ವಿಮಾನ, ರೈಲು ಮತ್ತು ಬಸ್​ಗಳಲ್ಲಿ ಮಕ್ಕಳಿಗೆ ಟಿಕೆಟ್​ ಖರೀದಿಸುವ ಅಗತ್ಯವಿದೆಯೇ!; ಯಾವ ವಯೋಮಿತಿಗೆ ಪ್ರಯಾಣ ದರ ಎಷ್ಟಿದೆ ತಿಳಿಯಿರಿ.. | Tickets

dk-2025-04-08t154531260-67f4f76346ebf
Published on

Tickets : ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಕ್ಕಳಿಗೆ ಆಫ್​​ ಟಿಕೆಟ್​ ಅನ್ನು ಕಂಡಕ್ಟರ್​ ತೆಗೆದುಕೊಳ್ಳೋದು ಸಾಮಾನ್ಯವಾಗಿ ಎಲ್ಲರು ಗಮನಿಸಿರುತ್ತೆವೆ.ಆದರೆ, ಯಾವ ವಯಸ್ಸಿಗೆ ಎಷ್ಟು? ಟಿಕೆಟ್​ ಕೊಳ್ಳಬೇಕು ಎಂಬುದು ಸೇರಿ ವಿಮಾನ, ರೈಲುಗಳಲ್ಲಿ ಮಕ್ಕಳಿಗೆ ಟಿಕೆಟ್​​ ಕೊಳ್ಳಬೇಕೆ ಎಂಬುದು ಬಹತೇಕರಿಗೆ ಗೊತ್ತಿಲ್ಲ. ಇದೀಗ ಯಾವ ವಯಸ್ಸಿನ ಮಕ್ಕಳಿಗೆ ಪ್ರಯಾಣದ ದರ(ಟಿಕೆಟ್​) ಇದೆ ಎಂಬುದು ತಿಳಿಯೋಣ.

ಭಾರತದಲ್ಲಿ ದಿನನಿತ್ಯ ಬಸ್ಸು, ರೈಲು ಹಾಗೂ ವಿಮಾನ ಸೇರಿದಂತೆ ಇತರ ಸಾರಿಗೆಗಳ ಸಹಾಯದಿಂದ ಕೋಟ್ಯಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ. ಈ ಕೋಟ್ಯಾಂತರ ಪ್ರಯಾಣಿಕರಲ್ಲಿ ಪಾಲಕರ ಜತೆ ಲಕ್ಷಾಂತರ ಚಿಕ್ಕ-ಚಿಕ್ಕ ಮಕ್ಕಳು ಕೂಡ ಪ್ರಯಾಣಸುತ್ತವೆ. ಚಿಕ್ಕ ಮಕ್ಕಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಸರ್ಕಾರ ಮತ್ತು ಎರ್​ಲೈನ್ಸ್​ ಮಕ್ಕಳ ಪ್ರಯಾಣ ಶುಲ್ಕ ದರ ವಿಚಾರದಲ್ಲಿ ನಿಯಮಗಳೇನು ಹೇಳುತ್ತವೆ ನೋಡೋಣ.

ವಿಮಾನ ಪ್ರಯಾಣ ದರ

ಒಂದ ಚಿಕ್ಕ ಮಗು ವಿಮಾನದಲ್ಲಿ ಪ್ರಯಾಣದಲ್ಲಿ ಮಾಡಿದರೆ 2 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ(ಟಿಕೆಟ್​ ದರ) ವಿಧಿಸುದಿಲ್ಲ. ಸಾಮಾನ್ಯವಾಗಿ ಎಲ್ಲಾ ವಿಮಾನಗಳಲ್ಲಿ ಬಹತೇಕ ಇದೇ ನಿಯಮವಿರುತ್ತದೆ. ಕೆಲ ವಿಮಾಗಳಲ್ಲಿ ಆಫರ್​ ಸಲುವಾಗಿ ಮೂರರಿಂದ ನಾಲ್ಕು ವರ್ಷದ ವರೆಗೆ ಶುಲ್ಕ ವಿಧಿಸಲ್ಲ.

ರೈಲು ಪ್ರಯಾಣ ದರ

ರೈಲಿನ ವಿಚಾರಕ್ಕೆ ಬರುವುದಾರೆ ಕುಟುಂಬದ ಜತೆಯಲ್ಲಿರುವ ಮಗುವಿಗೆ 5 ವರ್ಷದೊಳಗೆ ಮಗುವಿಗೆ ಟಿಕೆಟ್​ ಖರೀಸುವ ಅವಶ್ಯಕತೆ ಇಲ್ಲ. ಪ್ರತ್ಯೇಕ ಅಸನ(ಸೀಟ್​) ಮಗುವಿಗೆ ಬೇಕಿದ್ರೆ ಮಾತ್ರ ಆಫ್​ ಟಿಕೆಟ್​ ಖರೀದಿಸಬೇಕುನ ಎಂದು ರೈಲ್ವೆ ನಿಯಮ ಹೇಳುತ್ತದೆ. ಮಗುವಿಗೆ 12 ವರ್ಷ ಮೆಲ್ಪಟ್ಟಿದ್ದರೆ ಮಾತ್ರ ಪೂರ್ಣ ಟಿಕೆಟ್​ ಕೊಳ್ಳಬೇಕು.

ಬಸ್​ ಪ್ರಯಾಣ ದರ

ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್​ ವಿಷಯದಲ್ಲಿ ವಿಭಿನ್ನ ನಿಯಮಗಳು ಇರಬಹುದು. ಸಾಮಾನ್ಯವಾಗಿ 5 ವರ್ಷದವರೆಗಿನ ಮಕ್ಕಳಿಗೆ ಆಸನಗಳಿಲ್ಲದಿದ್ದರೆ, ಪ್ರಯಾಣ ದರವನ್ನು ಪಾವತಿಸಲಾಗುವುದಿಲ್ಲ. ಆದರೆ, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಬೆಲೆಗೆ ಟಿಕೆಟ್ ನೀಡಲಾಗುತ್ತದೆ. ಪ್ರಯಾಣಿಸುವ ಮೊದಲು, ನೀವು ಈ ವಿಷಯವನ್ನು ವಿಮಾನಯಾನ ಸಂಸ್ಥೆ ಮತ್ತು ಬಸ್ ನಿರ್ವಾಹಕರೊಂದಿಗೆ ಪರಿಶೀಲಿಸಬೇಕು. ರೈಲು ನಿಯಮಗಳನ್ನು ಭಾರತೀಯ ರೈಲ್ವೆ ಜಾರಿಗೊಳಿಸುತ್ತಿದ್ದು. ಇದು ಎಲ್ಲಾ ರೈಲುಗಳಲ್ಲಿ ಅನ್ವಯಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net