More

    ಫೆಮಾ ಕಾಯ್ದೆ ಉಲ್ಲಂಘನೆ; ಬೈಜುಸ್​ಗೆ ಇಡಿ ಶೋಕಾಸ್ ನೋಟಿಸ್

    ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರತಿಷ್ಠಿತ ಆನ್​ಲೈನ್​ ಶಿಕ್ಷಣ ಸಂಸ್ಥೆ ಬೈಜುಸ್​ಗೆ ಜಾರಿ ನಿರ್ದೇಶನಾಲಯ (ED) ಶೋಕಾಸ್ ನೋಟಿಸ್​ ಜಾರಿ ಮಾಡಿದೆ.

    ವಿದೇಶಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ 9,000 ಕೋಟಿ ಮೊತ್ತದ ದಂಡವನ್ನು ಕಟ್ಟುವಂತೆ ಬೈಜುಸ್​ ಮುಖ್ಯಸ್ಥ ರವೀಂದ್ರನ್​ ಬೈಜು, ಥಿಂಕ್​ ಅಂಡ್​ ಲರ್ನ್​ ಪ್ರೈವೇಟ್​ ಲಿಮಿಟೆಡ್​ಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಬೈಜುಸ್​ ಸಂಸ್ಥೆ, ಜಾರಿ ನಿರ್ದೇಶನಾಲಯದಿಂದ ಸಂಸ್ಥೆಗೆ ಯಾವುದೇ ರೀತಿಯ ನೋಟಿಸ್​ ಜಾರಿ ಮಾಡಲಾಗಿಲ್ಲ ಎಂದು ತನ್ನ ಮೇಲೆ ಮಾಡಲಾಗಿರುವ ಆರೋಪಗಳನ್ನು ನಿರಾಕರಿಸಿದೆ.

    ಸುದ್ದಿ ಮೂಲಗಳ ಪ್ರಕಾರ ಬೈಜುಸ್​ ಮುಖ್ಯಸ್ಥ ರವೀಂದ್ರನ್ 2011 ರಿಂದ 23ರ ವರೆಗೆ ಸುಮಾರು ₹ 28,000 ಕೋಟಿಗಳಷ್ಟು ವಿದೇಶಿ ನೇರ ಹೂಡಿಕೆಯನ್ನು (FDI) ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಅವಧಿಯಲ್ಲಿ ಸುಮಾರು 9,754 ಕೋಟಿ ರೂಪಾಯಿಗಳಷ್ಟು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts