ನದಿಗೆ ಉರುಳಿದ ಬಸ್; 12 ಮಂದಿ ಮೃತ್ಯು!

ವಿಜಯವಾಣಿ - 2024-01-13T195903.715
Published on

ಕಠ್ಮಂಡು: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಬಸ್​ವೊಂದು ಸೇತುವೆಯಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ 12 ಜನರು ಸಾವನ್ನಪ್ಪಿದ ಘಟನೆ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರ ಪೈಕಿ ಎಂಟು ಜನರ ಗುರುತು ಮಾತ್ರ ಇನ್ನೂ ತಿಳಿದುಬಂದಿಲ್ಲ ಎಂದು ವರದಿಯಾಗಿದೆ. "ಪ್ಯಾಸೆಂಜರ್ ಬಸ್ ಬಂಕೆಯ ನೇಪಾಲ್‌ಗುಂಜ್‌ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಆದರೆ ಸೇತುವೆಯಿಂದ ರಾಪ್ತಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಎಂಟು ಮೃತ ಪ್ರಯಾಣಿಕರ ಗುರುತನ್ನು ಮಾತ್ರ ನಾವು ಖಚಿತಪಡಿಸಿದ್ದೇವೆ" ಎಂದು ಪೊಲೀಸ್ ಮುಖ್ಯ ಇನ್ಸ್‌ಪೆಕ್ಟರ್ ಉಜ್ವಲ್ ಬಹದ್ದೂರ್ ಸಿಂಗ್ ಏರಿಯಾ ಪೊಲೀಸ್ ಕಛೇರಿ ತಿಳಿಸಿದೆ.

ಪೊಲೀಸರ ಪ್ರಕಾರ ಬಸ್ ಅಪಘಾತದಲ್ಲಿ ಹೆಚ್ಚುವರಿ 22 ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಭಾರತೀಯರನ್ನು ಬಿಹಾರದ ಮಲಾಹಿ ಮೂಲದ ಯೋಗೇಂದ್ರ ರಾಮ್ (67) ಮತ್ತು ಉತ್ತರ ಪ್ರದೇಶದ ಮುನೆ (31) ಎಂದು ಗುರುತಿಸಲಾಗಿದೆ. "ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಮಾಹಿ ಆಸ್ಪತ್ರೆಗೆ ರವಾನಿಸಲಾಗಿದೆ" ಎಂದು ಮುಖ್ಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net