More

    ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ.. ಕಾಲಿನ ಮೂಳೆನೇ ಮುರಿದೋಯ್ತು!; ಕಣ್ಣೀರಿನ ಕಥೆ ಕೇಳಿ….

    ನವದೆಹಲಿ: ಭೀಕರವಾದ ಅಪಘಾತ ಅಥವಾ ಭಾರವಾದ ವಸ್ತುಗಳು ದೇಹದ ಭಾಗಗಳ ಮೇಲೆ ಬಿದ್ದಾಗ ಮೂಳೆ ಮುರಿಯುವುದುಂಟು. ಆದರೆ ಇಲ್ಲೊಬ್ಬಳು ಮಹಿಳೆ ಶೌಚಾಲಯಕ್ಕೆಂದು ಹೋಗಿ ಕುಳಿತಿದ್ದಷ್ಟೇ ಕಾಲಿನ ಮೂಳೆಯೇ ಮುರಿದು ಹೋಗಿದೆ.

    26 ವರ್ಷದ ಬೆಥನಿ ಈಸನ್ ಎನ್ನುವ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯದ ಮೇಲೆ ಕುಳಿತಾಗ ಮೊಣಕಾಲು ಮುರಿದ ನಂತರ ಆಘಾತಕಾರಿ ರೋಗ ಪತ್ತೆಯಾಗಿರುವ ಕುರಿತಾಗಿ ಹಂಚಿಕೊಂಡಿದ್ದಾರೆ.

    ನಡೆದಿದ್ದೇನು?: ಇಂಗ್ಲೆಂಡ್‌ನ ಬೆಥನಿ ಈಸನ್ ಏಳು ವರ್ಷಗಳ ಹಿಂದೆ, ಅಂದರೆ 19 ವರ್ಷದವಳಿದ್ದಾಗ ಮೊಣಕಾಲು ನೋವನ್ನು ಅನುಭವಿಸಲು ಪ್ರಾರಂಭಿಸಿದಳು. ಈ ಕುರಿತಾಗಿ ತಿಳಿಯಲು ವೈದ್ಯರನ್ನು ಸಹ ಭೇಟಿ ಮಾಡಿದರು. ವೈದ್ಯರು ಆಕೆಗೆ ಎಕ್ಸ್ ರೇ ಮಾಡಿಸಿಕೊಳ್ಳಲು ಸಲಹೆ ನೀಡಿದರು.

    ಟಾಯ್ಲೆಟ್​​ಗೆ ಕುಳಿತಿದ್ದ ಈ ಸಂದರ್ಭದಲ್ಲಿಯೇ ಮೊಣಕಾಲು ಮೂಳೆ ಮುರಿತವಾಗಿರುವುದು ತಿಳಿದು ಬಂದಿದೆ. ಮಹಿಳೆ ಆಸ್ಪತ್ರೆಗೆ ಹೋದಾಗ ವೈದ್ಯರು, ಮೊಣಕಾಲಿನಲ್ಲಿ ದೈತ್ಯ ಜೀವಕೋಶದ ಗಡ್ಡೆ ಬೆಳೆದಿದೆ. ಇದು ಮೂಳೆಗಳು ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳನ್ನು ದುರ್ಬಲಗೊಳಿಸಿದೆ ಎಂದು ತಿಳಿಸಿದರು.

    ‘ಈ ಕಾಯಿಲೆಯ ಬಗ್ಗೆ ಕೇಳಿ ಬೇಸರವಾಯಿತ್ತು. ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಆರೋಗ್ಯವಾಗುವ ಸಂಭವ ಕಡಿಮೆ ಇತ್ತು. ನಾನು ನೃತ್ಯ, ಓಟ ಮತ್ತು ಈಜುವಿಕೆಯಲ್ಲಿ ಭಾಗವಹಿಸುತ್ತಿದ್ದೇನು. ಈ ಕಾಯಿಲೆಯಿಂದ ನಾನು ಇದ್ಯಾವುದನ್ನೂ ಮತ್ತೆ ಮಾಡಲಾಗುವುದಿಲ್ಲ ಎನ್ನುವುದು ತುಂಬಾ ಕಷ್ಟವಾಗಿತ್ತು ‘ ಎಂದು ಬೆಥನಿ ಈಸನ್ ಬೇಸರ ವ್ಯಕ್ತಪಡಿಸಿದ್ದಾರೆ.

    ‘ಈ ರೀತಿಯ ಕಾಯಿಲೆ ಮಿಲಿಯನ್‌ನಲ್ಲಿ ಒಬ್ಬರಿಗೆ ಬರುತ್ತದೆ.ಈ ರೀತಿಯ ಗೆಡ್ಡೆಗಳು ಹೆಚ್ಚಾಗಿ ತೋಳುಗಳು ಮತ್ತು ಕಾಲುಗಳ ಉದ್ದನೆಯ ಮೂಳೆಗಳಲ್ಲಿ ಸಂಭವಿಸುತ್ತವೆ, ಮೂಳೆಗಳನ್ನು ಹಾನಿಗೊಳಿಸುತ್ತವೆ. ಎಲ್ಲರೂ ತಮ್ಮ ಕಾಲು ನೋವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.

    ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್​​ ಒಡೆದು ಹಾಕಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts