ಎಸ್ಸೆಸ್ಸೆಲ್ಸಿ ಪಾಸ್ ಆದ ವಿದ್ಯಾರ್ಥಿನಿ ಶಿರಚ್ಛೇಧ! ಹತ್ಯೆಗೈದ ಆರೋಪಿ ರುಂಡದ ಜತೆ ಪರಾರಿ

WhatsApp Image 2024-05-10 at 10.09.49 AM
Published on

ಕೊಡಗು: ಇಡೀ ಗ್ರಾಮಸ್ಥರನ್ನೇ ಬೆಚ್ಚಿಬೀಳಿಸಿದ ಮತ್ತೊಂದು ಹತ್ಯೆ ಘಟನೆ ಇದೀಗ ಬೆಳಕಿಗೆ ಬಂದಿದ್ದು, 10ನೇ ತರಗತಿಯಲ್ಲಿ ಉತ್ತೀರ್ಣ ಆಗಿದ್ದ ವಿದ್ಯಾರ್ಥಿನಿಯ ತಲೆಕಡಿದು ವಿಕೃತ ಮೆರೆದ ವ್ಯಕ್ತಿಯೊಬ್ಬ, ಬಾಲಕಿಯ ರುಂಡದ ಜೊತೆ ಸ್ಥಳದಿಂದ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೂರ್ಲಬ್ಬಿಯಲ್ಲಿ ವರದಿಯಾಗಿದೆ.

ಸೂರ್ಲಬ್ಬಿ ವಿದ್ಯಾರ್ಥಿ ಮೀನಾ ಎಂಬ ವಿದ್ಯಾರ್ಥಿನಿ ಭೀಕರವಾಗಿ ಹತ್ಯೆಯಾಗಿದ್ದು, ಆರೋಪಿ ಬಾಲಕಿಯ ರುಂಡದ ಜೊತೆ ಪರಾರಿ ಆಗಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯ ಪತ್ತೆಗೆ ಪೊಲೀಸರು ತಂಡವನ್ನು ರೂಪಿಸಿ, ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸೂರ್ಲಬ್ಬಿ ಸರ್ಕಾರಿ ಶಾಲಾ ವಿದ್ಯಾರ್ಥಿನಿಯಾಗಿದ್ದ ಮೀನಾಗೆ 16 ವರ್ಷ ವಯಸ್ಸು ಎಂದು ವರದಿಯಾಗಿದೆ. 10ನೇ ತರಗತಿ ಫಲಿತಾಂಶದಲ್ಲಿ ಪಾಸ್​ ಆದ ಮೀನಾಗೆ ಅಂದೇ ಕುಟುಂಬಸ್ಥರು ಮದುವೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು.

16 ವರ್ಷದ ಮೀನಾಳನ್ನು 32 ವರ್ಷದ ಪ್ರಕಾಶ್ ಎಂಬಾತನೊಂದಿಗೆ ಮದುವೆ ಮಾಡಲು ನಿಶ್ಚಿತಾರ್ಥ ಸಿದ್ಧತೆ ನಡೆದಿತ್ತು. ಆದರೆ ಈ ವಿಷಯ ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಿಶ್ಚಿತಾರ್ಥ ತಡೆದಿದ್ದರು. ಎರಡು ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಎಂದು ಎಚ್ಚರಿಸಿ ಹೋಗಿದ್ದಾರೆ. ಇದಾದ ಕೆಲವೇ ಸಮಯದ ಬಳಿಕ ಬಾಲಕಿಯ ಕತ್ತು ಕತ್ತರಿಸಿದ ಮದುವೆಯಾಗಬೇಕಿದ್ದ ವ್ಯಕ್ತಿ, ಆಕೆಯ ತಲೆಯನ್ನು ಹಿಡಿದು ಪರಾರಿಯಾಗಿರುವುದು ವರದಿಯಾಗಿದೆ.

ಸದ್ಯ ಈ ಹತ್ಯೆ ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net