More

    ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಅಪರಾಧವೇ? ಮದ್ರಾಸ್​ ಹೈಕೋರ್ಟ್​ ಕೊಟ್ಟ ತೀರ್ಪಿದು…

    ಚೆನ್ನೈ: ಧೂಮಪಾನ ಮತ್ತು ಮದ್ಯಪಾನಕ್ಕಿಂತ ಅಶ್ಲೀಲ ವಿಡಿಯೋ ವೀಕ್ಷಣೆಯು ಯುವ ಪೀಳಿಗೆಯಲ್ಲಿ ಒಂದು ದೊಡ್ಡ ಗೀಳಾಗಿ ಪರಿಣಮಿಸಿದೆ ಮದ್ರಾಸ್​ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.​

    ಎಲೆಕ್ಟ್ರಾನಿಕ್​ ಸಾಧನದಲ್ಲಿ ಖಾಸಗಿಯಾಗಿ ಮಕ್ಕಳ ಅಶ್ಲೀಲ ವಿಡಿಯೋವನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು POCSO ಮತ್ತು IT ಕಾಯಿದೆಯ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಲಯ ತಿಳಿಸಿದೆ.

    ಪ್ರಸ್ತುತ ದಿನಗಳಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಗೀಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂದಿನ ಪೀಳಿಗೆಯ ಮಕ್ಕಳು ಗಂಭೀರ ಸಮಸ್ಯೆಯಿಂದ ನರಳುತ್ತಿದ್ದು, ಅವರನ್ನು ದೂಷಿಸಿ ಶಿಕ್ಷಿಸುವ ಬದಲು ಸಮಾಜವು ಅವರಿಗೆ ಸೂಕ್ತ ಸಲಹೆ ನೀಡಿ ಶಿಕ್ಷಣ ನೀಡುವ ಮೂಲಕ ಪ್ರಬುದ್ಧರನ್ನಾಗಿ ಮಾಡಿ ಇಂತಹ ಚಟದಿಂದ ಹೊರಗೆ ತರಬೇಕು ಎಂದು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.

    ಇಂದು ಒಂದೇ ಒಂದು ಕ್ಲಿಕ್​ನಲ್ಲಿ ಅಶ್ಲೀಲ ವಿಡಿಯೋಗಳ ಅಂತ್ಯವಿಲ್ಲದಷ್ಟು ಪೇಜ್​ಗಳು ಯುವಕರ ಮುಂದೆ ತೆರೆದುಕೊಳ್ಳುತ್ತಿರುವುದೇ ಇದಕೆಲ್ಲ ಕಾರಣವಾಗಿದೆ. ಇದಕೆಲ್ಲ ಅಂತರ್ಜಾಲವೇ ಹೊಣೆಯಾಗಿದೆ ಎಂದು ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಹೇಳಿದರು.

    ಏನಿದು ಪ್ರಕರಣ?
    ಮಕ್ಕಳ ಅಶ್ಲೀಲ ವಿಡಿಯೋವನ್ನು ಡೌನ್​ಲೋಡ್​ ಮಾಡಿ ವೀಕ್ಷಣೆ ಮಾಡಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಪೊಕ್ಸೊ ಮತ್ತು ಐಟಿ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ರದ್ದು ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ, ಡೌನ್​ಲೋಡ್​ ಮಾಡಿದ ಅಶ್ಲೀಲ ವಿಡಿಯೋವನ್ನು ಇನ್ನೊಬ್ಬರಿಗೆ ಹಂಚಿಕೆ ಮಾಡಿದ್ದರೆ ಅದು ಅಪರಾಧವಾಗುತ್ತದೆ ಎಂದು ಕೋರ್ಟ್​ ಹೇಳಿತು. (ಏಜೆನ್ಸೀಸ್​)

    ಹೈದರಾಬಾದ್​ನಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ನಕಲಿ ತಯಾರಿಕಾ ಘಟಕ ಪತ್ತೆ: ರೋಚಕ ಕಾರ್ಯಾಚರಣೆ ಹೀಗಿತ್ತು ನೋಡಿ..

    ನಾರ್ತ್ ವೆಸ್ಟರ್ನ್ ರೈಲ್ವೆಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ಫೆ.10 ಕೊನೇ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts