

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯಲ್ಲು ಪುಣ್ಯಕೋಟಿ ನಿರ್ದೇಶನದ ಚಿತ್ರ ಅವಳು ಲೈಲಾ ಅಲ್ಲ ನಾನ್ ಮಜ್ನು ಅಲ್ಲ. ಇತ್ತೀಚೆಗಷ್ಟೆ ಚಿತ್ರದ 'ನೀನು ಹೋಗೋ ದಾರೀಲಿ' ಡ್ಯುಯೆಟ್ ಹಾಡನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಸಾಂಗ್ ರಿಲೀಸ್ ಮಾಡಿ ಶುಭ ಹಾರೈಸಿದರು. ಅಜಯ್ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ನಿಹಾರಿಕಾ, ಅಶ್ವಿನಿ ನಾಯಕಿಯರು.
ನಾಯಕ ಅಜಯ್ 'ಮಾತನಾಡಿ, 'ನನ್ನ ತಂದೆಯೂ ಒಬ್ಬ ರಂಗಭೂಮಿ ಕಲಾವಿದರು. ಅವರನ್ನು ನೋಡಿ ಬೆಳೆದ ನನಗೆ ನಟನೆ ಅಂದ್ರೆ ಮೊದಲಿಂದಲೂ ಬಹಳ ಇಷ್ಟ, ರಾಯಚೂರಿನಲ್ಲಿ ಕಾಲೇಜ್ ಮುಗಿಸಿ ಕೆಎಎಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದೆ, ಆಗಲೇ ನೀನಾಸಂ ಆಫರ್ ಬಂತು. ನಂತರ ನೀನಾಸಂನಲ್ಲಿ ಆಕ್ಟಿಂಗ್ ತರಬೇತಿ ಪಡೆದು, ಸಾಕಷ್ಟು ಆಡಿಷನ್ ಗಳನ್ನು ಅಟೆಂಡ್ ಮಾಡಿದೆ. ನಂತರ ನಾವೇ ಬಂಡವಾಳ ಹೂಡಿ ಸಿನಿಮಾ ಆರಂಭಿಸಿದೆವು. ಇದು 16ರಿಂದ 24 ವರ್ಷದ ಹುಡುಗ, ಹುಡುಗಿಯರ ಕಥೆ. ಸಂತು ಎಂಬ ಸಾಫ್ಟ್ ಹಾಗೂ ರಫ್ ಕ್ಯಾರೆಕ್ಟರ್ ಹುಡುಗನಾಗಿ ಎರಡು ಶೇಡ್ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಲವ್, ಸೆಂಟಿಮೆಂಟ್ ಜೊತೆಗೆ ಒಂದಷ್ಟು ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ.
ನಿರ್ದೇಶಕ ಯಲ್ಲು ಪುಣ್ಯಕೋಟಿ, 'ನಾನು ಮೂಲತಃ ಕೊಪ್ಪಳದವನು. ನನಗೆ ಕಥೆ ಬರೆಯೋ ಹವ್ಯಾಸ ಮೊದಲಿಂದಲೂ ಇತ್ತು. ನಿರ್ದೇಶನದ ಬಗ್ಗೆ ಹೈದರಾಬಾದ್ನಲ್ಲಿ ಒಂದಷ್ಟು ಕಲಿತೆ, ನಂತರ ಟಿವಿಯಲ್ಲಿ ಕೆಲಸ ಮಾಡುವಾಗ ಅಜಯ್ ಸಿಕ್ಕರು. ನಾನು ಮಾಡಿಕೊಂಡಿದ್ದ ಕಥೆಯನ್ನು ಹೇಳಿದಾಗ ಅವರೂ ಒಪ್ಪಿದರು. ಹಳ್ಳಿ ಮತ್ತು ನಗರದಲ್ಲಿ ನಡೆಯುವ ಕಥೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳುರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಸೆ.8ಕ್ಕ ಬಿಡುಗಡೆಯಾಗುತ್ತಿದೆ' ಎಂದು ಹೇಳಿದರು.