ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ...!

Porn Ad
Published on

ನವದೆಹಲಿ: ಸರ್ಕಾರಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವವರು ಸಾರ್ವಜನಿಕರಿಗೆ ಬುದ್ಧ ಹೇಳುವ ಸ್ಥಾನದಲ್ಲಿರಬೇಕು. ಹೆಚ್ಚು ಜನರನ್ನು ತಲುಪಬೇಕಾದ ಕಾರಣ ಜನಪ್ರಿಯರಾಗಿಯೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಪಕ್ಷ ಅಥವಾ ಸಿದ್ಧಾಂತಗಳೊಂದಿಗೆ ಗುರುತಿಸಿಕೊಂಡಿರಬಾರದು. ಜತೆಗೆ ವಿವಾದಗಳಿಗೆ ಸಿಲುಕಿರಬಾರದು. ಆದರೆ, ಇಂಥ ಜಾಹೀರಾತುಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದೇ ವಿವಾದಕ್ಕೆ ಕಾರಣವಾಗುತ್ತದೆ.

ನ್ಯೂಜಿಲೆಂಡ್​ನಲ್ಲಿ ಸರ್ಕಾರ ಸರಣಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ. ಅಂಥ ಒಂದು ಜಾಹೀರಾತಿನಲ್ಲಿ ನೀಲಿ ಚಿತ್ರ ತಾರೆಯರನ್ನು ಬಳಸಿಕೊಂಡಿದೆ. ಆದರೆ, ಸರ್ಕಾರದ ಈ ಕ್ರಮ ವಿವಾದಕ್ಕೆ ಒಳಗಾಗುವ ಬದಲು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಅಷ್ಟಕ್ಕೂ ಈ ಜಾಹೀರಾತಿನ ವಿಷಯ ವಸ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಆಶ್ಲೀಲ ಚಿತ್ರಗಳ ವೀಕ್ಷಣೆ ಗೀಳು ಕುರಿತದ್ದಾಗಿದೆ. ಅಶ್ಲೀಲ ಚಿತ್ರಗಳು ಹಾಗೂ ನಿಜ ಜೀವನದಲ್ಲಿನ ಲೈಂಗಿಕ ಸಂಬಂಧ ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಸಂದೇಶ ನೀಡುತ್ತದೆ.

ನೀಲಿ ಚಿತ್ರ ತಾರೆಯರಾದ ಸ್ಯೂ ಹಾಗೂ ಡೆರೆಕ್​ ನಗ್ನರಾಗಿ ಮನೆಯೊಂದರ ಬಳಿ ಬಂದು ಕರೆ ಗಂಟೆ ಒತ್ತುತ್ತಾರೆ. ತಾಯಿ ಪಾತ್ರದಲ್ಲಿ ನಟಿಸಿರುವ ಹಾಸ್ಯ ಕಲಾವಿದೆ ಜಸ್ಟಿನ್​ ಸ್ಮಿತ್​ ಬಾಗಿಲು ತೆರೆದಾಗ ಅಚ್ಚರಿಗೊಳಗಾಗುತ್ತಾಳೆ. ನಮ್ಮನ್ನು ನೋಡುತ್ತಿರುವ ನಿಮ್ಮ ಮಗನನ್ನು ಭೇಟಿಯಾಗಬಹುದೇ ಎಂದು ಕೇಳುತ್ತಾರೆ. ತಾಯಿ ಕೂಗಿದಾಗ ಬಾಲಕನೊಬ್ಬ ಲ್ಯಾಪ್​ಟಾಪ್​ ಹಿಡಿದು ಬರುತ್ತಾನೆ.

ನಿಮ್ಮ ಮಗ ಲ್ಯಾಪ್​ಟಾಪ್​, ಐಪಾಡ್​, ಟಿವಿ, ಪ್ಲೇಸ್ಟೇಷನ್​, ಸ್ಮಾರ್ಟ್​ಫೋನ್​ನಲ್ಲಿ ಮೊದಲಾದ ಸಾಧನಗಳಲ್ಲಿ ನಮ್ಮನ್ನು ನೋಡುತ್ತಾನೆ. ಆದರೆ, ಅಶ್ಲೀಲ ಚಿತ್ರಗಳು ಎಷ್ಟು ಅವಾಸ್ತವ ಎನ್ನುವುದನ್ನು ಆತನಿಗೆ ತಿಳಿಸಬೇಕಿದೆ ಎಂದು ಹೇಳುತ್ತಾರೆ. ಲೈಂಗಿಕತೆಗೆ ಯಾರ ಒಪ್ಪಿಗೆಯೂ ಬೇಕಿಲ್ಲ. ನೇರವಾಗಿ ಕೃತ್ಯಕ್ಕೆ ಇಳಿಯುತ್ತೇವೆ. ಆದರೆ, ಸಂಬಂಧಗಳು ಎಷ್ಟು ಮುಖ್ಯ ಎನ್ನುವುದನ್ನು ಆತನಿಗೆ ತಿಳಿಸಬೇಕಿದೆ ಎನ್ನುತ್ತಾರೆ ನೀಲಿ ಚಿತ್ರ ತಾರೆಯರು.

ಮಕ್ಕಳು ತಮ್ಮದೇ ಅದ ಎಲೆಕ್ಟ್ರಾನಿಕ್​ ಸಾಧನಗಳನ್ನು ಹೊಂದಿರುವ ಈ ಕಾಲದಲ್ಲಿ ನೀಲಿಚಿತ್ರ ವೀಕ್ಷಿಸದಂತೆ ತಡೆಯಲು ಯಾರಿಗೂ ಸಾಧ್ಯವಿಲ್ಲ. ಬದಲಾಗಿ ಅವರಿಗೆ ಅರಿವು, ಶಿಕ್ಷಣ ನೀಡಬೇಕಾದ ಅಗತ್ಯವನ್ನು ಈ ಜಾಹೀರಾತು ಬಿಂಬಿಸಿದೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈವರೆಗೆ ಕೋಟ್ಯಂತರ ಜನ ವೀಕ್ಷಿಸಿರುವ ಜಾಹೀರಾತು ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net