112 ಕಾರ್ಖಾನೆಗಳು ಬಂದ್; ಮುಚ್ಚಿಸಿದ್ಯಾರು, ಯಾಕೆ?

Pollution
Published on

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 2011ರಿಂದ 2022ವರೆಗೆ ನಗರದಲ್ಲಿ ನಿಯಮ ಪಾಲಿಸದ 112 ಕಾರ್ಖಾನೆಗಳನ್ನು ಮುಚ್ಚಿಸಿದೆ.

ಕರ್ನಾಟಕ ಜಲ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಹಾಗೂ ಕಲುಷಿತ ಜಲಮೂಲ ಪತ್ತೆಯಾದ ಹಿನ್ನೆಲೆಯಲ್ಲಿ ಡೈಯಿಂಗ್ ಘಟಕಗಳು, ಗಾರ್ಮೆಂಟ್ ಸಂಬಂಧಿತ ಉತ್ಪನ್ನಗಳ ಘಟಕಗಳು ಹಾಗೂ ನೀರಿನ ಸೇವಾ ಘಟಕಗಳನ್ನು ಮುಚ್ಚಲಾಗಿದೆ.

ಬೊಮ್ಮನಹಳ್ಳಿ ವಲಯ 46, ಆರ್.ಆರ್.ನಗರ ವಲಯ 18, ದಾಸರಹಳ್ಳಿ ವಲಯ 17, ಪೂರ್ವ16, ಮಹದೇವಪುರ ವಲಯ 11, ಪೀಣ್ಯ 3 ಹಾಗೂ ಯಲಹಂಕ ವಲಯ 1 ಸೇರಿ 112 ಕೈಗಾರಿಕೆಗಳನ್ನು ಬಂದ್ ಮಾಡಲಾಗಿದೆ. ಎರಡು ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಸುರಕ್ಷತಾ ಕಾರ್ಯವಿಧಾನಗಳನ್ನು ಪಾಲಿಸದೆ ಜಲಮಾಲಿನ್ಯಗೊಳಿಸಿದ ಪರಿಣಾಮ 2021ರಲ್ಲಿ ಬಿಬಿಎಂಪಿ ವ್ಯಾಪ್ತಿಯ 16 ಡೈಯಿಂಗ್ ಘಟಕಗಳು ಮುಚ್ಚಿಸಲಾಗಿದೆ. ಅಲ್ಲದೆ, 2022ರಲ್ಲಿ 18 ಕೈಗಾರಿಕೆಗಳನ್ನು ಬಂದ್ ಮಾಡುವಂತೆ ಮಂಡಳಿ ಆದೇಶ ಹೊರಡಿಸಿದೆ. ಕೈಗಾರಿಕಾ ವಲಯದಲ್ಲಿ ರಾಜ್ಯ ಸರ್ಕಾರವು ಕೆಂಪು, ಕಿತ್ತಳೆ, ಹಸಿರು ಮತ್ತು ಬಿಳಿ ವರ್ಗಗಳಾಗಿ ವಿಂಗಡಿಸಿದೆ. ಹೆಚ್ಚು ಮಾಲಿನ್ಯ ಮಾಡುವ ಕೈಗಾರಿಕೆಗಳನ್ನು ಮುಲಾಜಿಲ್ಲದೆ ಬಂದ್ ಮಾಡಲಾಗುವುದು ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net