More

    ಫೋನ್ ಮೂಲಕವೇ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದ ಬೈಜೂಸ್‌

    ನವದೆಹಲಿ: ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಆನ್ಲೈನ್ ಕೋಚಿಂಗ್, ಟ್ಯೂಷನ್ ಒದಗಿಸುವ ಮೂಲಕ ಫೇಮಸ್ ಆಗಿದ್ದ ಬೈಜೂಸ್‌ ಶಿಕ್ಷಣ ಸಂಸ್ಥೆ 2022ರಿಂದಲೂ ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ತನ್ನ ಉದ್ಯೋಗಿಗಳಿ ಫೋನ್​ ಮಾಡುವ ಮೂಲಕವಾಗಿ ಕೆಲಸದಿಂದ ಕಿತ್ತು ಹಾಕಿದೆ ಎಂದು ಬೈಜೂಸ್ ಉದ್ಯೋಗಿಗಳೆ ತಮ್ಮ ಕಷ್ಟವನ್ನು ಹೇಳಿ ಕೊಂಡಿದ್ದಾರೆ.

    ಬೈಜೂಸ್‌ ಎಜುಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರಾಹುಲ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ ಮಧ್ಯದಲ್ಲಿ ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು. ಕಂಪನಿಯ ಎಚ್‌ಆರ್‌ ಕರೆ ಮಾಡಿ, ಸಂಸ್ಥೆಯೂ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ, ಮಾರನೇ ದಿನವೇ ನಿಮ್ಮ ಕೆಲಸದ ಕೊನೆ ಎಂದು ಹೇಳಿದ್ದಾರೆ.  ಸಾಕ್ಷ್ಯಕ್ಕಾಗಿ ಹೆಚ್ ಆರ್ ಜೊತೆಗಿನ ಸಂಭಾಷಣೆಯನ್ನು  ರಾಹುಲ್​ ರೆಕಾರ್ಡ್ ಮಾಡಿದ್ದಾರೆ. ಎಚ್‌ಆರ್ ಅವರು ಅನುಮತಿಯಿಲ್ಲದೆ ಏಕೆ ರೆಕಾರ್ಡ್ ಮಾಡುತ್ತಿದ್ದೀರಿ ಎಂದು ವಾದಿಸಿದ್ದಲ್ಲದೇ ಕರೆಯನ್ನು ಥಟ್ಟನೆ ಕಡಿತಗೊಳಿಸಿದರು. ಅಲ್ಲದೇ ತನ್ನ ನಂಬರ್ ಅನ್ನು ಎಚ್ ಆರ್ ಬ್ಲಾಕ್ ಮಾಡಿದ್ದಾರೆ.

    ಫೋನ್ ಕಾಲ್ ನಂತರ ನೌಕರರಿಗೆ ಇಮೇಲ್ ಕಳುಹಿಸಲಾಗುತ್ತಿದೆ. ಅದರಲ್ಲಿ ಮಾರನೇ ದಿನವೇ ಕೆಲಸದ ಕೊನೆ ದಿನ ಎಂದು ಮಾಹಿತಿ ನೀಡಲಾಗುತ್ತದೆ.  ಪೂರ್ಣ ಮತ್ತು ಅಂತಿಮ ಪರಿಹಾರವನ್ನು ಮಾಡಲಾಗುತ್ತದೆ. ನಿಮ್ಮ ಸಂಪೂರ್ಣ ಮತ್ತು ಅಂತಿಮ ಪರಿಹಾರವನ್ನು ಪ್ರಕ್ರಿಯೆಗೊಳಿಸಲು ನಿಮ್ಮ ಸ್ವಾಧೀನದಲ್ಲಿರುವ ಕಂಪನಿಯ ಎಲ್ಲಾ ಸ್ವತ್ತುಗಳು ಮತ್ತು ಸ್ವಾಮ್ಯದ ಮಾಹಿತಿಯನ್ನು ದಯವಿಟ್ಟು ಹಸ್ತಾಂತರಿಸಿ. ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು [email protected] ಅನ್ನು ಸಂಪರ್ಕಿಸಿ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.

    ಪಿಐಪಿ ಅಥವಾ ನೋಟೀಸ್ ಪಿರೇಡ್ ಯಾವುದನ್ನು ನಡೆಸದೇ ಕೇವಲ ಫೋನ್ ಕರೆ ಮಾಡಿ ಆಗಿಂದಾಗಲೇ ಉದ್ಯೋಗಿಗಳನ್ನು ಬೈಜೂಸ್  ವಜಾ ಮಾಡುತ್ತಿದೆ. ಈ ಸುತ್ತಿನಲ್ಲಿ 100ರಿಂದ 500ರವರೆಗೆ ಉದ್ಯೋಗಿಗಳ ವಜಾ ಮಾಡಲಾಗುತ್ತಿದೆ.

    ಕಳೆದೆರಡು ವರ್ಷದಿಂದ ಸಂಸ್ಥೆಯ ಹಣಕಾಸು ನಿಧಿ ಇಳಿಮುಖವಾಗಿದ್ದು, ಹೂಡಿಕೆದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ಕಾನೂನು ಸಮರ ನಡೆಯುತ್ತಿರುವುದರಿಂದ ಬೈಜುಸ್ ಕನಿಷ್ಠ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

    ಮೋದಿ ಪಿಎಂ ಆದ್ರೆ..ಚಿಕನ್‌, ಮಟನ್‌ ತಿನ್ನೋದು ಬ್ಯಾನ್‌!; ಚುನಾವಣಾ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts