More

    ವೃದ್ಧನ ಕರೊನಾ ಚಿಕಿತ್ಸೆಗೆ ಖರ್ಚಾದ ಮೊತ್ತದಿಂದ ಆಸ್ಪತ್ರೆಯನ್ನೇ ಕಟ್ಟಿಸಬಹುದಿತ್ತು…!

    ನವದೆಹಲಿ: ಹಿರಿಯರು ಕರೊನಾ ಸೋಂಕಿಗೆ ಸುಲಭವಾಗಿ ಒಳಗಾಗುತ್ತಾರೆ. ಹೀಗಾಗಿ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಗುತ್ತದೆ.

    ಈ ನಡುವೆ, ಸೋಂಕಿಗೆ ಒಳಗಾದ ಹಿರಿಯರು ಗುಣಮುಖರಾಗುವುದು ಸಂತಸದ ಸಂಗತಿಯೇ. ಆದರೆ, ಇಲ್ಲಿ ಗೊತ್ತಾಗದ ವಿವರ ಎಂದರೆ ಅವರ ಚಿಕಿತ್ಸೆ ವೆಚ್ಚವಾದ ಮೊತ್ತವೆಷ್ಟು ಎಂಬುದು.

    ಅಮೆರಿಕದ ಸಿಯಾಟಲ್​ನ 70 ವರ್ಷದ ವ್ಯಕ್ತಿಯೊಬ್ಬ ಕರೊನಾದಿಂದ ಗುಣಮುಖರಾಗಿದ್ದಾರೆ. ಅವರಿಗೆ ನೀಡಲಾದ ಬಿಲ್​ನ ವಿವರ ಕೇಳಿದರೆ ಖಂಡಿತ ತಲೆ ತಿರುಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆತ ನೀಡಿದ ಮೊತ್ತದಿಂದ ಆಸ್ಪತ್ರೆಯನ್ನೇ ಕಟ್ಟಿಸಬಹುದಿತ್ತು….! ಅಲ್ಲದೇ, ಜೀವಕ್ಕೆ ಭಾರಿ ಬೆಲೆ ಇದೆ ಎನ್ನುವುದು ಗೊತ್ತಾಗುತ್ತದೆ.

    ಇದನ್ನೂ ಓದಿ; ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ? 

    ಹಿರಿಯ ನಾಗರಿಕ ಮೈಕಲ್​ ಫ್ಲೋರ್​ ಸಿಯಾಟಲ್​ ಇಸಾಖ್​ ಆಸ್ಪತ್ರೆಗೆ ಮಾರ್ಚ್​ 4ರಂದು ದಾಖಲಾಗಿದ್ದರು. ಆಸ್ಪತ್ರೆಯಲ್ಲಿ 62 ದಿನಗಳವರೆಗೆ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಕೋವಿಡ್​ ಚಿಕಿತ್ಸೆಗಾಗಿ ಅತಿ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ವ್ಯಕ್ತಿ ಎಂಬ ಖ್ಯಾತಿಯೂ ಇವರದ್ದಾಗಿದೆ.
    ಡಿಸ್ಚಾರ್ಜ್​ ವೇಳೆಗೆ ಮೈಕಲ್​ ಕೈಗೆ ಬಿಲ್​ ಅಲ್ಲ ಬದಲಿಗೆ 180 ಪುಟಗಳ ಪುಸ್ತಕವನ್ನೇ ನೀಡಲಾಗಿತ್ತು. ಒಟ್ಟಾರೆ 1.12 ಮಿಲಿಯನ್​ ಡಾಲರ್​ (ಅಂದಾಜು 8.14 ಕೋಟಿ ರೂ.) ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನೋಡಿ ಮೈಕಲ್​ಗೆ ಹೃದಯಾಘಾತವಾಗಿಲ್ಲ ಎನ್ನುವುದು ಮಾತ್ರ ಸಂತಸದ ಸಂಗತಿಯೇ ಸರಿ.

    ಇದನ್ನೂ ಓದಿ; ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ಬಿಲ್​ನಲ್ಲಿ ಒಟ್ಟಾರೆ 3,000 ಐಟಂಗಳ ವಿವರವಿತ್ತು. 42 ದಿನಗಳ ಕಾಲ ವೆಂಟಿಲೇಟರ್​ ಹೊಂದಿದ್ದ ಐಸೋಲೇಷನ್​ ವಾರ್ಡ್​ನಲ್ಲಿದ್ದರು. 29 ದಿನಗಳ ಕಾಲ ಅವರಿಗೆ ವೆಂಟಿಲೇಟರ್​ ನೀಡಲಾಗಿತ್ತು. ಇದರ ವೆಚ್ಚ 4 ಲಕ್ಷ ಡಾಲರ್​ ಆಗಿತ್ತು. ಒಂದು ವೇಳೆ ಖರೀದಿಸುವುದಾದರೆ ಅದರ ಬೆಲೆ 82 ಸಾವಿರ ಡಾಲರ್​. ಆಸ್ಪತ್ರೆಗೆ ಪಾವತಿಸಿದ ಶುಲ್ಕದಲ್ಲಿ ಅಂಥ ನಾಲ್ಕು ವೆಂಟಿಲೇಟರ್​ ಖರೀದಿಸಬಹುದಿತ್ತು. ಇನ್ನು, ಔಷಧ, ಲಸಿಕೆಗಳಿಗೆ ಖರ್ಚಾದ ಮೊತ್ತ ಕೇವಲ ಒಂದು ಲಕ್ಷ ಡಾಲರ್​. ಇನ್ನುಳಿದದ್ದು, ಆಸ್ಪತ್ರೆ ವಾಸ, ವೈದ್ಯರ ಶುಲ್ಕಕ್ಕೆ ಖರ್ಚಾಗಿದೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts