

ಆಂಧ್ರಪ್ರದೇಶ: ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದ್ದು, ರೈಲು ಹಳಿ ತಪ್ಪಿದ್ದರಿಂದಾಗಿ ಬೋಗಿಗಳು ಕಳಚಿಕೊಂಡ ಪ್ರಕರಣ ನಡೆದಿದೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತಕ್ಕೊಳಗಾದ ರೈಲು ವಿಶಾಖಪಟ್ಟಣದಿಂದ ರಾಯಗಡ ಕಡೆಗೆ ಸಾಗುತ್ತಿದ್ದು, ಈ ಅವಘಡದಲ್ಲಿ ಹತ್ತಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶಾಖಪಟ್ಟಣ-ಪಾಲಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣ-ರಾಯಗಡ ರೈಲುಗಳ ಹಿಂಭಾಗ ಘರ್ಷಣೆಗೆ ಒಳಗಾದ್ದರಿಂದ ಈ ಅವಘಡ ಸಂಭವಿಸಿದೆ. ಮೂರು ಬೋಗಿಗಳು ಜಖಂಗೊಂಡಿವೆ.
ಎನ್ಡಿಆರ್ಎಫ್ ಮತ್ತು ಸ್ಥಳೀಯಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಆ್ಯಕ್ಸಿಡೆಂಟ್ ರಿಲೀಫ್ ಟ್ರೇನ್ಗಳು ಸ್ಥಳಕ್ಕೆ ಧಾವಿಸಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
(ಇದು ತಕ್ಷಣದ ಸುದ್ದಿ, ಸಂಬಂಧಿತ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಅಪ್ಡೇಟ್ ಆಗಲಿದೆ)