಿ; ಲಸಿಕೆಗೆ ತೊಂದರೆಯಾಗಿಲ್ಲ ಎಂದ ಸಂಸ್ಥೆ

    ಪುಣೆ: ಆಕ್ಸ್​ಫರ್ಡ್​ ಮತ್ತು ಅಸ್ತ್ರಾಜೆನೆಕಾ ಸಂಸ್ಥೆ ತಯಾರಿಸಿರುವ ಕೋವಿಶೀಲ್ಡ್​ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಅವಘಡದಲ್ಲಿ ಲಸಿಕೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: ಸುಶಾಂತ್ ಮೃತಪಟ್ಟು ಇಂದಿಗೆ ಏಳು ತಿಂಗಳಾದವು; ಎಲ್ಲಿಗೆ ಬಂತು ನಿಗೂಢ ಸಾವಿನ ತನಿಖೆ?

    ಗುರುವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡಕ್ಕೆ ಕನಿಷ್ಠ ಐದು ಮಂದಿ ಮೃತರಾಗಿರುವುದಾಗಿ ಪುಣೆ ಜಿಲ್ಲಾಧಿಕಾರಿ ರಾಜೇಶ್​ ದೇಶ್​ಮುಖ್​ ತಿಳಿಸಿದ್ದಾರೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಒಳಗೆ ನೋಡಿದಾಗ ಐದು ಮೃತ ದೇಹಗಳು ಸಿಕ್ಕಿವೆ ಎಂದು ಪುಣೆಯ ಮೇಯರ್​ ಮುರುಳಿಧರ್​ ಮೊಹೊಲ್​ ತಿಳಿಸಿದ್ದಾರೆ. ಮೃತರಾದವರೆಲ್ಲರೂ ಕಟ್ಟದ ಕಾಮಗಾರಿಯಲ್ಲಿ ತೊಡಗಿಕೊಂಡವರಾಗಿದ್ದರು ಎನ್ನಲಾಗಿದೆ.

    ಬೆಂಕಿ ಕಾಣಿಸಿಕೊಂಡ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿತ್ತು. ಅಲ್ಲಿ ಯಾವುದೇ ಲಸಿಕೆ ಉತ್ಪಾದನೆಯಾಗಲೀ ಅಥವಾ ಶೇಖರಣೆ ಆಗಿರಲಿಲ್ಲ. ಕಟ್ಟಡದಲ್ಲಿ ವೆಲ್ಡಿಂಗ್​ ಕೆಲಸ ಮಾಡಲಾಗುತ್ತಿತ್ತು. ಅದೇ ಕಾರಣದಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

    ಇದನ್ನೂ ಓದಿ: ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

    ಪುಣೆಯ ಮಂಜಿರಾ ಪ್ರದೇಶದಲ್ಲಿರುವ ಸೆರಂ ಇನ್‌ಸ್ಟಿಟ್ಯೂಟ್​ನ ಟರ್ಮಿನಲ್ ಗೇಟ್-1 ಒಳಗಿನ SEZ-3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ 10 ವಾಹನಗಳು ಮತ್ತು ಎನ್​ಡಿಆರ್​ಎಫ್​ ತಂಡ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ, ಒಳಗಿದ್ದವರನ್ನು ರಕ್ಷಣೆ ಮಾಡಿದೆ. (ಏಜೆನ್ಸೀಸ್​)

    ಕರೊನಾ ಲಸಿಕೆ ಉತ್ಪಾದನಾ ಕೇಂದ್ರಕ್ಕೇ ಬೆಂಕಿ! ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ಬೆಂಕಿ ಅವಘಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts