ಗನ್​ ಮತ್ತು ಗುಲಾಬಿಯ ಸುತ್ತ ; ಅಂಡರ್​ವರ್ಲ್ಡ್​ ಲವ್​ಸ್ಟೋರಿಯಲ್ಲಿ ಅರ್ಜುನ್​, ಯಶ್ವಿಕಾ

Guns and Roses_(116)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ವಿಜಯದಶಮಿ', "ತವರಿಗೆ ಬಾ ತಂಗಿ' ಸೇರಿ ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ಖ್ಯಾತಿ ಕಥೆಗಾರ ಅಜಯ್​ ಕುಮಾರ್​ ಅವರಿಗೆ ಸಲ್ಲುತ್ತದೆ. ಇದೀಗ ಅವರ ಪುತ್ರ ಅರ್ಜುನ್​ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಹೆಸರು "ಗನ್ಸ್​ ಆ್ಯಂಡ್​ ರೋಸಸ್​'. ಹಲವು ವರ್ಷಗಳಿಂದ ಸಹ&ನಿರ್ದೇಶಕನಾಗಿ ಅನುಭವ ಪಡೆದಿರುವ ಶ್ರೀನಿವಾಸ್​ ಕುಮಾರ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಮೊದಲ ಚಿತ್ರವಿದು.

ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನಡೆಯಿತು. ನಾಯಕ ಅರ್ಜುನ್​ಗೆ ಯಶ್ವಿಕ ನಿಷ್ಕಲ ನಾಯಕಿಯಾಗಿದ್ದಾರೆ. "ಶೀರ್ಷಿಕೆಯೇ ಹೇಳುವಂತೆ ಅಂಡರ್​ವರ್ಲ್ಡ್​ ಮತ್ತು ಪ್ರೇಮಕಥೆ ಎರಡು ಟ್ರಾ$್ಯಕ್​ಗಳಲ್ಲಿ ಚಿತ್ರದ ಕಥೆ ಸಾಗುತ್ತದೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಶರತ್​ ತಿಳಿಸಿದರು. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎಂಬ ಕಂಡೀಶನ್​ ಮೇಲೆ ಸಿನಿಮಾ ನಿರ್ಮಿಸುತ್ತಿರುವುದಾಗಿ ಬಿಲ್ಡರ್​ ನಟರಾಜ್​ ತಿಳಿಸಿದರು.

ಚಿತ್ರಕ್ಕೆ ಶಶಿಕುಮಾರ್​ ಸಂಗೀತ, ಜನಾರ್ಧನ್​ ಛಾಯಾಗ್ರಹಣ, ಸಂಜೀವ್​ ರೆಡ್ಡಿ ಸಂಕಲನ, ಥ್ರಿಲ್ಲರ್​ ಮಂಜು ಸಾಹಸ ನಿರ್ದೇಶನವಿರಲಿದೆ. ಅರ್ಜುನ್​, ಯಶ್ವಿಕ ಜತೆ ಜೀವನ್​ ರಿಚಿ, ಹರೀಶ್​ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net