More

    2 ಎಸೆತಗಳಲ್ಲಿ 21 ರನ್​ ಸಿಡಿಸಿ ವಿಶ್ವದಾಖಲೆ ಬರೆದ ಆಸೀಸ್​ ಬ್ಯಾಟ್ಸ್​ಮನ್

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ 5ರನ್​ಗಳ ಜಯ ಗಳಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕರಾದ ಟ್ರಾವಿಸ್ ಹೆಡ್ (109 ರನ್, 67 ಎಸೆತ, 10 ಬೌಂಡರಿ, 7 ಸಿಕ್ಸರ್), ಡೇವಿಡ್ ವಾರ್ನರ್ (81 ರನ್, 65 ಎಸೆತ, 5 ಬೌಂಡರಿ, 6 ಸಿಕ್ಸರ್) 175ರನ್​ಗಳ ಜತೆಯಾಟದ ಫಲವಾಗಿ 49.2 ಓವರ್​ಗಳಲ್ಲಿ 388 ರನ್​ ಗಳಿಸಿ ಆಲೌಟ್​ ಆಯಿತು.

    ಗಾಯದ ಸಮಸ್ಯೆಯಿಂದ ಬಳಲಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ 5 ಪಂದ್ಯಗಳಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 2 ಮಹತ್ತರ ದಾಖಲೆ ಬರೆಯುವ ಮೂಲಕ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

    ಇದನ್ನೂ ಓದಿ: ಟ್ರಾವಿಸ್ ಹೆಡ್​-ಆ್ಯಡಂ ಜಂಪಾ ಮಿಂಚು; ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ಗೆ 5ರನ್​ಗಳ ವಿರೋಚಿತ ಸೋಲು

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರಂಭಿಕರಾದ ಡೇವಿಡ್​ ವಾರ್ನರ್​ ಹಾಗೂ ಟ್ರಾವಿಸ್ ಹೆಡ್​ ಮೊದಲೆರಡು ಓವರ್​ಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಿದ್ದರು. 3ನೇ ಓವರ್​ನಲ್ಲಿ ನ್ಯೂಜಿಲೆಂಡ್‍ನ ವೇಗಿ ಮ್ಯಾಟ್ ಹೆನ್ರಿ ಎಸೆದ 2 ನೋಬಾಲ್‍ನ ಲಾಭ ಪಡೆದ ಟ್ರಾವಿಸ್ ಹೆಡ್ 2 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 2 ಎಸೆತಗಳಲ್ಲೇ 21 ರನ್​​ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ.

    ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿದ ಟ್ರಾವಿಸ್ ಹೆಡ್ ಮತ್ತೊಂದು ದಾಖಲೆ ಬರೆದಿದ್ದಾರೆ. ವಿಶ್ವಕಪ್​ನಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ (40 ಎಸೆತ, ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್​ (48 ಎಸೆತ), ಟ್ರಾವಿಸ್ ಹೆಡ್ (59 ಎಸೆತ), ಹೆನ್ರಿಚ್ ಕ್ಲಾಸೆನ್ ( 61 ಎಸೆತ), ರೋಹಿತ್ ಶರ್ಮಾ (63 ಎಸೆತ) ಏಕದಿನ ವಿಶ್ವಕಪ್​ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 5 ಬ್ಯಾಟ್ಸಮನ್​ಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts