ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು

fish
Published on

ಪಟನಾ: ಮದುವೆಯಾಗುವ ವಧು ವರರ ಕುಟುಂಬದ ನಡುವೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುವುದನ್ನು ನೋಡಿರುತ್ತೀರಿ. ಆದರೆ ಊಟದಲ್ಲಿ ಬಡಿಸಲಾಗುವ ಮೀನಿನ ತಲೆಗಾಗಿ ಹೊಡೆದಾಟ ಆಗುತ್ತದೆ ಎಂದರೆ ನಂಬುತ್ತೀರಾ?

ಹೌದು. ಇಂತದ್ದೊಂದು ವಿಚಿತ್ರ ಘಟನೆ ಬಿಹಾರದ ಗೋಪಾಲ್​ಗಂಜ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣ ತಂದು ಮದುವೆ ಮಾಡಿದ್ದ ವಧುವಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟಕ್ಕೆಂದು ಕುಳಿತಿದ್ದರು. ಭರ್ಜರಿ ಬಾಡೂಟವೂ ನಡೆಯುತ್ತಿತ್ತು. ಈ ವೇಳೆ ವಧುವಿನ ಕಡೆಯ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ ಕೇಳಿದ್ದಾನೆ. ಆದರೆ ವರನ ಕಡೆಯಿಂದ ಊಟ ಬಡಿಸುವ ಕೆಲಸದಲ್ಲಿ ತೊಡಗಿಸಿಕೊಂಡವರು ಅದನ್ನು ತಂದು ಹಾಕುವುದಕ್ಕೆ ತಡವಾಗಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಕೋಲು, ಕಬ್ಬಿಣದ ರಾಡಿನಿಂದಲೂ ಹೊಡೆದಾಡಿಕೊಂಡಿದ್ದಾರೆ.

ಈ ಹೊಡೆದಾಟದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯ 11 ಜನರಿಗೆ ಗಾಯವಾಗಿದೆ. ಅನೇಕರ ತಲೆ, ಕೈ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ 11 ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net