2ನೇ ಸುತ್ತಿನಲ್ಲಿ 1,016 ಆರ್‌ಟಿಇ ಸೀಟು ಹಂಚಿಕೆ

SCHOOL
Published on

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ 2023-24ನೇ ಶೈಕ್ಷಣಿಕ ಸಾಲಿನ 2ನೇ ಸುತ್ತಿನ ಆರ್‌ಟಿಇ ಲಿತಾಂಶ ಪ್ರಕಟಿಸಿದ್ದು, 1,016 ಸೀಟುಗಳನ್ನು ಹಂಚಿಕೆ ಮಾಡಿದೆ.

2ನೇ ಸುತ್ತಿಗೆ ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ 6,427 ಅರ್ಜಿಗಳನ್ನು ಲಾಟರಿ ಮೂಲಕ ಪರಿಗಣಿಸಲಾಗಿತ್ತು. ಈ ಪೈಕಿ 1,016 ಅರ್ಹ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪಾಲಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸೀಟು ಹಂಚಿಕೆ ಸಂದೇಶ ಕಳುಹಿಸಲಾಗಿದೆ.

ಸೀಟು ಪಡೆದುಕೊಂಡಿರುವ ಮಕ್ಕಳು ಜೂ.15ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾಗುವಂತೆ ಸೂಚಿಸಿದೆ. ಸೀಟು ಹಂಚಿಕೆ ವಿವರಗಳನ್ನು ಇಲಾಖೆ ವೆಬ್‌ಸೈಟ್ www.schooleducation.kar.nic.in ಪ್ರಕಟಿಸಲಾಗಿದೆ ಎಂದು ಆಯಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net