ಅತ್ತೆಯ ಮನೆಗೆ ಹೆಲಿಕಾಪ್ಟರ್​ನಲ್ಲಿ ಎಂಟ್ರಿ ಕೊಟ್ಟ ಅಳಿಯ; ಕುಟುಂಬಸ್ಥರಿಗೆ ಶಾಕ್​!: Video Viral

dk-2025-04-08t171952431-67f50d689a2cf
Published on

Video Viral : ಇತ್ತೀಚಿನ ದಿನಗಳಲ್ಲಿ ಭಾರತೀಯ ಮದುವೆಗಳು ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇವೆ. ಇದೀಗ ಇಲ್ಲೊಂದು ಮದುವೆಯಲ್ಲಿ ಮಧುಮಗಳ ಹಾಗೂ ವರ ತಮ್ಮ ಅತ್ತೆ ಮೆನೆಗೆ ಹೊಗಲು ಹೆಲಿಕ್ಯಾಪ್ಟರ್​ ಏರಿದ್ದಾರೆ. ಈ ಮದುವೆಯ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್​ ಆಗಿದೆ.

ಹೌದು, ಸಾಮಾನ್ಯವಾಗಿ, ಮದುವೆಯ ನಂತರ, ನವವಿವಾಹಿತರನ್ನು ಕಾರು, ಖಾಸಗಿ ಮಿನಿಬಸ್, ರೈಲು ಅಥವಾ ಆಟೋದಲ್ಲಿ ಅವರ ಅತ್ತೆಯ ಮನೆಗೆ ಕಳುಹಿಸಲಾಗುತ್ತದೆ. ಆದರೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನವವಿವಾಹಿತರನ್ನು ಹೆಲಿಕಾಪ್ಟರ್ ಮೂಲಕ ಅವರ ಅತ್ತೆ-ಮಾವನ ಮನೆಗಳಿಗೆ ಕಳುಹಿಸಲಾಗುತ್ತಿದೆ.

ನಡೆದಿದ್ದೇನು..?

ಹೌದು, ಹರಿಯಾಣ ನುಹ್ ಜಿಲ್ಲೆಯ ತವಾಡು ಪಟ್ಟಣದಲ್ಲಿರುವ ತನ್ನ ಅತ್ತೆ-ಮಾವನ ಬಳಿಗೆ ನಾಟ್ ಸಮುದಾಯಕ್ಕೆ ಸೇರಿದ ಕರಿಷ್ಮಾ ಎಂಬ ನವವಿವಾಹಿತ ವಧುವನ್ನು ಕಳುಹಿಸಲು ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ಅನ್ನು ಸ್ಥಾಪಿಸಲಾಗಿತ್ತು. ಆದಾಗ್ಯೂ, ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದ ದಂಪತಿಗಳನ್ನು ನೋಡಲು ಸ್ಥಳೀಯರೆಲ್ಲರೂ ಹೆಲಿಪ್ಯಾಡ್‌ಗೆ ಬಂದರು. ಇಡೀ ಪ್ರದೇಶ ಜನರಿಂದ ತುಂಬಿತ್ತು. ಅಲ್ಲಿಂದ ನವದಂಪತಿಗಳು ಹೆಲಿಕಾಪ್ಟರ್ ಮೂಲಕ ತಮ್ಮ ಅತ್ತೆಯ ಮನೆಗೆ ತೆರಳಿದ್ದು ಕಂಡುಬಂದಿದೆ.

ಇನ್ನುಅತ್ತೆ ಮಾವನ ಮನೆಯಲ್ಲಿ ಹೆಲಿಪ್ಯಾಡ್ ಲ್ಯಾಂಡಿಂಗ್ ಪ್ರದೇಶದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಜನರು ಕಿರುಚುತ್ತಾ ವಿಡಿಯೋ ತೆಗೆಯುತ್ತಿದ್ದರು. ಇವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಈಗ ವೈರಲ್ ಆಗಿದೆ. ಆದಾಗ್ಯೂ, ಕಳೆದ ಎರಡು ತಿಂಗಳಲ್ಲಿ ಈ ಜಿಲ್ಲೆಯಲ್ಲಿ ನವವಿವಾಹಿತರನ್ನು ಹೆಲಿಕಾಪ್ಟರ್ ಮೂಲಕ ಅವರ ಅತ್ತೆಯ ಮನೆಗೆ ಕಳುಹಿಸಲಾಗುತ್ತಿರುವುದು ಇದು ನಾಲ್ಕನೇ ಬಾರಿಯಂತೆ!.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net