More

    ಬಾಲಿವುಡ್​ ನಟ ರಾಜ್ ಕಿರಣ್ ಏನಾದರು? ಅವರ ಪುತ್ರಿ ಮಾಡ್ತಿರುವುದೇನು?

    ಮುಂಬೈ: ಚಿತ್ರನಟ, ನಟಿಯರ ಮಕ್ಕಳು ಸಹ ನಟ, ನಟಿಯಾಗುವುದು ಸಹಜ. ಆದರೆ ಬಾಲಿವುಡ್ 80 ರ ದಶಕದಲ್ಲಿ ಬಾಲಿವುಡ್​ ಚಲನಚಿತ್ರಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ರಾಜ್ ಕಿರಣ್ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅವರ ಪುತ್ರಿ ರಿಷಿಕಾ ಮಹತಾನಿ ಈಗ ಸಾಮಾನ್ಯ ಜನರಂತೆ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

    ಇದನ್ನೂ ಓದಿ: 50ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ ಅರೆಸ್ಟ್
    ರಾಜ್ ಕಿರಣ್ ಸೂಪರ್‌ಹಿಟ್ ಚಲನಚಿತ್ರ ಕರ್ಜ್‌ನಲ್ಲಿ ರವಿ ವರ್ಮಾ ಪಾತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದರು. ರೊಮ್ಯಾಂಟಿಕ್ ನಾಯಕನೆಂದೇ ಪ್ರಸಿದ್ಧಿ ಪಡೆದಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ 100 ಚಿತ್ರಗಳಲ್ಲಿ ನಟಿಸಿದ್ದರು. ಒಮ್ಮೆ ಅವರು ಸತತ 8 ಹಿಟ್‌ ಚಿತ್ರಗಳನ್ನು ನೀಡಿದ್ದರು.

    ಇಂತಹ ನಟ ಒಮ್ಮೆ ಖಿನ್ನತೆಗೆ ಜಾರಿದರು. 2000 ರ ದಶಕದ ಆರಂಭದಲ್ಲಿ, ಅವರನ್ನು ಮುಂಬೈನ ಬೈಕುಲ್ಲಾ ಮಾನಸಿಕ ಆಶ್ರಯಕ್ಕೆ ಸೇರಿಸಲಾಯಿತು. ಆದರೆ ಅಂದಿನಿಂದ ಈ ನಟ ಇದ್ದಕ್ಕಿದ್ದಂತೆ ಕಾಣೆಯಾದರು.

    ವರ್ಷಗಳ ನಂತರ ರಾಜ್ ಕಿರಣ್​ರನ್ನು ಹುಡುಕುವಂತೆ ಅವರ ಸ್ನೇಹಿತೆ ದೀಪ್ತಿ ನವಲ್ ಫೇಸ್‌ಬುಕ್‌ನಲ್ಲಿ ಜನರಿಗೆ ಮನವಿ ಮಾಡಿದ್ದರು. ಇದಾದ ನಂತರ ಅವರು ನ್ಯೂಯಾರ್ಕ್‌ನಲ್ಲಿ ಕ್ಯಾಬ್ ಓಡಿಸುತ್ತಿದ್ದಾರೆ, ಅಟ್ಲಾಂಟಾದಲ್ಲಿ ಮಾನಸಿಕ ರೋಗಿಗಳ ಆಶ್ರಯದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ, ರಾಜ್ ಕಿರಣ್ ಅವರ ಪುತ್ರಿ ರಿಷಿಕಾ ಮಹತಾನಿ ಇದನ್ನು ಅಲ್ಲಗಳೆದಿದ್ದು, ಕುಟುಂಬದವರು ತಮ್ಮ ತಂದೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

    ಇದು ರಾಜ್​ ಕಿರಣ್​ ಕಥೆಯಾದರೆ, ಅವರ ಪುತ್ರಿ ರಿಷಿಕಾ ಮಹತಾನಿ ಇತರ ಸ್ಟಾರ್ ಮಕ್ಕಳಂತೆ ತನ್ನ ಜೀವನವನ್ನು ನಡೆಸುತ್ತಿಲ್ಲ. ಆಕೆ ತಂದೆಯ ಹೆಸರು ಬಳಸಿ ಹೀರೋಯಿನ್​ ಸಹ ಆಗಲಿಲ್ಲ. ಸಾಮಾನ್ಯ ಹುಡುಗಿಯಂತೆ ತನ್ನ ತಂದೆ ಹುಡುಕಾಟದಲ್ಲಿದ್ದಾಗ ಆಕೆ ಜನರ ಗಮನ ಸೆಳೆದರು. ಆದರೆ ಆ ನಿಟ್ಟಿನಲ್ಲಿ ಆಕೆ ಯಶಸ್ವಿಯಾಗಲಿಲ್ಲ ಎಂಬುದು ಬೇರೆ ವಿಚಾರ.

    ಹಾಗಾದರೆ ಪ್ರಸಿದ್ಧ ನಟನ ಮಗಳು ರಿಷಿಕಾ ಈಗ ಏನು ಮಾಡುತ್ತಿದ್ದಾಳೆಂಬ ಕುತೂಹಲವಿರಬಹುದು. ಆಕೆ ರಿಶ್ಫೈನ್ ಹೆಸರಿನ ಆಭರಣ ಮಾರಾಟದ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ತನ್ನ ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ರಿಷಿಕಾ ಮಹತಾನಿ ರವಿ ಶಾ ಅವರನ್ನು ಮದುವೆಯಾಗಿ ಚಿಕಾಗೋದಲ್ಲಿ ವಾಸಿಸುತ್ತಿದ್ದಾರೆ.

    ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿದ ಪೊಲೀಸರು: ಕಾರಣ ಇದೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts