ಹರಿಣಗಳ ಬಳಿಕ ಬಾಂಗ್ಲಾದೇಶಕ್ಕೂ ಸೋಲುಣುಸಿದ ನೆದರ್ಲೆಂಡ್; ಡಚ್ಚರಿಗೆ 87 ರನ್ ಜಯ

netherland
Published on

ಕಲ್ಕತ್ತಾ: ಇಲ್ಲಿನ ಈಡೆನ್ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ನೆದರ್ಲೆಂಡ್​ ತಂಡವು ಬಾಂಗ್ಲಾದೇಶದ ವಿರುದ್ಧ 87ರನ್​ಗಳ ಭರ್ಜರಿ ಜಯಗಳಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್​ ತಂಡವು ನಾಯಕ ಸ್ಕಾಟ್​ ಎಡ್​ವರ್ಡ್ಸ್​ (68 ರನ್, 89 ಎಸೆತ, 6 ಬೌಂಡರಿ) ಅರ್ಧಶತಕದ ಫಲವಾಗಿ 50 ಓವರ್​ಗಳಲ್ಲಿ 229ರನ್​ಗಳಿಗೆ ಆಲೌಟ್​ ಆಯಿತು.

ಬಾಂಗ್ಲಾದೇಶ ಪರ ಮುಸ್ತಫಿಜುರ್ ರೆಹಮಾನ್ (10-1-36-2), ಶೊರಿಫುಲ್​ ಇಸ್ಲಾಂ (10-0-51-2), ಶಕಿಬ್ ಅಲ್ ಹಸನ್ (10-1-37-1), ಟಸ್ಕಿನ್ ಅಹಮದ್ (9-143-2), ಮಹದಿ ಹಸನ್ (7-0-40-2), ಮೆಹದಿ ಹಸನ್ ಮಿರಾಜ್ (4-0-17-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡವು ನೆದರ್ಲೆಂಡ್​ ಬೌಲರ್​ಗಳು ನಡೆಸಿದ ದಾಳಿಗೆ ರನ್​ ಗಳಿಸಲು ಪರದಾಡಿತ್ತು. ಅಂತಿಮವಾಗಿ 42.2 ಓವರ್​ಗಳಲ್ಲಿ 142 ರನ್​ಗಳಿಸಿ ಆಲೌಟ್​ ಆಗುವ ಮೂಲಕ 87 ರನ್​ಗಳ ಸೋಲೊಪ್ಪಿಕೊಂಡಿತ್ತು. ಹರಿಣಗಳ ಬಳಿಕ ಬಾಂಗ್ಲಾದೇಶಕ್ಕೂ ಅಚ್ಚರಿಯ ಸೋಲುಣುಸಿದ ನೆದರ್ಲೆಂಡ್ ಏಕದಿನ ವಿಶ್ವಕಪ್​ನಲ್ಲಿ ತನ್ನ ಎರಡನೇ ಗೆಲುವನ್ನು ಸಾಧಿಸಿತ್ತು.

ನೆದರ್ಲೆಂಡ್ ಪರ ಪೌಲ್​ ವೆನ್ ಮೀಕೆರೆನ್ (7.2-0-23-4), ಬಸ್​ ದೇ ಲಿಡೆ (7-0-25-2), ಕಾಲಿನ್ ಆ್ಯಕರ್​ಮನ್ (7-1-25-1), ಲೊಗನ್ ವ್ಯಾನ್ ಬೀಕ್ (9-1-30-1), ಆರ್ಯನ್ ದತ್ (10-3-26-1), ಶರಿಜ್ ಅಹಮದ್ (2-0-13-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net