

ಹೊಸದಿಲ್ಲಿ: ಪ್ರಪ್ರಥಮ ಬಾರಿಗೆ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಪ್ರಯತ್ನವೊಂದು ಚಾಲ್ತಿಗೆ ಬಂದಿದ್ದು, ಗಲ್ಲಿ-ಗಲ್ಲಿಗಳಲ್ಲಿ, ರಸ್ತೆಯ ಮೂಲೆ ಮೂಲೆಗಳಲ್ಲಿ ಟೆನ್ನಿಸ್ ಬಾಲ್ ಹಿಡಿದು ದೊಡ್ಡ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡುವ ಕನಸು ಕಾಣುತ್ತಿದ್ದ ಅದೆಷ್ಟೋ ಯುವಕರ ಆಸೆ 2024ರಲ್ಲಿ ಈಡೇರುತ್ತಿದೆ ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಅನೇಕರಲ್ಲಿ ಭಾರೀ ಸಂತಸ ಮೂಡಿಸಿದೆ.
ಇದನ್ನೂ ಓದಿ: ಜಾತಿ ವಿರುದ್ಧ ವಚನಕಾರರ ಹೋರಾಟ ಇಂದಿಗೂ ಅನುಕರಣೀಯ
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಘೋಷಣೆಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇದರ ಕೋರ್ ಕಮಿಟಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕೂಡ ಅಧಿಕೃತವಾಗಿ ಹೊರಬಿದ್ದಿದೆ. ಈ ಹೊಚ್ಚ ಹೊಸ ಟಿ-10 ಕ್ರಿಕೆಟ್ ಲೀಗ್ ಸಚಿನ್ ಅವರ ಸಹಯೋಗದಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು ಇರಲಿವೆ.
ಎಂಟು ತಂಡಗಳ ಪೈಕಿ ಪ್ರತಿ ಟೀಮ್ಗೂ ಭಾರತೀಯ ಚಲನಚಿತ್ರರಂಗದ ಸ್ಟಾರ್ ನಟ-ನಟಿಯರು ಮಾಲೀಕರಾಗಿ ತಮ್ಮ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ. 'ಸ್ಟ್ರೀಟ್ ಟು ಸ್ಟೇಡಿಯಂ' ಉದ್ದೇಶದಡಿ ನಡೆಸಲಾಗುತ್ತಿರುವ ಈ ಲೀಗ್ನಲ್ಲಿ ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಶ್ರೀನಗರ ಟೀಮ್ಗಳು ಅಖಾಡಕ್ಕೆ ಇಳಿಯಲಿವೆ.
ಇದನ್ನೂ ಓದಿ: ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಲಿ
ತಂಡಗಳು ಓನರ್ಸ್ ವಿವರ ಹೀಗಿದೆ:
ಹೈದರಾಬಾದ್: ರಾಮ್ಚರಣ್
ಕೋಲ್ಕತ್ತಾ: ಸೈಫ್ ಅಲಿ ಖಾನ್, ಕರೀನಾ ಕಪೂರ್
ಚೆನ್ನೈ: ಸೂರ್ಯ
ಬೆಂಗಳೂರು: ಹೃತಿಕ್ ರೋಷನ್
ಮುಂಬೈ: ಅಮಿತಾಬ್ ಬಚ್ಚನ್
ಶ್ರೀನಗರ: ಅಕ್ಷಯ್ ಕುಮಾರ್