More

    ಹಾರ್ದಿಕ್​ಗೆ ತಪ್ಪಲಿಲ್ಲ ಛೀಮಾರಿ! ಅಂದೇ ಈ ನಿರ್ಧಾರದಲ್ಲಿ ಬದಲಾವಣೆ ತಂದಿದ್ರೆ ಇಂದು ಈ ಪರಿಸ್ಥಿತಿ ಬರ್ತಿರಲಿಲ್ಲ

    ಮುಂಬೈ: ಐಪಿಎಲ್​ನ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಆಡಿದ ಒಟ್ಟು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ ಗೆದ್ದು, ಉಳಿದೆಲ್ಲಾ ಪಂದ್ಯಗಳನ್ನು ಸೋಲುವ ಮೂಲಕ ಈ ಲೀಗ್​ನಿಂದ ಹೊರಗುಳಿದಿದೆ. ಇದು ಎಂಐ ತಂಡದ ಅಭಿಮಾನಿಗಳಿಗೆ ಅತೀವ ಬೇಸರ ತಂದಿದೆ. ಐದು ಬಾರಿ ಚಾಂಪಿಯನ್​ ಪಟ್ಟ ಪಡೆದ ಮುಂಬೈ ಇಂಡಿಯನ್ಸ್​, ಈ ಸೀಸನ್​ನಿಂದ ಈ ರೀತಿ ಹೊರಗುಳಿದಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಚಾರ ನೆಟ್ಟಿಗರಲ್ಲಿ ತೀವ್ರ ಅಸಮಾಧಾನ ತಂದಿದೆ.

    ಇದನ್ನೂ ಓದಿ: ವಿರಾಟ್​ ಸಿಡಿಲಬ್ಬರದ ಬ್ಯಾಟಿಂಗ್​ಗೆ ರೆಕಾರ್ಡ್​ಗಳು ಉಡೀಸ್​; ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಕಿಂಗ್​ ಕೊಹ್ಲಿ

    ಸತತ ಸೋಲುಗಳಿಂದ ಭಾರೀ ಮುಖಭಂಗ ಎದುರಿಸುತ್ತಿರುವ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಮೊದಲ ದಿನದಿಂದಲೂ ತಂಡದಲ್ಲಿ ಯಾವುದು ಸರಿಯಿಲ್ಲ. ಈ ಹಿಂದೆ ಐದು ಬಾರಿ ಚಾಂಪಿಯನ್ಸ್​ ಪಟ್ಟವನ್ನು ತಂದುಕೊಟ್ಟ ಹಿರಿಮೆ ಹೊಂದಿದ್ದ ರೋಹಿತ್​ ಶರ್ಮಾರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ, ಆ ಸ್ಥಾನವನ್ನು ಹಾರ್ದಿಕ್​ಗೆ ಹಸ್ತಾಂತರಿಸಿತು. ಅಂದೇ ಇಡೀ ತಂಡದಲ್ಲಿ ಒಡಕು ಮೂಡಿದ್ದು ಕಾಣಿಸಿದ್ದು.

    ಸತತವಾಗಿ ಹೀನಾಯ ಸೋಲು ಕಂಡ ತಂಡವನ್ನು ಗೆಲುವಿನ ಹಾದಿಗೆ ತರಲು ಕ್ಯಾಪ್ಟನ್ ಹಾರ್ದಿಕ್ ಶತಾಯಗತಾಯ ಪ್ರಯತ್ನ ಮಾಡಿದರು. ಆದರೆ, ಇದ್ಯಾವುದು ಫಲಿಸಲಿಲ್ಲ. ಕಳೆದ ಸೀಸನ್​​ಗಳಲ್ಲಿ ಹಿಟ್ ಮ್ಯಾನ್​ ಕ್ಯಾಪ್ಟನ್ಸಿಯಲ್ಲಿ ತಂಡ ಎದುರಾಳಿಗೆ ಭಾರೀ ಪೈಪೋಟಿ ಕೊಡುವ ಮೂಲಕ ಲೀಗ್​ನ ಟಾಪ್ ನಾಲ್ಕರೊಳಗೆ ಇರುತ್ತಿತ್ತು. ಆದ್ರೆ, ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ಮೂಲಕ ಎಂಐ ಅಂಕಪಟ್ಟಿಯಲ್ಲಿ 9 ಸ್ಥಾನ ಅಲಂಕರಿಸುವುದರ ಜತೆಗೆ ಲೀಗ್​ನಿಂದಲೇ ಎಲಿಮಿನೇಟ್ ಆಗಿ ಹೊರಗುಳಿದಿದೆ. ಟೀಮ್​ನ ನೂತನ ನಾಯಕರಾಗಿ ನೇಮಕವಾದಾಗಿನಿಂದಲೂ ಪಾಂಡ್ಯಗೆ ಭಾರೀ ಹಿನ್ನಡೆಯಾಗಿದೆ.

    ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲೂ ಜಯ: ಹರ್ಮಾನ್‌ಪ್ರೀತ್ ಕೌರ್ ಪಡೆ ಸರಣಿ ಕ್ವೀನ್‌ಸ್ವೀಪ್

    ಇದೆಲ್ಲವೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಮೂಡಿಸಿದ್ದು, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲಿರುವ ಸಿಟ್ಟು ಕಡಿಮೆಯಾಗುವಂತೆ ಮಾಡುತ್ತಿಲ್ಲ. ತಮ್ಮ ನೆಚ್ಚಿನ ತಂಡ ಈ ಸೀಸನ್​ನಲ್ಲಿ ಇಂತಹ ಕಳಪೆ ಪ್ರದರ್ಶನ ನೀಡಲು ಹಾರ್ದಿಕ್​ ನಾಯಕತ್ವವೇ ಕಾರಣ ಎಂದು ದೂರಿರುವ ಫ್ಯಾನ್ಸ್​, ಅಂದೇ ರೋಹಿತ್ ಶರ್ಮಾರಿಗೆ ಕ್ಯಾಪ್ಟನ್​ ಸ್ಥಾನ ಕೊಟ್ಟು, ತಾವು ಆಲ್​ರೌಂಡರ್​ ಆಟಗಾರನಾಗಿ ಆಡಿದ್ದರೆ, ಬಹುಶಃ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

    ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts