

ಬೆಂಗಳೂರು: ನಾಳೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹೊತ್ತಿನಲ್ಲಿ ಟ್ವೀಟರ್ ಮೂಲಕ ಅವರ ಪತ್ನಿ ವಿಶೇಷ ಮಾಹಿತಿ ಶೇರ್ ಮಾಡಿಕೊಂಡು ಅಚ್ಚರಿಯೊಂದು ಕಾದಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಫ್ಯಾನ್ಸ್ ಜೊತೆ ಕಿಚ್ಚನ ಹುಟ್ಟುಹಬ್ಬ ನಡೆಯಲಿದೆ. ಹೀಗಿರುವಾಗ ಸುದೀಪ್ ಬರ್ತ್‌ಡೇಗೆ ಪತ್ನಿ ಸರ್ಪ್ರೈಸ್ ಗಿಫ್ಟ್ ಕೊಡುವ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ.
ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ ಎಂದು ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.
ಜನ್ಮದಿನದ ಹೊಸ್ತಿಲಿನಲ್ಲಿ ‘ಅರಸು ಕ್ರಿಯೇಷನ್ಸ್’ ಸಂಸ್ಥೆ ಕಡೆಯಿಂದ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ. ಆಕಾಶದಲ್ಲಿನ ಒಂದು ನಕ್ಷತ್ರಕ್ಕೆ ಕಿಚ್ಚ ಸುದೀಪ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸುದೀಪ್ಗೆ ವಿಶೇಷವಾದ ಗೌರವ ಸಲ್ಲಿಸಲಾಗಿದೆ. ಇದರ ನಡುವೆಯೇ, ಇದೀಗ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಕುತೂಹಲದ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಸುದೀಪ್ ಅವರ ‘ವಿಕ್ರಾಂತ್ ರೋಣ’ ಬ್ಲಾಕ್ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತು. ಇದೀಗ ಟೈಟಲ್ ರಿವೀಲ್ ಆಗದ ಸಿನಿಮಾ ಒಂದರಲ್ಲಿ ಬಿಜಿಯಾಗಿದ್ದಾರೆ ಸುದೀಪ್. ಇದು ಅವರ 46ನೇ ಸಿನಿಮಾ ಆಗಿದೆ. ಸದ್ಯಕ್ಕೆ ಇದನ್ನು Kichcha 46 ಎಂದು ಕರೆಯಲಾಗುತ್ತಿದೆ.