More

    ಪೊಲೀಸರ ಬೈಕಿಗೇ ಇಲ್ಲ ರಕ್ಷಣೆ: ಠಾಣೆ ಮುಂದೆ ನಿಲ್ಲಿಸಿದ್ದ ಬೈಕನ್ನೇ ಹೊತ್ತೊಯ್ದ ಕಳ್ಳರು

    ಬೆಂಗಳೂರು: ಸಾರ್ವಜನಿಕ ಪ್ರದೇಶದಲ್ಲಿ ನಿಲುಗಡೆ ಮಾಡುವ ದ್ವಿಚಕ್ರ ವಾಹನಗಳಿಗೆ ರಕ್ಷಣೆ ಇಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ ದಂಡು ರೈಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿ ನಿಲುಗಡೆ ಮಾಡಿದ್ದ ಬೈಕ್‌ನ್ನು ಕಳ್ಳರು ಕದ್ದಿದ್ದಾರೆ.

    ದಂಡು ರೈಲ್ವೆ ಪೊಲೀಸ್ ಠಾಣೆಯ ಪಿಎಸ್‌ಐ ಭಾರತಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.

    2011ರಲ್ಲಿ ರೈಲ್ವೆ ಪೊಲೀಸ್ ಠಾಣೆಗೆ ಹಿರೋ ಹೊಂಡ ಸ್ಪ್ಲೆಂಡರ್ ಬೈಕ್ ಸರ್ಕಾರದಿಂದ ಹಂಚಿಕೆಯಾಗಿತ್ತು. ಠಾಣೆಯ ಸಿಬ್ಬಂದಿ ಇದನ್ನು ಬಳಸುತ್ತಿದ್ದರು. ಹೆಡ್‌ಕಾನ್‌ಸ್ಟೇಬಲ್ ಕೃಷ್ಣಮೂರ್ತಿ ಕಳೆದ ಮೇ 26ರಂದು ಬೆಳಗ್ಗೆ 10 ಗಂಟೆಗೆ ಎಂಒಬಿ ಹಾಗೂ ಟಪಾಲು ಕರ್ತವ್ಯದ ಸಲುವಾಗಿ ವಾಹನ ತೆಗೆದುಕೊಂಡು ಹೋಗಿ ಅದೇ ದಿನ ಮಧ್ಯಾಹ್ನ 12 ಗಂಟೆಗೆ ಕರ್ತವ್ಯ ಮುಗಿಸಿಕೊಂಡು ಠಾಣೆಯ ಮುಂದಿನ ಸಾಯಿಬಾಬಾ ದೇವಾಲಯದ ಎದುರುಗಡೆ ನಿಲುಗಡೆ ಮಾಡಿದ್ದರು. ಜೂ.10ರಂದು ಕೃಷ್ಣಮೂರ್ತಿ ಕರ್ತವ್ಯದ ಮೇಲೆ ಹೊರ ಹೋಗುವ ಸಲುವಾಗಿ ಬೈಕ್ ಹುಡುಕಿದಾಗ ಠಾಣೆಯ ಮುಂಭಾಗ ಇರಲಿಲ್ಲ. ಕೃಷ್ಣಮೂರ್ತಿ ಈ ಬಗ್ಗೆ ಪಿಎಸ್‌ಐ ಭಾರತಿ ಅವರಿಗೆ ಮಾಹಿತಿ ನೀಡಿದ್ದರು. ಭಾರತಿ ಹಾಗೂ ಇತರ ಸಿಬ್ಬಂದಿ ಠಾಣೆಯ ಆಸು-ಪಾಸಿನಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಲಿಲ್ಲ. ಆಗ ಯಾರೋ ಕಳ್ಳರು ಬೈಕ್ ಕದ್ದಿರುವುದು ಗೊತ್ತಾಗಿದೆ. ಸದ್ಯದಲ್ಲೇ ಕದ್ದಿರುವ ಬೈಕ್‌ನ್ನು ಪತ್ತೆಹಚ್ಚಿ, ಕಳ್ಳನನ್ನು ಬಂಧಿಸಲಾಗುವುದು ಎಂದಿ ಪೊಲೀಸರು ತಿಳಿಸಿದ್ದಾರೆ.
    ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ ಪೊಲೀಸರ ಬೈಕ್‌ಗೆ ರಕ್ಷಣೆ ಇಲ್ಲ ಎಂದ ಮೇಲೆ ಇನ್ನು ಸಾರ್ವಜನಿಕರ ಬೈಕ್ ಗತಿ ಏನು ಎಂಬುದು ಪ್ರಶ್ನೆಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದ ಸುಳಿವು ಸಿಕ್ಕಿದರೆ ಸಾರ್ವಜನಿಕರು ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080-22871291ಗೆ ಸಂಪರ್ಕಿಸಲು ಕೋರಲಾಗಿದೆ.

    ವರ್ಷವಾದರೂ ಬರಲೇ ಇಲ್ಲ ಸಂಬಳ; ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಾರ್ಯದರ್ಶಿ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts