ಕವಿಪವಿಗೆ ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಚಂದ್ರಕಾಂತ ಸೊನ್ನದ ಅವಿರೋಧ ಆಯ್ಕೆ

Kavipavi
ಚಂದ್ರಕಾಂತ ಸೊನ್ನದ, ಲಿಂಗರಾಜ್ ಬಡಿಗೇರ್.
Published on

ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ(ಕವಿಪವಿ ಕೂಟ)ದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಸೊನ್ನದ ಹಾಗೂ ಉಪಾಧ್ಯಕ್ಷರಾಗಿ ಲಿಂಗರಾಜ್ ಬಡಿಗೇರ್ ಮತ್ತು ಸುಶೀಲಾ ಡೋಣೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಪ್ರೆಸ್​​ಕ್ಲಬ್​​ನಲ್ಲಿ ಶನಿವಾರ ಸಂಜೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಚಂದ್ರಕಾಂತ ಸೊನ್ನದ ಅವರನ್ನು ಅಧ್ಯಕ್ಷರಾಗಿ, ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ಗ್ರೂಪ್​ನ ಕನ್ನಡಪ್ರಭ.ಕಾಮ್ ಚೀಫ್ ಕಂಟೆಂಟ್ ಎಡಿಟರ್ ಲಿಂಗರಾಜ್ ಬಡಿಗೇರ್ ಹಾಗೂ ಪ್ರಜಾವಾಣಿಯ ಹಿರಿಯ ಪತ್ರಕರ್ತೆ ಸುಶೀಲಾ ಡೋಣೂರ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಖಾಸಗಿ ಕಂಪನಿಯಲ್ಲಿ ಪಿಆರ್​ಒ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಶಿರಿಯಣ್ಣವರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿ ಬೆಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿರುವ ಹಿರಿಯರು ಸೇರಿಕೊಂಡು 1991ರಲ್ಲಿ ಈ ಸಂಘಟನೆ ಸ್ಥಾಪಿಸಲಾಯಿತು. ಹಲವು ಸಮಾಜಮುಖಿ ಕಾರ್ಯಗಳು ಸೇರಿದಂತೆ ತಮ್ಮ ವಿಭಾಗದ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿರುವ ಕವಿಪವಿ ಈಗ ಸುಮಾರು 300 ಜನ ಪತ್ರಕರ್ತರ ಸಂಘಟನೆಯಾಗಿ ಬೆಳೆದು ನಿಂತಿದೆ.

ಅವಿರೋಧ ಆಯ್ಕೆಗೊಂಡಿರುವ ಪದಾಧಿಕಾರಿಗಳು

ಅಧ್ಯಕ್ಷ- ಚಂದ್ರಕಾಂತ ಸೊನ್ನದ; ಉಪಾಧ್ಯಕ್ಷ- ಲಿಂಗರಾಜ್ ಬಡಿಗೇರ, ಸುಶೀಲಾ ಡೋಣೂರ; ಖಜಾಂಚಿ- ಅನಿಲ ಬಾಸೂರ; ಪ್ರಧಾನ ಕಾರ್ಯದರ್ಶಿ- ಪ್ರವೀಣ್ ಶಿರಿಯಣ್ಣವರ; ಕಾರ್ಯದರ್ಶಿ- ರವಿ ಎಸ್., ಮಂಜುನಾಥ ಭದ್ರಶೆಟ್ಟಿ; ಸದಸ್ಯರು- ಮುತ್ತುರಾಜ್ ಸುಳ್ಳದ, ವಿನಾಯಕ ವಿಮೆಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net