

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರತಂಡ 'ಜೈಲರ್' ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 600 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಸಮೀಪದಲ್ಲಿದೆ.
ಸೆಪ್ಟೆಂಬರ್ 1 ರಂದು ಸನ್ ಪಿಕ್ಚರ್ಸ್ ಮುಖ್ಯಸ್ಥ, ಜೈಲರ್ ಸಿನಿಮಾ ನಿರ್ಮಾಪಕ ಕಲಾನಿತಿ ಮಾರನ್, ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಸಂತೋಷದಿಂದ ಅವರು ರಜನಿಕಾಂತ್ ಅವರಿಗೆ ಲಾಭದಿಂದ ಸ್ವಲ್ಪ ಮೊತ್ತವನ್ನು ಚೆಕ್ ಆಗಿ ನೀಡಿದರು. ಅಲ್ಲದೆ ಎರಡು ಹೊಸ ಬಿಎಂಡಬ್ಲ್ಯು ಕಾರುಗಳನ್ನು ತಂದಿದ್ದು, BMW i7 – Rs.1.95 ಕೋಟಿ, BMW x7 – Rs.1.24 ಕೋಟಿ ಕಾರನ್ನು ರಜನಿಕಾಂತ್ ಅವರು ನೋಡಿ BMW x7 ಅನ್ನು ಆಯ್ಕೆ ಮಾಡಿದ್ದಾರೆ. ನಿರ್ಮಾಪಕರು ಕಾರಿನ ಕೀ ಸಹಿತ ಚೆಕ್ ನೀಡಿದ್ದಾರೆ.
ಸನ್ ಪಿಕ್ಚರ್ಸ್ನ ಅಧಿಕೃತ ಖಾತೆಯು ಟ್ವಿಟರ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದೆ. 'ಕಲಾನಿಧಿ ಮಾರನ್, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿ, ಜೈಲರ್ ಐತಿಹಾಸಿಕ ಯಶಸ್ಸಿನ ಸಂಭ್ರಮಾಚರಣೆ ಮಾಡಿದ್ದಾರೆ' ಎಂದು ಶೀರ್ಷಿಕೆ ನೀಡಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಕಲಾನಿಧಿ ಮಾರನ್, ರಜನೀಕಾಂತ್ಗೆ ಚೆಕ್ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ.
ಈ ಚಿತ್ರವನ್ನು 200 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ರಮ್ಯಾ ಕೃಷ್ಣ, ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವ ರಾಜ್ಕುಮಾರ್ ಮತ್ತು ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಿನಿಮಾದ ಹೈಲೈಟ್ ಆಗಿತ್ತು. ನಿರ್ದೇಶಕ ನೆಲ್ಸನ್ ಇತ್ತೀಚೆಗಷ್ಟೇ ಈ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ತಲೈವಾ ಅಭಿಮಾನಿಗಳು ಖುಷಿಯಾಗಿದ್ದಾರೆ.