ಸೊಂಟದ ಗಂಟಿನಲ್ಲಿತ್ತು 17 ಚಿನ್ನದ ಬಾರ್​ಗಳು!; ಓರ್ವ ಬಂಧನ

Untitled design (3)
Published on

ನವದೆಹಲಿ: ಬಾಂಗ್ಲಾದೇಶದಿಂದ ಭಾರತಕ್ಕೆ 10.25 ಕೋಟಿ ರೂಪಾಯಿ ಮೌಲ್ಯದ 17 ವಿದೇಶಿ ಚಿನ್ನದ ಬಾರ್‌ಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಕಳ್ಳಸಾಗಣೆದಾರರನ್ನು ಗಡಿ ಭದ್ರತಾ ಪಡೆ (BSF) ಶನಿವಾರ ಬಂಧಿಸಿದ್ದು, 16.7 ಕೆ.ಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದೆ.

ಸುಳಿವಿನ ಮೇರೆಗೆ ಎರಡು ಜವಾನರ ತಂಡಗಳು ರಾಣಾಘಾಟ್ ಗಡಿ ಹೊರಠಾಣೆಯಲ್ಲಿ ದಾಳೆ ನಡೆಸಿತು. ಶನಿವಾರ ಬೆಳಿಗ್ಗೆ 11:00ರ ಸುಮಾರಿಗೆ ಸೈನಿಕರು ತಮ್ಮ ಪ್ರದೇಶವನ್ನು ಸಮೀಪಿಸುತ್ತಿರುವ ಅನುಮಾನಾಸ್ಪದ ಬೈಕ್​ ಸವಾರನನ್ನು ಗಮನಿಸಿದಾಗ ಕಾರ್ಯಾಚರಣೆಯು ಪೂರ್ಣವಾಗಿ ತೆರೆದುಕೊಂಡಿದೆ.

ವಿಚಾರಣೆಯ ನಂತರ ಸವಾರನು ಭಯಭೀತನಾಗಿ ಕಾಣಿಸಿಕೊಂಡಿದ್ದೆ, ಅವನ ವಾಹನದ ಸಂಪೂರ್ಣ ಹುಡುಕಾಟಕ್ಕೆ ಕಾರಣವಾಯಿತು ಎನ್ನಲಾಗಿದೆ. ಹುಡುಕಾಟದಲ್ಲಿ ವ್ಯಕ್ತಿಯ ಸೊಂಟದ ಸುತ್ತ ಕಟ್ಟಲಾದ ಬಟ್ಟೆಯ ಬೆಲ್ಟ್‌ನಲ್ಲಿ ಬಚ್ಚಿಟ್ಟಿದ್ದ 17 ಚಿನ್ನದ ಬಾರ್​ಗಳು ಪತ್ತೆಯಾಗಿವೆ.

ಕಳ್ಳಸಾಗಣೆದಾರನನ್ನು ಅಜರ್ ಮಂಡಲ್ (27) ಎಂದು ಗುರುತಿಸಲಾಗಿದ್ದು, ಉತ್ತರ 24 ಪರಗಣ ಜಿಲ್ಲೆಯ ರಾಜ್‌ಕೋಲ್ ಗ್ರಾಮದ ಹೂ ಬೆಳೆಗಾರ ಎಂದು ವರದಿ ಉಲ್ಲೇಖಿಸಿದೆ. ವಿಚಾರಣೆ ವೇಳೆ ಮಂಡಲ್ ಕಳೆದ ಕೆಲವು ದಿನಗಳಿಂದ ಗಡಿಯಾಚೆಗಿನ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನ್ನು ಎಂಬುದನ್ನು ಒಪ್ಪಿಕೊಂಡಿದ್ದಾನೆ.

ಬಾಂಗ್ಲಾದೇಶದ ಮಟಿಲಾ ಗ್ರಾಮದ ನಿವಾಸಿ ಆಲಂ ಮಂಡಲ್ ಎಂಬಾತನಿಂದ ಚಿನ್ನದ ಬಾರ್​ಗಳನ್ನು ಪಡೆದಿರುವುದಾಗಿ ಆತ ಬಹಿರಂಗಪಡಿಸಿದ್ದಾನೆ. ಈ ಬಂಗಾರವನ್ನು ಬಂಗಾಂವ್‌ನಲ್ಲಿರುವ ಮತ್ತೊಬ್ಬ ಕಳ್ಳಸಾಗಣೆದಾರನಿಗೆ ತಲುಪಿಸುವಂತೆ ಕೇಳಿಕೊಂಡಿದ್ದ ಎಂದು ಹೇಳಿದ್ದಾನೆ. ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಅಧಿಕಾರಿಗಳು ಕಳ್ಳಸಾಗಣೆದಾರ ಮತ್ತು ಚಿನ್ನವನ್ನು ಕೋಲ್ಕತ್ತಾದ ಕಸ್ಟಮ್ಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net